ಮೋದಿ ಮನ್ ಕಿ ಬಾತ್ ಬರಿ ಮಾತಿನ ಮಂಟಪವಲ್ಲ, 2 ವರ್ಷದಲ್ಲಿ 10 ಕೋಟಿ ಆದಾಯ!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರ ಖ್ಯಾತ ರೆಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಕಾರ್ಯಕ್ರಮ ಆಕಾಶವಾಣಿಗೆ ಕಳೆದ ಎರಡು ವರ್ಷದಲ್ಲಿ ₹ 10 ಕೋಟಿ ಆದಾಯ ತಂದುಕೊಟ್ಟಿದೆ. ಆಮೂಲಕ ಈ ಕಾರ್ಯಕ್ರಮ ಕೇವಲ ಮಾತಿನ ಮಂಟಪವಲ್ಲ ಬದಲಿಗೆ ಆಕಾಶವಾಣಿಗೆ ಆದಾಯದ ಮೂಲ ಎಂದು ಸಾಬೀತಾಗಿದೆ.

ಈ ಕುರಿತು ಲೋಕಸಭೆಯಲ್ಲಿಂದು ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಮಾಹಿತಿ ಹಾಗೂ ಪ್ರಸರಣ ಇಲಾಖೆ ಸಚಿವ ರಾಜ್ಯವರ್ದನ್ ಸಿಂಗ್ ರಾಥೋರ್, ‘2016-17ನೇ ಸಾಲಿನಲ್ಲಿ ಈ ಕಾರ್ಯಕ್ರಮದಿಂದ ಆಕಾಶವಾಣಿಗೆ ₹ 5.19 ಕೋಟಿ ಆದಾಯ ಬಂದಿದೆ. ಇನ್ನು 2015-16ನೇ ಸಾಲಿನಲ್ಲಿ ₹ 4.78 ಕೋಟಿ ಆದಾಯ ಬಂದಿದೆ. ಈ ಕಾರ್ಯಕ್ರಮವನ್ನು ಅದೇ ದಿನ ಮಧ್ಯಾಹ್ನ 18 ಸ್ಥಳೀಯ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗುತ್ತಿದೆ. ಸ್ಥಳೀಯ ಭಾಷೆಗಳ ಜತೆಗೆ ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲಿಯೂ ಪ್ರಸಾರ ಮಾಡಲಾಗುವುದು. ದೇಶದ ಸಾಮಾನ್ಯ ವ್ಯಕ್ತಿಗಳು ಟ್ರಾನ್ಸ್ ಮೀಟರ್ ಗಳ ಮೂಲಕ ಈ ಕಾರ್ಯಕ್ರಮವನ್ನು ಕೇಳುತ್ತಿದ್ದು, ಇಂಟರ್ನೆಟ್ ಮೂಲಕ ಜಾಗತಿಕ ಕೇಳುಗರು ಈ ಕಾರ್ಯಕ್ರಮವನ್ನು ಆಲಿಸುತ್ತಿದ್ದಾರೆ’ ಎಂದು ರಾಥೋರ್ ವಿವರಣೆ ನೀಡಿದ್ದಾರೆ.

1 COMMENT

Leave a Reply