ಇಂದು ಕಾರ್ಗಿಲ್ ವಿಜಯದ ದಿನ: ಅಂದು ರಣರಂಗದಲ್ಲಿ ಪಾಕಿಗಳ ವಿರುದ್ಧ ಭಾರತೀಯ ಯೋಧರ ವೀರಾವೇಶ ಹೇಗಿತ್ತು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಇಂದಿಗೆ ಭಾರತೀಯ ಸೇನೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು 18 ವರ್ಷಗಳು ತುಂಬಿವೆ. 1999ರ ಮೇ ತಿಂಗಳಲ್ಲಿ ಭಾರತದ ಗಡಿಯೊಳಗೆ ನುಗ್ಗಿದ ಪಾಕಿಸ್ತಾನ ಸೇನೆ ಹಾಗೂ ಕಾಶ್ಮೀರಿ ಉಗ್ರರು ಕಾರ್ಗಿಲ್ ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದ್ದರು. ಈ ವೇಳೆ ಪಾಕಿಸ್ತಾನ ಸೇನೆಯ ಎಡೆಮುರಿ ಕಟ್ಟಿದ ಭಾರತೀಯ ಸೇನೆ ಕಾಶ್ಮೀರದಿಂದ ಅವರನ್ನು ಹೋಡಿಸುವಲ್ಲಿ ಯಶಸ್ವಿಯಾಯಿತು. 1999ರ ಜುಲೈ 26ರಂದು ಭಾರತೀಯ ಸೇನೆ ಈ ಯುದ್ಧದಲ್ಲಿ ವಿಜಯಿಯಾಯಿತು. ಅಲ್ಲದೆ ಈ ಯುದ್ಧವನ್ನು ಆಪರೇಷನ್ ವಿಜಯ್ ಅಂತಲೂ ಹೆಸರಿಡಲಾಗಿತ್ತು.

ಈ ಜಯ ಸಿಕ್ಕಿ 18 ವಸಂತಗಳು ತುಂಬಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸೇನೆಯ ಸಾಹಸಗಾಥೆಯನ್ನು ನಾವು ತಿಳಿಯಲೇಬೇಕು. ಈ ಹಿಂದೆ ಡಿಜಿಟಲ್ ಕನ್ನಡದಲ್ಲಿ ಮನೋಜ್ ಪಾಂಡೆ ಎಂಬ ಸಾಹಸಿ ಯೋಧನ ವೀರಗಾಥೆಯ ಕುರಿತು, ಕಾರ್ಗಿಲ್ ಯುದ್ಧದಲ್ಲಿ ಗೂರ್ಖಾ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿದ್ದ ಕರ್ನಲ್ ಲಲಿತ್ ರೈ ಹೇಳಿದ ಮಾತುಗಳನ್ನು ಭಾಗ-1 ಹಾಗೂ ಭಾಗ-2 ವರದಿಗಳಲ್ಲಿ ವಿಸ್ತೃತವಾಗಿ ಪ್ರಕಟಿಸಿತ್ತು. ಈ ಕುರಿತ ವರದಿಗಳನ್ನು ಈ ಲಿಂಕ್ ಗಳ ಮೂಲಕ ಓದಿಕೊಳ್ಳಬಹುದು. ಭಾಗ-1ರ ವರದಿ ಹಾಗೂ ಭಾಗ-2ರ ವರದಿ.

Leave a Reply