ಲಂಕಾ ಪ್ರವಾಸದಿಂದ ಹೊರಗುಳಿದ ಮುರಳಿ ವಿಜಯ್, ಆರಂಭಿಕನ ಸ್ಥಾನ ತುಂಬಲಿರುವವರು ಯಾರು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಗಾಯದ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮುರಳಿ ವಿಜಯ್ ಸಂಪೂರ್ಣವಾಗಿ ಗುಣಮುಖರಾಗದ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಮುರಳಿ ವಿಜಯ್ ಬದಲಿಗೆ ಆರಂಭಿಕರಾಗಿ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಜಯ್ ಗಾಯಗೊಂಡಿದ್ದರು. ವಿಜಯ್ ಬದಲಿಗೆ ಧವನ್ ಸ್ಥಾನ ಪಡೆದಿದ್ದು, ಟೀಂ ಇಂಡಿಯಾ ಪರ ಧವನ್ ಹಾಗೂ ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ 3 ಟೆಸ್ಟ್, 5 ಎಕದಿನ ಹಾಗೂ ಒಂದು ಟಿ20 ಪಂದ್ಯವನ್ನಾಡಲಿದೆ. ಈ ಸರಣಿಗೆ ಭಾರತ ತಂಡ ಹೀಗಿದೆ…

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ವೃದ್ಧಿಮಾನ್ ಸಾಹ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಕುಲ್ದೀಪ್ ಯಾದವ್, ಅಭಿನವ್ ಮುಕುಂದ್.

Leave a Reply