ಖಾಸಗಿ ಹಕ್ಕು ವಿಚಾರಣೆ: ಮಾಹಿತಿ ಸೋರಿಕೆಯಾಗದಂತೆ ನಿಯಮ ಜಾರಿ- ಸುಪ್ರೀಂಗೆ ಕೇಂದ್ರದ ಉತ್ತರ

ಡಿಜಿಟಲ್ ಕನ್ನಡ ಟೀಮ್:

ಖಾಸಗಿ ಹಕ್ಕನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕಿನ ಪಟ್ಟಿಗೆ ಸೇರಿಸಬೇಕು ಎಂಬ ಕುರಿತಾಗಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ‘ಆಧಾರ್ ಕಾರ್ಡ್ ಮೂಲಕ ಸರ್ಕಾರಕ್ಕೆ ನೀಡಿರುವ ವೈಯಕ್ತಿಕ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ’ ಎಂಬ ಅರ್ಜಿದಾರರ ವಾದಕ್ಕೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ‘ಮಾಹಿತಿ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ನಿಯಮ ರೂಪಿಸುತ್ತೇವೆ’ ಎಂಬ ಭರವಸೆ ಕೊಟ್ಟಿದೆ.

2016ರಿಂದ ಸುಪ್ರೀಂ ಕೋರ್ಟಿನ ಐವರು ಸದಸ್ಯ ಪೀಠವು ಈ ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಶುಕ್ರವಾರ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಿದೆ. ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜೆನರಲ್ ಪಿ.ಎಸ್ ನರಸಿಂಹ ‘ಪ್ರತಿಯೊಬ್ಬ ವ್ಯಕ್ತಿಯ ಮೈಹಿತಿಯು ವೈಯಕ್ತಿಕ ಜೀವನ ಹಾಗೂ ಸ್ವಾತಂತ್ರ್ಯ ಹಕ್ಕಿನ ಆಂತರಿಕ ಭಾಗವೇ ಆಗಿವೆ. ಆ ಮೂಲಕ ಸಂವಿಧಾನಾತ್ಮಕವಾಗಿ ಅವರ ಮಾಹಿತಿ ರಕ್ಷಿಸಲೇಬೇಕು. ಅದರ ಮೇಲೆ ಯಾವುದಾದರೂ ಕಾನೂನಿನ ಅಡ್ಡಿ ಇದ್ದರೆ, ಅದನ್ನೂ ಸರಿಪಡಿಸಿ ಮಾಹಿತಿ ರಕ್ಷಣೆಗಾಗಿಯೇ ಹೊಸ ನಿಯಮ ಜಾರಿಗೊಳಿಸಲಾಗುವುದು’ ಎಂದು ನ್ಯಾಯಾಲಯಕ್ಕೆ ಹೇಳಿದರು.

ಈ ವೇಳೆ ಜನರ ಮಾಹಿತಿಯನ್ನು ಯಾವ ಯಾವ ಸಂದರ್ಭಗಳಲ್ಲಿ ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿತು. ನಂತರ ಈ ವಿಷಯದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಲಾಯಿತು.

Leave a Reply