ಪ್ರಥಮ್ ಮತ್ತೊಂದು ರಾದ್ಧಾಂತ- ಬಂಧನದ ಭೀತಿ

ಒಳ್ಳೆ ಹುಡ್ಗ ಪ್ರಥಮ್ ಕಿರಿಕ್ ಮಾಡಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಸಂಜು ಮತ್ತು ನಾನು’ ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ಸಹ ನಟ ಭುವನ್‌ನೊಂದಿಗೆ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರು ಬಡಿದಾಡಿಕೊಂಡು ಕೆಳಕ್ಕೆ ಬಿದ್ದಾಗ ಭುವನ್ ತೊಡೆ ಭಾಗಕ್ಕೆ ಕಚ್ಚಿದ್ದಾರೆ ಅಂತಾ ನಟ ಭುವನ್ ಆರೋಪ ಮಾಡಿದ್ದಾರೆ.

ಹೀಗೆ ಆರೋಪ ಮಾಡ್ತಿರೋ ಸಂಜು ಮತ್ತು ನಾನು ಸೀರಿಯಲ್‌ನ ಹೀರೋ ನಟ ಭುವನ್ ಪೊನ್ನಣ್ಣ, ಆದ್ರೆ ಇದು ಕೇವಲ ಆರೋಪ ಅಲ್ಲ ಅದಕ್ಕೆ ಬೇಕಾದ ಸಾಕ್ಷಿ ಕೂಡ ಕೊಟ್ಟಿದ್ದಾರೆ. ತೊಡೆ ಭಾಗಕ್ಕೆ ಕಚ್ಚಿರುವ ಗುರುತು ಇದ್ದು, ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.

ಬಿಗ್‌ಬಾಸ್ ವಿನ್ನರ್ ಪ್ರಥಮ್ ಹುಡ್ಗೀರ ಬಗ್ಗೆ ತುಂಬಾ ಕೀಳಾಗಿ ಮಾತನಾಡ್ತಾರೆ. ಬಿಗ್‌ಬಾಸ್‌ನಲ್ಲಿ ನೀವು ನೋಡಿರೋದು ಕೇವಲ ೪೨ -ನಿಮಿಷದ ವೀಡಿಯೋ ಮಾತ್ರ.. ಆತನ ರಂಪಾಟಗಳನ್ನು ನಾವು ಸಹಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಅವನೊಬ್ಬ ಹುಚ್ಚ’ ಎನ್ನುತ್ತಾರೆ  ಭುವನ್.

ಆದ್ರೆ ಪ್ರಥಮ್ ಹೇಳೋದೇ ಬೇರೆ.. ‘ನಾನೂ ಯಾರನ್ನೂ ಕಚ್ಚಿಲ್ಲ. ನಾನು ನನ್ನ ಕೆಲಸವಾಯ್ತು ನಾನಾಯ್ತು ಅಂತ ಇದ್ದೀನಿ. ನನಗೆ ತೊಂದ್ರೆ ಕೊಡಬೇಡಿ.. ಭುವನ್ ಹಾಗೂ ಸಂಜನಾ ಅವರ ಜೊತೆ ಮಾತನಾಡಿ ಮೂರು ತಿಂಗಳಾಗಿದೆ. ಎಂದಿದ್ದಾರೆ. ಜೊತೆಗೆ ಫೇಸ್‌ಬುಕ್‌ನಲ್ಲಿ ಮಾತನಾಡಿರುವ ಪ್ರಥಮ್, ನನ್ನ ಮೇಲೆ ಹಲ್ಲೆ ಮಾಡಿದ್ದು ಭುವನ್, ನಾನಲ್ಲ.. ಪ್ರಚಾರ ಹುಚ್ಚಿಗಾಗಿ ಹೀಗೆ ಆರೋಪ ಮಾಡ್ತಿದ್ದಾನೆ.. ನಾನೂ ಕೂಡ ದೂರು ಕೊಡ್ತೇನೆ’
ಸಂಜನಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರಾ ಪ್ರಥಮ್..?

ಈ ಬಗ್ಗೆ ಮಾತನಾಡಿರುವ ನಟಿ ಸಂಜನಾ, ‘ಸಂಜು ಮತ್ತು ನಾನು ಸೀರಿಯಲ್‌ನ ಸಹ ನಿರ್ದೇಶಕ ಓಂಕಾರ್ ಕೂಡ ಮಾತನಾಡಿ ಪ್ರಥಮ್ ಗಲಾಟೆ ಮಾಡಿದ್ದು ನಿಜ ಎಂದ್ರು’ ಅಂತಾ ಹೇಳಿದರು. ಈ ವೇಳೆ ನಟಿ ವಿರುದ್ಧವೇ ತಿರುಗಿಬಿದ್ದ ಪ್ರಥಮ್, ‘ನೀವು ಹಾಗೂ ಭುವನ್ ರೂಮಿನಲ್ಲಿದ್ರಿ.. ನೀವೇ ಯಾಕೆ ಕಚ್ಚಿರ ಬಾರದು ಅಂತಾ ನೇರವಾಗಿ ಪ್ರಶ್ನೆ ಮಾಡಿದ್ರು.. ಜೊತೆಗೆ ನಾಯಿ ಕಚ್ಚಿರಬಹುದು’ ಎಂದಿದ್ದಾರೆ.

ಇವರಿಬ್ಬರ ನಡುವಿನ ಗಲಾಟೆ ವೀಡಿಯೋ ರೆಕಾರ್ಡಿಂಗ್ ಕೂಡ ಆಗಿದ್ದು, ಆ ವೀಡಿಯೋ ಕೂಡ ರಿಲೀಸ್ ಛೆ[ಮಾಡಲಿದ್ದಾರಂತೆ. ಒಂದು ವೇಳೆ ವಿಡಿಯೋ ಬಿಡುಗಡೆಯಾದ್ರೆ, ಪ್ರಥಮ್ ಬಂಧನ ಭೀತಿ ಎದುರಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply