ಮುಂದಿನ ಐದು ಐಪಿಎಲ್ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವ ಯಾರ ಪಾಲು? ಬಿಸಿಸಿಐ ಖಜಾನೆಗೆ ಬಂದ ಹಣ ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ಐಪಿಎಲ್ ಹಣದ ಹೊಳೆ ಹರಿಸುವ ಟೂರ್ನಿ ಎಂಬುದು ಮತ್ತೆ ಸಾಬೀತಾಗಿದೆ. ಕಾರಣ, 2018ರಿಂದ 2022ರ ವರೆಗಿನ ಐದು ಐಪಿಎಲ್ ಆವೃತ್ತಿಯ ಶಿರ್ಷಿಕೆ ಪ್ರಾಯೋಜಕತ್ವವನ್ನು ವಿವೊ ಮೊಬೈಲ್ ಕಂಪನಿ ಬಾಚಿಕೊಂಡಿದೆ. ಇದರಿಂದ 2199 ಕೋಟಿ ಹಣ ಬಿಸಿಸಿಐ ಖಜಾನೆಗೆ ಸೇರಲಿದೆ.

ಇಂದು ಪ್ರಕಟವಾದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಹಕ್ಕಿನ ಹರಾಜಿನಲ್ಲಿ ವಿವೊ ಇಂಡಿಯಾ 2199 ಕೋಟಿ ಬಿಡ್ ಮಾಡುವ ಮೂಲಕ ಈ ಹಕ್ಕನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಭಾರತ ತಂಡದ ಪ್ರಾಯೋಜಕತ್ವ ಪಡೆದಿರುವ ಒಪ್ಪೊ ಮೊಬೈಲ್ ಕಂಪನಿ ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಿ, 1430 ಕೋಟಿ ಬಿಡ್ ಮಾಡಿತ್ತು. ಈ ಹಿಂದೆ ಡಿಎಲ್ಎಫ್ ಹಾಗೂ ಪೆಪ್ಸಿ ಕಂಪನಿಗಳು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಹಕ್ಕನ್ನು ಪಡೆದಿದ್ದವು. ಇದಾದ ನಂತರ ವಿವೊ ಈ ಹಕ್ಕನ್ನು ಪಡೆದುಕೊಂಡಿದೆ. ಐಪಿಎಲ್ ವಿಶ್ವದ ಅತಿ ದೊಡ್ಡ ಟಿ20 ಕ್ರಿಕಟ್ ಟೂರ್ನಿಯಾಗಿದ್ದು, ಈ ಟೂರ್ನಿಯ ಶಿರ್ಷಿಕೆ ಪ್ರಾಯೋಜಕತ್ವದ ಹಕ್ಕಿಗೆ ಜಾಗತಿಕ ಕಂಪನಿಗಳು ತೀವ್ರ ಪೈಪೋಟಿ ನಡೆಸುತ್ತವೆ. ಈ ಬಾರಿ ವಿವೊ ಇಂಡಿಯಾ ಕಂಪನಿ ಈ ಹಕ್ಕನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Leave a Reply