ಧನ್ ಧನಾ ಧನ್ ಆಫರ್ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಜಿಯೋ ನೀಡುತ್ತಿರುವ ಸಿಹಿ ಸುದ್ದಿ ಏನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂಬತ್ತು ತಿಂಗಳಿನಿಂದ ಭಾರತೀಯ ಮೊಬೈಲ್ ಬಳಕೆದಾರರಿಗೆ ಅತಿ ಕಡಿಮೆ ಮೊತ್ತದಲ್ಲಿ ಇಂಟರ್ ನೆಟ್ ಸೇವೆ ಒದಗಿಸುತ್ತಿರುವ ರಿಲಾಯನ್ಸ್ ಜಿಯೋ ಕಂಪನಿ, ಈಗ ಮತ್ತೊಮ್ಮೆ ಗ್ರಾಹಕರಿಗೆ ಖುಷಿ ಪಡಿಸುವ ಪ್ರಯತ್ನ ಮಾಡಿದೆ. ಅದೇನೆಂದರೆ ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸುವುದರ ಜತೆಗೆ ಈ ಹಿಂದೆ ಬಿಡುಗಡೆ ಮಾಡಿದ್ದ ಪ್ಲಾನಿನ ಅವಧಿ (ವ್ಯಾಲಿಡಿಟಿ)ಯನ್ನು ವಿಸ್ತರಿಸಿದೆ.

ಜಿಯೋನ ಧನ್ ಧನಾ ಧನ್ ಯೋಜನೆ ಮುಕ್ತಾಯದ ಹಂತದಲ್ಲಿರುವಾಗ ಜಿಯೋ ತನ್ನ ಗ್ರಾಹಕರಿಗೆ ಈ ಸಿಹಿ ಸುದ್ದಿ ಕೊಟ್ಟಿದೆ. ಈಗ ಜಿಯೋ ತನ್ನ ಗ್ರಾಹಕರಿಗೆ ₹ 349 ಹಾಗೂ ₹ 399ರ ಪ್ಲಾನ್ ಅನ್ನು ಪರಿಚಯಿಸಿದೆ. ಇದರ ಜತೆಗೆ ಈ ಹಿಂದೆ ನೀಡಿದ್ದ ₹ 309 ಹಾಗೂ ₹ 509ರ ಪ್ಲಾನಿನ ಅವಧಿ ವಿಸ್ತರಿದೆ.

ಅದರೊಂದಿಗೆ ₹ 309 ಪ್ಲಾನ್ ರಿಚಾರ್ಜ್ ಮಾಡಿದ ಗ್ರಾಹಕರು ಇನ್ನುಮುಂದೆ 28 ದಿನಗಳ ಬದಲಿಗೆ 56 ದಿನಗಳ ಕಾಲ ಪ್ರತಿನಿತ್ಯ 1 ಜಿಬಿಯಷ್ಟು 4ಜಿ ಡಾಟಾ ಪಡೆಯಲಿದ್ದಾರೆ. ಅದೇರೀತಿ ₹ 509 ಪ್ಲಾನ್ ಪಡೆದ ಗ್ರಾಹಕರು 56 ದಿನಗಳ ಕಾಲ ಪ್ರತಿನಿತ್ಯ 2 ಜಿಬಿ ಡಾಟಾ ಪಡೆಯಲಿದ್ದಾರೆ.

ಇನ್ನು ಹೊಸದಾಗಿ ಪರಿಚಯಿಸಿರುವ ₹ 349 ಪ್ಲಾನಿನಲ್ಲಿ ಗ್ರಾಹಕರು 56 ದಿನಗಳ ಅವಧಿಗೆ 128 ಕೆಬಿಪಿಎಸ್ ವೇಗದಲ್ಲಿ ಒಟ್ಟು 20 ಜಿಬಿ ಡಾಟಾ ಪಡೆಯಲಿದ್ದಾರೆ. ಇದರಲ್ಲಿ ಪ್ರತಿನಿತ್ಯದ 1 ಜಿಬಿಯಂತೆ ಡಾಟಾ ನೀಡುವ ಬದಲಿಗೆ 56 ದಿನಗಳಿಗೆ ಒಟ್ಟಾರೆಯಾಗಿ 20 ಜಿಬಿ ಡಾಟಾ ಪಡೆಯಲಿದ್ದಾರೆ. ಇನ್ನು ₹ 399 ಪ್ಲಾನಿನಲ್ಲಿ ಗ್ರಾಹಕರು 84 ದಿನ ಪ್ರತಿನಿತ್ಯ 1 ಜಿಬಿ ಡಾಟಾ ಪಡೆಯಲಿದ್ದಾರೆ.

ಇನ್ನು ಪೋಸ್ಟ್ ಪೇಯ್ಡ್ ಪ್ಲಾನಿನ ವಿವರಗಳನ್ನು ನೋಡುವುದಾದರೆ, ಇಲ್ಲಿ ಗ್ರಾಹಕರಿಗೆ ಈ ಮೇಲೆ ತಿಳಿಸಲಾಗಿರುವ ₹ 349 ಹಾಗೂ ₹ 399ರ ಪ್ಲಾನ್ ಲಭ್ಯವಾಗಲಿದೆ. ₹ 349 ಪ್ಲಾನಿನಲ್ಲಿ ಎರಡು ತಿಂಗಳಿಗೆ ಒಟ್ಟು 20 ಜಿಬಿ ಡಾಟಾ ಸಿಗಲಿದ್ದು, ಇದು ಮುಕ್ತಾಯಗೊಂಡರೆ ಇಂಟರ್ ನೆಟ್ ವೇಗ ಕಡಿಮೆಯಾಗಲಿದೆ. ಇನ್ನು ₹ 399ರ ಪ್ಲಾನ್ ಪ್ರತಿನಿತ್ಯ 1 ಜಿಬಿಯಷ್ಟು 4ಜಿ ಡಾಟಾ ನೀಡಲಿದೆ. ಇವುಗಳ ಜತೆಗೆ ₹ 19ರಿಂದ ₹9999ರವರೆಗಿನ ಪ್ಲಾನ್ ಗಳು ಇವೆ.

Leave a Reply