ಇತ್ತ ಮೋದಿ, ಅತ್ತ ಸೋನಿಯಾ ಅನ್ನುವ ಗೌಡರು ಎತ್ತ?!

ಈ ದೇವೇಗೌಡರು ಯಾರಿಗೂ ಅರ್ಥವೇ ಆಗುವುದಿಲ್ಲ!
ಹೊಳೆನರಸೀಪುರ ಪಂಚಾಯಿತಿಯಿಂದ ಹಿಡಿದು ಈ ದೇಶದ ಪ್ರಧಾನಿ ಹುದ್ದಗೇರಿಳಿದ ನಂತರವೂ ರಾಜಕೀಯದ ದಶಮಗ್ಗಲುಗಳನ್ನು ಅರೆದು ಕುಡಿಯುತ್ತಲೇ ಇರುವ ಗೌಡರ ಸಮಯಾಧಾರಿತ ನಡೆನುಡಿ ಸಂಶೋಧನೆಗೂ ಒಂದು ಸವಾಲೇ ಸರಿ. ತಮ್ಮ ರಾಜಕೀಯ ಜನ್ಮಕ್ಕಂಟಿರುವ ‘ಚಾಣಾಕ್ಷತೆ’ ಎಂಬ ಲೇಪ ಮುಂದಿಟ್ಟುಕೊಂಡೇ ಸಂದರ್ಭ ಮತ್ತು ಅವಕಾಶಕ್ಕೆ ಅನುಗುಣವಾಗಿ ಪಾವಲಿಯಂತೆ ದಾಳಗಳನ್ನು ಉರುಳಿಸುವ ಗೌಡರು ಯಾವಾಗ ಅದ್ಯಾಾವ ನಿಲುವು ತೆಗೆದುಕೊಳ್ಳುತ್ತಾರೆ, ಯಾವಾಗ ಅದನ್ನ ಬದಲಿಸಿ ಬಿಡುತ್ತಾರೆ, ಯಾರನ್ನು ಬೆಂಬಲಿಸುತ್ತಾರೆ, ಯಾರನ್ನು ಮಲಗಿಸುತ್ತಾರೆ, ಯಾರನ್ನು ಸವರುತ್ತಾರೆ, ಯಾರನ್ನು ಇರಿಯುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಅವರ ತಂತ್ರ, ಪ್ರತಿತಂತ್ರ, ಕುತಂತ್ರದ ಒಳಮರ್ಮ ಯಾರಿಗೂ ನಿಲುಕುವುದೇ ಇಲ್ಲ. ಹೀಗಾಗಿ ರಾಜಕೀಯದ ಮಟ್ಟಿಗೆ ಅವರೊಂದು ಬಿಡಿಸಲಾರದ ಕಗ್ಗಂಟು.
ಹೌದು, ಗೌಡರು ಏಕರೂಪ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ವಿಚಾರ ಬಂದಾಗ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ಕೊಟ್ಟ ಮಧ್ಯರಾತ್ರಿ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಎಲ್ಲರನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡ ಮೋದಿ ನಡೆಯನ್ನು ಪ್ರಶಂಸಿಸುತ್ತಾರೆ. ಪ್ರೀತಿ ಮತ್ತು ಗೌರವದಿಂದ ಅವರು ಕೊಟ್ಟ ಆಹ್ವಾಾನವನ್ನು ನಿರಾಕರಿಸಲು ಆಗಲಿಲ್ಲ ಅನ್ನುತ್ತಾರೆ. ದೇಶಕ್ಕೊಂದೇ ತೆರಿಗೆ ವ್ಯವಸ್ಥೆ ತಂದ ಮೋದಿ ಅವರನ್ನು ಕೊಂಡಾಡುತ್ತಾರೆ. ಆದರೆ ರಾಷ್ಟ್ರಪತಿ ಚುನಾವಣೆ ವಿಚಾರ ಬಂದಾಗ ಅದೇ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಿಕೂಟ (ಎನ್‌ಡಿಎ) ಬೆಂಬಲಿತ ಅಭ್ಯರ್ಥಿ ಕೋವಿಂದ್ ಉಮೇದುವಾರಿಕೆಯನ್ನು ತಿರಸ್ಕರಿಸುತ್ತಾರೆ. ಜಿಎಸ್‌ಟಿ ಲೋಕಾರ್ಪಣೆ ಸಮಾರಂಭ ಬಹಿಷ್ಕರಿಸಿದ ಕಾಂಗ್ರೆೆಸ್ ನೇತೃತ್ವದ ಸಂಯುಕ್ತ ಪ್ರಗತಿರಂಗ (ಯುಪಿಎ) ಕಣಕ್ಕಿಿಳಿಸಿರುವ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸುತ್ತಾಾರೆ. ಜಿಎಸ್‌ಟಿ ವಿಚಾರದಲ್ಲಿ ಮೋದಿ ಅವರಿಗೆ ಬೆಂಬಲ. ರಾಷ್ಟ್ರಪತಿ ಚುನಾವಣೆ ಎಂದಾಗ ಸೋನಿಯಾ ಗಾಂಧಿ ಅವರಿಗೆ ಜೈ ಎನ್ನುತ್ತಾರೆ. ಹೀಗಾಗಿ ಗೌಡರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎನ್ನುತ್ತದೆ ರಾಜಕೀಯ ಪಡಸಾಲೆ.
ಸುಮಾರು ಹದಿನಾಲ್ಕು ವರ್ಷಗಳಿಂದ ದೇಶವನ್ನಾಳಿದ ನಾನಾ ಪಕ್ಷಗಳು ಸ್ಡ್ಟ್ಯಾಂಡ್ ಹಾಕಿಕೊಂಡು ನಿಂತಲ್ಲೇ ಸೈಕಲ್ ತುಳಿಯುತ್ತಿದ್ದ ಜಿಎಸ್‌ಟಿ ವ್ಯವಸ್ಥೆೆಗೆ ಕೊನೆಗೂ ಮುಕ್ತಿಿ ಕಾಣಿಸಿದ ನರೇಂದ್ರ ಮೋದಿ ಅವರು ಆ ಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲು ಮಾಡಲು ಸಂಸತ್ತಿಿನ ಸೆಂಟ್ರಲ್ ಹಾಲ್‌ನಲ್ಲಿ ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆದಿದ್ದರು. ಈ ವಿಶೇಷ  ಈಗಿರೋ ಮೂವರು ಮಾಜಿ ಪ್ರಧಾನಿಗಳ ಪೈಕಿ ದೇವೇಗೌಡರು ಹಾಗೂ ಮನಮೋಹನಸಿಂಗ್ ಅವರಿಗೆ ಮೋದಿ ಅವರೇ ಖುದ್ದು ದೂರವಾಣಿ ಮೂಲಕ ಎರಡೆರಡು ಬಾರಿ ಮಾತನಾಡಿ ಆಹ್ವಾಾನಿಸಿದ್ದರು. ಆರೋಗ್ಯ ಸರಿ ಇಲ್ಲದ ಕಾರಣ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾಗವಹಿಸಲು ಸಾಧ್ಯವಿಲ್ಲದ ಕಾರಣ ಅವರನ್ನು ಆಹ್ವಾಾನಿಸಿರಲಿಲ್ಲ. ಕರ್ನಾಟಕ ಸೇರಿದಂತೆ ಕಾಂಗ್ರೆೆಸ್ ಆಳ್ವಿಿಕೆ ಇರುವ ಎಲ್ಲ ರಾಜ್ಯಗಳು ಈ ಜಿಎಸ್‌ಟಿ ವಿಧೇಯಕವನ್ನು ಅನುಮೋದಿಸಿವೆ. ಇಡೀ ದೇಶದಲ್ಲಿ ಪಶ್ಚಿಿಮ ಬಂಗಾಳ ಮಾತ್ರ ಈ ವಿಧೇಯಕ ಬೆಂಬಲಿಸಿಲ್ಲ. ಅಲ್ಲಿಗೆ ಜಿಎಸ್‌ಟಿಗೆ ಕಾಂಗ್ರೆೆಸ್ ವಿರೋಧ ಇಲ್ಲ ಎಂದಾಯಿತು. ಆದರೆ ಮಧ್ಯರಾತ್ರಿಿ ಅಧಿವೇಶನ ಬೇಕಿರಲಿಲ್ಲ ಎಂಬ ಚಿಲ್ಲರೆ ನೆಪವೊಡ್ಡಿಿ ಕಾಂಗ್ರೆೆಸ್ ಈ ವಿಶೇಷ ಸಂದರ್ಭದಿಂದ ದೂರ ಉಳಿಯಿತು. ಆರ್ಥಿಕ ತಜ್ಞ ಎನಿಸಿಕೊಂಡ ಮನಮೋಹನಸಿಂಗ್ ಅವರಿಗೆ ಭಾಗವಹಿಸಲು ಇಷ್ಟವಿದ್ದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿರ್ಣಯವನ್ನು ಉಲ್ಲಂಘಿಸಲಾಗದೆ ಒಲ್ಲದ ಮನಸ್ಸಿಿಂದಲೇ ದೂರ ಉಳಿದರು. ಜಿಎಸ್‌ಟಿ ಒಪ್ಪಿಿದ ಕಾಂಗ್ರೆೆಸ್ ಅದರ ಲೋಕಾರ್ಪಣೆಯಿಂದ ದೂರ ಉಳಿದು ದ್ವಿಿಮುಖ ನಿಲುವು ಪ್ರದರ್ಶಿಸಿ, ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತನ್ನನ್ನು ಟೀಕೆಗೆ ಒಡ್ಡಿಕೊಂಡಿತು.
ಇದು ರಾಷ್ಟ್ರೀಯ ಪಕ್ಷದ ಕತೆಯಾಯಿತು. ಆದರೆ ದೇವೇಗೌಡರ ಜಾತ್ಯತೀತ ಜನತಾ ದಳ (ಜೆಡಿಎಸ್)ಕ್ಕೆೆ ಈ ಯಾವುದೇ ಇತಿಮಿತಿ ಇಲ್ಲ. ಅವರದು ಸಂಪೂರ್ಣ ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಈಜುತ್ತಲೇ ತನ್ನ ಅಸ್ತಿಿತ್ವ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ಜೆಡಿಎಸ್ ಒಂದು ರೀತಿ ‘ಅಮಿಬಾ’ ಆಗಿಬಿಟ್ಟಿಿದೆ. ಆದಕ್ಕಾವುದೇ ಆಕಾರವಿಲ್ಲ. ಇದ್ದದ್ದೇ ಆಕಾರ. ತೆಗೆದುಕೊಂಡದ್ದೇ ನಿಲುವು. ಅನುಕೂಲಸಿಂಧು, ಅವಕಾಶವಾದ ರಾಜಕಾರಣ ಈ ನಿಲುವಿನ ಬುನಾದಿ. ಲಾಭ ಆಧಾರಿತ ವಿಷಯಕ್ಕೆೆ ಅನುಗುಣವಾಗಿ ಈ ನಿಲುವು ಬದಲಾಗುತ್ತಾಾ ಹೋಗುತ್ತದೆ. ಪಾತ್ರೆೆ-ಪಗಡದ ಅಳತೆ, ವಿನ್ಯಾಾಸಕ್ಕೆೆ ನೀರು ಹೊಂದಿಕೊಳ್ಳುವ ಹಾಗೆ. ಹಂಡೆ, ಬಿಂದಿಗೆ, ಚೆಂಬು, ಲೋಟ – ಯಾವುದಕ್ಕಾಾದರೂ ಸರಿಯೇ. ಸುರಿದರೆ ತುಂಬಿಕೊಳ್ಳುತ್ತದೆ ಅಷ್ಟೇ. ಹೀಗಾಗಿ ಜೆಡಿಎಸ್ಸಿಿಗೆ ಇಂಥದ್ದೇ ತತ್ವ-ಸಿದ್ಧಾಾಂತ, ನೀತಿ, ನಿಲುವು ಎಂಬುದಿಲ್ಲ. ಹೀಗಾಗಿ ಗೌಡರು ಪ್ರಧಾನಿ ಅವರ ಆಹ್ವಾಾನ ಮನ್ನಿಿಸಿ ಮಧ್ಯರಾತ್ರಿಿ ಅಧಿವೇಶವನದಲ್ಲಿ ಜಿಎಸ್‌ಟಿ ರೂವಾರಿ  ಮೋದಿ ಅವರ ಜತೆ ವೇದಿಕೆ ಹಂಚಿಕೊಂಡು ಬಂದರು. ಹಾಗೆ ಹಂಚಿಕೊಂಡದ್ದನ್ನು ಸಮರ್ಥಿಸಿಕೊಂಡರು. ರಾಷ್ಟ್ರಪತಿ, ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳೋದು ಅಂದ್ರೆೆ ಏನು ಅನ್ನೋದು ಅನುಭವದಿಂದಲೇ ಬಲ್ಲರು.
ಆದರೆ ಈ ಜಿಎಸ್‌ಟಿ ಜಾರಿ ಜತೆಜತೆಯಲ್ಲೇ ಚಾಲ್ತಿಿಯಲ್ಲಿರುವ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಗೌಡರದು ಯೂಟರ್ನ್. ಮೋದಿಯೂ ಇಲ್ಲ. ಅವರು ಬೆಂಬಲಿಸಿರೋ ಅಭ್ಯರ್ಥಿ ಕೋವಿಂದೂ ಇಲ್ಲ. ಅವರ ನಿಲುವು ಸಂಪೂರ್ಣ ಬದಲು. ಮೀರಾ ಕುಮಾರ್ ಬೆಂಗಳೂರಿಗೆ ಬಂದು ತಮ್ಮನ್ನು ಭೇಟಿ ಮಾಡುತ್ತಿಿದ್ದಂತೆ ಕಾಂಗ್ರೆೆಸ್ ಪಕ್ಷಪಾತಿ ಆಗಿಹೋದರು. ಅದಕ್ಕೆೆ ಮೊದಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೌಡರನ್ನು ಭೇಟಿಯಾಗಿ ವೇದಿಕೆ ಸಜ್ಜು ಮಾಡಿಟ್ಟಿದ್ದರು. ಕಾಂಗ್ರೆೆಸ್ ಬೆಂಬಲಿತ ಅಭ್ಯರ್ಥಿ ಮೀರಾ ಕುಮಾರ್ ಗೆಲ್ಲುವುದಿಲ್ಲ  ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಆದರೂ ಅವರನ್ನೇ ಬೆಂಬಲಿಸಿರೋ ಗೌಡರು ಅದ್ಯಾಾವ ಸಂದೇಶ ಕೊಡಲು ಹೊರಟಿದ್ದಾಾರೆ ಅನ್ನುವುದೇ ಗೊತ್ತಾಾಗುತ್ತಿಿಲ್ಲ. ಅವರು ಗೊಂದಲದಲ್ಲಿದ್ದಾಾರೋ ಅಥವಾ ಜನರನ್ನು ಗೊಂದಲದಲ್ಲಿಡಲು ನೋಡುತ್ತಿಿದ್ದಾಾರೋ ಎಂಬುದೂ ನಿಲುಕುತ್ತಿಿಲ್ಲ. ಇದಕ್ಕೂ ಮಿಗಿಲಾದ ಮತ್ತೊೊಂದು ಪರಿವರ್ತನೆಯನ್ನೂ ಇಲ್ಲಿ ಗುರುತಿಸಬಹುದು. ಇದು ವಯೋಸಹಜ. ಅದ್ಯಾಾವ ಪಕ್ಷದವರಾದರೂ ಸರಿ, ನಾಯಕರು ತಮ್ಮ ಹತ್ತಿಿರ ಬರಬೇಕು, ತಮ್ಮ ಬೆಂಬಲ ಕೋರಬೇಕು, ತಮ್ಮನ್ನು ವಿಶ್ವಾಸಕ್ಕೆೆ ತೆಗೆದುಕೊಳ್ಳಬೇಕು ಎನ್ನುವ ಅಪೇಕ್ಷ ಮನಸ್ಥಿತಿಯಲ್ಲಿರುವ ಗೌಡರು ಜೀವನದ ಸಂಧ್ಯಾಕಾಲದಲ್ಲಿ ಅವೆಲ್ಲವನ್ನೂ ಸಂತೋಷಿಸುತ್ತಿದ್ದಾರೆ. ಹೀಗೆ ಬರುವ ಸಂತೋಷವನ್ನು ಮತ್ತೆ, ಮತ್ತೆ ಬಯಸುತ್ತಿದ್ದಾರೆ ಎಂದೆನಿಸುತ್ತದೆ.
ಹಾಗೆ ನೋಡಿದರೆ ದೇವೇಗೌಡರು ಹಿಂದೆಲ್ಲ ಹೀಗೆಲ್ಲ ಇರಲಿಲ್ಲ. 2004 ರಲ್ಲಿ ಧರ್ಮಸಿಂಗ್ ನೇತೃತ್ವದ ಜೆಡಿಎಸ್-ಕಾಂಗ್ರೆೆಸ್ ಸರಕಾರದ ಮೈತ್ರಿಿ ಮುರಿದು, ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಮೈತ್ರಿಿಕೂಟದ ಸರಕಾರ ಬಂದಾಗ ಅವರ ರೋದನೆ ಗೌಡರಿನ್ನೂ ಜಾತ್ಯತೀತ ಮನಸ್ಸು ಮುರಿದುಕೊಂಡಿಲ್ಲ ಎಂದೇ ಮೇಲ್ನೋಟಕ್ಕೆ ಅನಿಸಿತ್ತು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರನ್ನು ಶಪಿಸಿಕೊಂಡು ತಮ್ಮನ್ನು ಆ ರೀತಿ ಬಿಂಬಿಸಿಕೊಂಡಿದ್ದರು. ಆದರೂ ಜನರಿಗೆ ಅವರ ಮಾತಿನ ಮೇಲೆ ಪೂರ್ತಿ ನಂಬಿಕೆ ಇರಲಿಲ್ಲ. ಪುತ್ರ ವ್ಯಾಮೋಹಕ್ಕೆ ಬಲಿಯಾಗಿ ತಾವು ನಂಬಿದ್ದ ತತ್ತ್ವ-ಸಿದ್ಧಾಾಂತಗಳಿಗೆ ತಿಲಾಂಜಲಿ ಇತ್ತಿಿದ್ದಾಾರೆ. ಕುಮಾರ ಸ್ವಾಾಮಿ ಮುಖ್ಯಮಂತ್ರಿಿ ಆಗಲಿ ಎಂಬ ಕಾರಣಕ್ಕೆೆ ಒಳಶಾಮೀಲು ಮಾಡಿಕೊಂಡಿದ್ದಾಾರೆ. ಆದರೆ ಅದನ್ನು ತೋರುಗೊಡದೆ ನಾಟಕ ಆಡುತ್ತಿಿದ್ದಾಾರೆ ಎಂದೂ ಅನುಮಾನಪಟ್ಟಿಿದ್ದರು.
ಆದರೆ ಇತ್ತೀಚೆಗೆ ದೇವೇಗೌಡರ ರಾಜಕೀಯ ನಡೆಗಳನ್ನು ನೋಡಿದರೆ, ಅವರ ನಿಲುವುಗಳನ್ನು ಪರಾಮರ್ಶಿದರೆ ಹಿಂದೆಲ್ಲ ಅವರು ಪ್ರತಿಪಾದಿಸಿದ ಜಾತ್ಯತೀತ ಸಿದ್ಧಾಂತ , ಬಿಜೆಪಿ ಬಗ್ಗೆ ಹೊಂದಿದ್ದ ಕೋಮುವಾದಿ ಭಾವನೆ ಹುಸಿ ಎನಿಸುತ್ತದೆ. ಹದಿನೈದು ದಿನಗಳ ಹಿಂದೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ  ನಿರ್ಣಯ ಮಂಡನೆ ಮಾಡಿದ ಕಾಂಗ್ರೆಸ್ಸಿಗೆ ಗಂಜಿನೀರು ಕುಡಿಸಿಬಿಟ್ಟರು. ದೇವೇಗೌಡರನ್ನು ನಂಬಿಕೊಂಡೇ ಕಾಂಗ್ರೆೆಸ್ ಇಂಥದೊಂದು ಹುಂಬತನದ ಕ್ರಮಕ್ಕೆೆ ಕೈ ಹಾಕಿತ್ತು. ಗೌಡರು ಸ್ವಲ್ಪ ಮನಸ್ಸು ಮಾಡಿದ್ದರೂ ಬಿಜೆಪಿಯನ್ನು, ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಉಡಾಯಿಸಿಬಿಡಬಹುದಿತ್ತು. ಕಾಂಗ್ರೆೆಸ್ ಕಡೆ ವಿ.ಎಸ್. ಉಗ್ರಪ್ಪ ಆ ಸ್ಥಾನದ ಆಕಾಂಕ್ಷಿಿ ಆಗಿದ್ದರೂ ತಮ್ಮದೇ ಪಕ್ಷದ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಬಹುದಿತ್ತು. ಆಗಲೂ ಕಾಂಗ್ರೆೆಸ್ ರಾಜ್ಯಾಾಧ್ಯಕ್ಷ ಪರಮೇಶ್ವರ್ ಅವರು ಗೌಡರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ ಗೌಡರು ಇನ್ನೆೆರಡು ತಿಂಗಳಲ್ಲಿ ಅವಧಿ ಪೂರೈಸಲಿರುವ ಶಂಕರಮೂರ್ತಿ ಪರ ನಿಲುವು ತೆಗೆದುಕೊಂಡರು ಆ ಮೂಲಕ ಬಿಜೆಪಿಯನ್ನು ಬೆಂಬಲಿಸಿದರು. ಜೆಡಿಎಸ್ ಬೆಂಬಲ ನಂಬಿಕೊಂಡ ಕಾಂಗ್ರೆೆಸ್ ಮಕಾಡೆ ಮಲಗಿತು. ಗೌಡರು ನಕ್ಕರು. ಸಿದ್ದರಾಮಯ್ಯನವರ ಮುಖ ಬಿಳುಚಿಕೊಂಡಿತು. ಈಗ ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಬೆಂಬಲಕ್ಕೆೆ ನಿಂತಿರುವ ಗೌಡರಿಗೆ ಆಗ ಮಾತ್ರ ಕಾಂಗ್ರೆೆಸ್ ಅಪಥ್ಯವಾಯಿತು.
ರಾಷ್ಟ್ರಪತಿ ಚುನಾವಣೆ ರಾಷ್ಟೀಯ ರಾಜಕೀಯಕ್ಕೆೆ ಸಂಬಂಧಪಟ್ಟದ್ದು, ಮೇಲ್ಮನೆ ಸಭಾಪತಿ ವಿರುದ್ಧದ ಅವಿಶ್ವಾಾಸ ನಿರ್ಣಯ ರಾಜ್ಯ ರಾಜಕೀಯಕ್ಕೆೆ ಸಂಬಂಧಪಟ್ಟದ್ದು. ಹೀಗಾಗಿ ಅದೇ ಬೇರೆ, ಇದೇ ಬೇರೆ ಎನ್ನುವಂತೆಯೂ ಇಲ್ಲ. ಏಕೆಂದರೆ ಇತ್ತೀಚೆಗೆ ನಡೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಗೌಡರ ವರಸೆ ಇದಕ್ಕೆೆ ತದ್ವಿಿರುದ್ಧವಾಗಿತ್ತು. ಈ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವುದು ಅವರಿಗೆ ಬೇಕಿರಲಿಲ್ಲ. ಹೀಗಾಗಿ ಅಭ್ಯರ್ಥಿಗಳನ್ನೇ ಕಣಕ್ಕೆೆ ಇಳಿಸಲಿಲ್ಲ. ಒಂದೊಮ್ಮೆೆ ಅಭ್ಯರ್ಥಿಗಳನ್ನು ಹಾಕಿದರೆ ಜಾತ್ಯತೀತ ಮತಗಳ ವಿಭಜನೆ ಆಗಿ ಬಿಜೆಪಿ ಗೆದ್ದುಬಿಡುತ್ತದೆ, ಕಾಂಗ್ರೆೆಸ್ ಅಭ್ಯರ್ಥಿಗಳು ಸೋಲುತ್ತಾಾರೆ. ವಿಧಾನಸಭೆ ಚುನಾವಣೆಗೆ ವರ್ಷವಷ್ಟೇ ಬಾಕಿ ಇರುವಾಗ ತನ್ನಂತೆಯೇ ಪ್ರತಿಪಕ್ಷ ಸ್ಥಾಾನದಲ್ಲಿರುವ ಬಿಜೆಪಿ ಗೆದ್ದುಬಿಟ್ಟರೆ ತನ್ನ ಅಸ್ತಿಿತ್ವಕ್ಕೆೆ ಧಕ್ಕೆೆ ಬರುತ್ತದೆ ಎಂದು ಲೆಕ್ಕಾಾಚಾರ ಹಾಕಿದ ಕಾಂಗ್ರೆೆಸ್ ಗೆಲುವಿಗೆ ಪರೋಕ್ಷ ಬೆಂಬಲ ಕೊಟ್ಟರು. ಯಡಿಯೂರಪ್ಪ ಏನೆಲ್ಲ ಹೋರಾಟ ಮಾಡಿದರೂ, ಕಾಂಗ್ರೆೆಸ್ ಧುರೀಣ ಎಸ್.ಎಂ. ಕೃಷ್ಣ ಅವರನ್ನು ಪಕ್ಷಕ್ಕೆೆ ಎಳೆದು ತಂದರೂ ಬಿಜೆಪಿ ಗೆಲ್ಲಲಾಗಲಿಲ್ಲ. ಎರಡೂ ಕಡೆ ಸೋತಿತು. ಇದು ಜೆಡಿಎಸ್ ನಿಲುವಿನ ಫಲಶೃತಿ. ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಗೌಡರು ಅದಕ್ಕೆೆ ಮೊದಲು ನಡೆದ ಈ ಮರುಚುನಾವಣೆಯಲ್ಲಿ ಕಾಂಗ್ರೆೆಸ್ ಜತೆ ಶಾಮೀಲಾದರು.
ಇನ್ನು ಸ್ವಲ್ಪ ಹಿಂದಕ್ಕೆೆ ಹೋಗುವುದಾದರೆ ಬೆಂಗಳೂರಿನ ಹೆಬ್ಬಾಾಳ ಮರುಚುನಾವಣೆಯಲ್ಲಿ ಗೌಡರ ನಿಲುವು ಇದಕ್ಕೆೆ ವ್ಯತಿರಿಕ್ತ. ಈ ಚುನಾವಣೆಯಲ್ಲಿ ಬಿಜೆಪಿ ಪರೋಕ್ಷ ಬೆಂಬಲಕ್ಕೆೆ ನಿಂತರು. ಅವರು ಕಣಕ್ಕಿಿಳಿಸಿದ ಪಕ್ಷದ ಅಭ್ಯರ್ಥಿಗೆ ಹೇಳಿಕೊಳ್ಳುವಷ್ಟು ಮತಗಳು ಬಾರದಿದ್ದರೂ ಈ ಚುನಾವಣೆಯಲ್ಲಿ ಕಾಂಗ್ರೆೆಸ್ ಸೋಲುವುದು ಅವರಿಗೆ ಬೇಕಿತ್ತು. ಅವರು ಅಂದುಕೊಂಡಂತೆ ಜಾಫರ್ ಷರೀಫ್ ಮೊಮ್ಮಗ ಒಬೆದುಲ್ಲಾಾ ಷರೀಫ್ ಸೋತರು. ಬಿಜೆಪಿಯ ನಾರಾಯಣಸ್ವಾಾಮಿ ಗೆದ್ದರು. ಇಲ್ಲಿ ಗೌಡರಿಗೆ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಬೇಕಿರಲಿಲ್ಲ. ಬದಲಿಗೆ ಕಾಂಗ್ರೆೆಸ್ ಸೋಲುವುದಷ್ಟೇ ಬೇಕಿತ್ತು. ಇವರಿಗೆ ನಂಜನಗೂಡು, ಗುಂಡ್ಲುಪೇಟೆಯಲ್ಲಿ ಕಾಂಗ್ರೆೆಸ್ ಗೆಲ್ಲಬೇಕಿತ್ತು. ಆದರೆ ಹೆಬ್ಬಾಾಳದಲ್ಲಿ ಬೇಡ. ಗೌಡರು ಅರ್ಥವಾಗದೇ ಹೋಗುವುದು ಇಂಥ ಕಾರಣಕ್ಕೇ.
ಇದಿಷ್ಟೇ ಅಲ್ಲ. ವ್ಯಕ್ತಿಿಗತ ವೈಷಮ್ಯ ಸಾಧನೆ ಮತ್ತು ಹಗೆ ಸಾಧಿಸಿದವರನ್ನೇ ಆತುಕೊಳ್ಳುವ ವಿಚಾರದಲ್ಲೂ ಗೌಡರ ನಡೆಯನ್ನು ಹೀಗೆ ಎಂದು ಊಹಿಸಲಾಗದು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರಲ್ಲಿ ಅಂದಿನ ಕಾಂಗ್ರೆೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರನ್ನು ಸೋಲಿಸಲು ತಮ್ಮದೇ ಪಕ್ಷದ ಅಭ್ಯರ್ಥಿ ಚಂದ್ರಶೇಖರಯ್ಯ ಅವರನ್ನು ‘ಹರಕೆಯ ಕುರಿ’ ಮಾಡಿಬಿಟ್ಟರು. ಆಗ ಸಿದ್ದರಾಮಯ್ಯ ಅವರನ್ನು ಕಾಂಗ್ರೆೆಸ್ಸಿಿಗೆ ಕರೆದು ತಂದಿದ್ದ ವಿಶ್ವನಾಥ್ ಅವರಿಗೆ ಗೌಡರ ಕುಟುಂಬ ಕಡುವೈರಿಯಂತೆ ಕಂಡಿತ್ತು. ವೈಯಕ್ತಿಿಕವಾಗಿ ತಮ್ಮನ್ನು ಹಾಗೂ ತಮ್ಮ ಕುಟುಂಬ ಸದಸ್ಯರನ್ನು ಹಾದಿಬೀದಿಯಲ್ಲಿ ನಿಂದಿಸಿ ತಿರುಗುತ್ತಿಿದ್ದ ವಿಶ್ವನಾಥ್ ಅವರನ್ನು ಬಲಿ ಹಾಕುವುದು ಗೌಡರಿಗೆ ಬೇಕಿತ್ತು. ಹೀಗಾಗಿ ಆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಚುನಾವಣೆಗೆ ಒಂದೆರಡು ದಿನ ಬಾಕಿ ಇರುವಾಗ ಸೂಚನೆ ಕೊಟ್ಟರು. ವಿಶ್ವನಾಥ್ ಸೋತು ಮಲಗಿದರು. ಈಗ ಸಿದ್ದರಾಮಯ್ಯ ಅವರನ್ನು ಊರೆಲ್ಲ ಬೆಯ್ದುಕೊಂಡು ತಿರುಗುತ್ತಿಿರುವ ಅದೇ ವಿಶ್ವನಾಥ್ ಅವರನ್ನು ಗೌಡರು ಮೈದಡವಿ ಜೆಡಿಎಸ್ಸಿಿಗೆ ಸೇರಿಸಿಕೊಳ್ಳುತ್ತಿಿದ್ದಾಾರೆ. ವಿಶ್ವನಾಥ್ ಮಾಡುತ್ತಿಿರುವ ಸಿದ್ದರಾಮಯ್ಯ ನಿಂದನೆಯಲ್ಲಿ ಗೌಡರ ನಿಂದನೆ ಮಾಯವಾಗಿ ಹೋಗಿದೆ. ತಮ್ಮ ವಿರುದ್ಧ ಬೈಗುಳಕ್ಕಿಿಂಥ ಸಿದ್ದರಾಮಯ್ಯ ವಿರುದ್ಧದ ಬೈಗುಳವೇ ಗೌಡರಿಗೆ ಅಪ್ಯಾಾಯಮಾನವಾಗಿ ಕಂಡಿದೆ. ಅವರ ಸಂದರ್ಭೋಚಿತ ನಿಲುವು ಬದಲಾವಣೆಗೆ ಇದು ಮತ್ತೊೊಂದು ಗಾಢ ನಿದರ್ಶನ. ಗೌಡರು ಬೇರೆಯವರಿಗೆ ಅರ್ಥವಾಗುವುದಿರಲಿ, ಎಷ್ಟೋೋ ಬಾರಿ ಅವರಿಗೇ ಅವರು ಅರ್ಥವಾಗುವುದಿಲ್ಲ!
ಲಗೋರಿ : ಬಿಡಿಸಿದಷ್ಟೂ ಸಿಕ್ಕಾಗುವ ಕಲೆ ಗೌಡರಿಗಷ್ಟೇ ಕರಗತ.
(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply