ಮಕ್ಕಳ ಎದುರಲ್ಲೇ ಇದೇನಿದು ಶರಿಯಾ ಹೆಸರಲ್ಲಿ ಹಿಂಸೆ?

  ಡಿಜಿಟಲ್ ಕನ್ನಡ ಟೀಮ್:

  ಇಂಡೋನೇಷ್ಯಾದಲ್ಲಿ ಶರಿಯಾ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಮೂವರನ್ನು ಸಾರ್ವಜನಿಕವಾಗಿ ಅದರಲ್ಲೂ ಮಕ್ಕಳ ಎದುರಲ್ಲೇ ಥಳಿಸಿ ಹಿಂಸೆ ನೀಡಲಾಗಿದೆ.

  ಇಂಡೋನೇಷ್ಯಾದ ಅಚೆಹ್ ಎಂಬ ಪ್ರದೇಶದಲ್ಲಿ ಮಾತ್ರ ಈ ಶರಿಯಾ ಕಾನೂನನ್ನು ಜಾರಿಗೆ ತರಲಾಗಿದ್ದು, ಈ ಪ್ರದೇಶದಲ್ಲಿ ಈ ಕಾನೂನು ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಥಳಿಸಿ ಶಿಕ್ಷೆ ನೀಡಲಾಗುತ್ತದೆ. ಅದರಲ್ಲೂ ಶಿಕ್ಷೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಚಿಕ್ಕ ಮಕ್ಕಳ ನೋಡಿ ಬೆಳೆಯುತ್ತಿರುವುದು ಶೋಚನೀಯ ಸಂಗತಿ.

  ಶರಿಯಾ ಕಾನೂನಿನ ಪ್ರಕಾರ ಸಲಿಂಗ ಲೈಂಗಿಕತೆ, ವಿವಾಹಯೇತ್ತರ ಸಂಬಂಧ, ಮಧ್ಯಪಾನ ಸೇರಿದಂತೆ ಇತರೆ ಚಟುವಟಿಕೆಗಳು ಅಪರಾಧ ಎಂದು ಪರಿಗಣಿಸಲಾಗಿದ್ದು, ಈ ತಪ್ಪು ಮಾಡಿದವರಿಗೆ ಸಾರ್ವಜನಿಕವಾಗಿ ಶಿಕ್ಷಿಸಲಾಗುತ್ತದೆ. ಇತ್ತೀಚೆಗೆ ಫಿಡೆ ರೆಜೆನ್ಸಿ ಪ್ರದೇಶದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಇಂತಹ ಶಿಕ್ಷೆಯನ್ನು ನೀಡಲಾಗಿದ್ದು, ಅವರು ಮಾಡಿದ ಅಪರಾಧ ಏನು ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ. ಈ ಮೂವರನ್ನು ಥಳಿಸುತ್ತಿದ್ದರೆ ಸುತ್ತಲು ಅನೇಕ ಮಂದಿ ಇದನ್ನು ನೋಡಲು ಜಮಾಯಿಸಿದ್ದರು. ಅದರಲ್ಲಿ ಚಿಕ್ಕ ಮಕ್ಕಳು ಮುಂದೆ ಸಾಲಿನಲ್ಲಿ ನಿಂತು ಶರಿಯಾ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಗೆ ಸಾಕ್ಷಿಯಾದರು.

  ಕೇವಲ ಇಂಡೋನೇಷ್ಯಾದ ಅಚೆಹ್ ಪ್ರದೇಶ ಮಾತ್ರವಲ್ಲದೇ, ಬಹುತೇಕ ಇಸ್ಲಾಂ ರಾಷ್ಟ್ರಗಳಲ್ಲಿ ಶರಿಯಾ ಕಾನೂನು ಉಲ್ಲಂಘಿಸಿದವರಿಗೆ ಇದೇ ರೀತಿ ಸಾರ್ವಜನಿಕವಾಗಿ ಥಳಿಸಲಾಗುತ್ತದೆ. ತೆಳ್ಳನೆಯ ಗಟ್ಟಿಯಾದ ಕೋಲಿನಿಂದ ಸಾರ್ವಜನಿಕವಾಗಿ ಅಪರಾಧಿಗಳಿಗೆ ಥಳಿಸುವುದು ಸಾಮಾನ್ಯ. ಈ ಪ್ರಕರಣದಲ್ಲಿ ಮಕ್ಕಳ ಮುಂದೆ ಥಳಿಸುತ್ತಿರುವ ಚಿತ್ರಗಳು ಹೀಗಿವೆ…

  Leave a Reply