ತಾನು ಮದುವೆ ಆಗದಿರಲು ಅಜಯ್ ದೇವಗನ್ ಕಾರಣ ಅಂತಾ ತಬು ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

‘ನಾನು ಇನ್ನು ಸಿಂಗಲ್ ಆಗಿ ಇರಲು ಕಾರಣ ಅಜಯ್ ದೇವಗನ್’ ಎಂದು ಬಾಲಿವುಡ್ ನಟಿ ತಬು ನೀಡಿರುವ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ. ಸದ್ಯ ಬಾಲಿವುಡ್ ನ ಹಾಸ್ಯ ಚಿತ್ರವಾದ ಗೋಲ್ ಮಾಲ್ ನ ಮುಂದಿನ ಸರಣಿಯಾದ ‘ಗೋಲ್ ಮಾಲ್ ಅಗೇನ್’ ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ತಬು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ತಬು ಅವರು ಅಜಯ್ ದೇವಗನ್ ಕುರಿತಾಗಿ ಈ ಹೇಳಿಕೆ ಕೇವಲ ಹಾಸ್ಯವಾಗಿದ್ದು, ಈ ಹೇಳಿಕೆ ಹಿಂದೆ ಇರುವ ಕಾರಣವೇನು? ಎಂಬುದನ್ನು ಸ್ವತಃ ತಬು ಅವರೇ ವಿವರಿಸಿರುವುದು ಹೀಗೆ…

‘ನನ್ನ ಹಾಗೂ ಅಜಯ್ ಸ್ನೇಹ 25 ವರ್ಷದ್ದು. ನನ್ನ ಸೋದರ ಸಂಬಂಧಿ ಸಮೀರ್ ಆರ್ಯಾ ಹಾಗೂ ಅಜಯ್ ಅಕ್ಕಪಕ್ಕದ ಮನೆಯವರಾಗಿದ್ದರು. ಅಲ್ಲದೆ ಒಳ್ಳೆಯ ಸ್ನೇಹಿತರೂ ಆಗಿದ್ದರು. ಆಗಿನಿಂದಲೂ ಅಜಯ್ ನನಗೆ ಪರಿಚಿತ. ನಾನು ಚಿಕ್ಕವಳಾಗಿದ್ದಾಗ ಸಮೀರ್ ಹಾಗೂ ಅಜಯ್ ನನ್ನ ಮೇಲೆ ಕಣ್ಮಿಟ್ಟಿದ್ದರು. ನನ್ನನ್ನು ಹಿಂಬಾಲಿಸುತ್ತಿದ್ದರು. ನನ್ನೊಂದಿಗೆ ಯಾವುದೇ ಹುಡುಗ ಮಾತನಾಡಿದರು ಆತನನ್ನು ಬೆದರಿಸುತ್ತಿದ್ದರು ಅಥವಾ ಹೊಡೆಯುತ್ತಿದ್ದರು. ಹೀಗಾಗಿ ಇಂದು ನಾನು ಯಾರೊಂದಿಗೂ ಪ್ರೀತಿ ಮಾಡದೇ ಸಿಂಗಲ್ ಆಗಿದ್ದೇನೆ ಎಂದರೆ ಅದಕ್ಕೆ ಅಜಯ್ ದೇವಗನ್ ಕಾರಣ. ಅಜಯ್ ಆಗ ಆ ರೀತಿ ಮಾಡಿರುವುದಕ್ಕೆ, ನನ್ನ ಮದುವೆಗೆ ಒಂದು ಒಳ್ಳೆಯ ಹುಡುಗನನ್ನು ಹುಡುಕಿಕೊಡು ಎಂದು ಹೇಳಿದ್ದೇನೆ.’

Leave a Reply