₹ 2000 ನೋಟು ಮುದ್ರಣ ನಿಲ್ಲಿಸಿದ ಆರ್ ಬಿಐ, ಮುಂದಿನ ತಿಂಗಳಿಂದ ಬರಲಿದೆ ₹ 200 ನೋಟು

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ನಿರ್ಧಾರದ ನಂತರ ಪರಿಚಯಿಸಲಾಗಿದ್ದ ₹ 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಲ್ಲಿಸಿದ್ದು, ಇನ್ನು ಮುಂದೆ ಈ ನೋಟುಗಳು ಹೊಸದಾಗಿ ಮುದ್ರಣವಾಗುವುದಿಲ್ಲ. ಇದರ ಜತೆಗೆ ಮುಂದಿನ ತಿಂಗಳಿನಿಂದ ₹ 200ರ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬರಲಿವೆ.

ಈಗಾಗಲೇ ಜೂನ್ ತಿಂಗಳಿನಿಂದ ₹ 200 ಮುಖಬೆಲೆಯ ನೋಟುಗಳ ಮುದ್ರಣ ಆರಂಭವಾಗಿದ್ದು, ಮುಂದಿನ ತಿಂಗಳಿನಿಂದ ಇವು ಚಲಾವಣೆಯಾಗಲಿವೆ ಎಂದು ಆರ್ ಬಿಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಲೈವ್ ಮಿಂಟ್ ವರದಿ ಮಾಡಿದೆ.

‘ಇದುವರೆಗು ಸುಮಾರು 37 ಲಕ್ಷ ₹ 2000 ನೋಟುಗಳ ಮುದ್ರಣವಾಗಿದ್ದು, ಇದರ ಒಟ್ಟಾರೆ ಮೊತ್ತ₹ 7.4 ಲಕ್ಷ ಕೋಟಿ. ನೋಟು ಅಮಾನ್ಯ ನಿರ್ಧಾರಕ್ಕೂ ಮುನ್ನ ಇದ್ದ 1000 ಮುಖಬೆಲೆಯ ನೋಟುಗಳ ಸಂಖ್ಯೆ 63 ಲಕ್ಷದಷ್ಟಿತ್ತು. ದೇಶದಲ್ಲಿ ನಗದು ಲಭ್ಯತೆ ಸುಗಮವಾಗುವ ನಿಟ್ಟಿನಲ್ಲಿ ಈಗಾಗಲೇ ₹ 200 ನೋಟು ಮುದ್ರಣ ಆರಂಭಿಸಲಾಗಿದೆ’ ಎಂದು ಆರ್ ಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply