ದಕ್ಷಿಣ- ಉತ್ತರ, ಹಿಂದಿ- ಪ್ರಾದೇಶಿಕ ಎಂಬ ಚರ್ಚೆ ಹೊತ್ತಲ್ಲಿ ನೀವು ನೋಡಬೇಕಾದ ಕಾಮಿಡಿ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಏರಿಕೆ ಬೇಡ ಎಂದು ವಿವಿಧ ಕನ್ನಡ ಪರ ಸಂಘಟನೆಗಳಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷಾಭಿಮಾನಿಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಯ ಜತೆಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬ ಚರ್ಚೆ ಹಾಗೂ ಪ್ರಾದೇಶಿಕತೆಯ ಕುರಿತಾದ ವಾದ ಪ್ರತಿವಾದಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ ಪ್ರಾದೇಶಿಕತೆ ಹಾಗೂ ಭಾಷೆಯ ಕುರಿತಾಗಿ ದಕ್ಷಿಣ ಭಾರತದವರು ಉತ್ತರ ಭಾರತದ ಭಾಷೆ ಹಿಂದಿಯನ್ನು ಏಕೆ ವಿರೋಧಿಸುತ್ತಿದ್ದಾರೆ. ಉತ್ತರ ಭಾರತದ ಮಂದಿ ದಕ್ಷಿಣ ಭಾರತದವರನ್ನು ಯಾವ ರೀತಿ ನೋಡುತ್ತಾರೆ ಹಾಗೂ ದಕ್ಷಿಣ ಭಾರತದ ಸಂಸ್ಕೃತಿಯನ್ನು ಬಾಲಿವುಡ್ ಮಂದಿ ಹೇಗೆಲ್ಲಾ ತಮ್ಮ ಸಿನಿಮಾಗಳಲ್ಲಿ ಬಿಂಬಿಸುತ್ತಾರೆ. ದಕ್ಷಿಣ ಭಾರತದವರು ಹಿಂದಿ ಬಂದರೂ ಅದರ ಬಳಕೆಯನ್ನು ಯಾಕೆ ಧಿಕ್ಕರಿಸುತ್ತಾರೆ ಎಂಬ ಅಂಶಗಳನ್ನು ಅರವಿಂದ್ ಎಸ್.ಎ ಹಾಸ್ಯ ಕಲಾವಿದ ತಮ್ಮ ಮಾತುಗಳಲ್ಲಿ ಹೇಳಿದ್ದಾರೆ. ಈ ಮೇಲಿನ ಹಾಸ್ಯದ ವಿಡಿಯೋ ಅನ್ನು ನೋಡಿ ನೀವು ಆನಂದಿಸಿ.

Leave a Reply