ಇಂದಿರೆಯೇ ತಮ್ಮ ದೇವರೆಂಬ ಕಾಂಗ್ರೆಸ್ ಗತ್ತು, 300 ವರ್ಷ ಇತಿಹಾಸದ ದೇವಾಲಯದ ಕಾಂಪೌಂಡ್ ಒಡೆದವರಿಗೆ ಜನರ ಭಾವನೆಗಳ ಮೇಲಿಲ್ಲ ಕಿಮ್ಮತ್ತು

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಈಗ ವಿವಾದದ ಮಸಿ ಅಂಟಿಕೊಂಡಿದೆ. ಚಾಮರಾಜಪೇಟೆ ವಾರ್ಡಿನಲ್ಲಿ ಆರಂಭವಾಗಬೇಕಿರುವ ಇಂದಿರಾ ಕ್ಯಾಂಟಿನ್ ಗಾಗಿ ಸುಮಾರು ಮುನ್ನೂರು ವರ್ಷಗಳ ಇತಿಹಾಸ ಇರುವ ರಾಮೇಶ್ವರ ದೇವಸ್ಥಾನದ ಕಾಂಪೊಂಡ್ ಅನ್ನು ಒಡೆದು ದೇವಸ್ಥಾನದ ಜಾಗ ಬಳಕೆ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದನ್ನು ವಿರೋಧಿಸಿ ಕೆಲವು ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಪೊರೇಟರ್ ಗಳು ತೀವ್ರ ವಿರೋಧ ವ್ಯಕ್ತಪಡಿಸಿ ಬೇರೆ ಜಾಗದಲ್ಲಿ ಕ್ಯಾಂಟೀನ್ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.

ಈ ವಿಚಾರವಾಗಿ ಬಿಬಿಎಂಪಿಯ ನಡೆಯನ್ನು ಸಮರ್ಥಿಸಿಕೊಂಡಿರುವ ಬಿಬಿಎಂಪಿ ಮೇಯರ್ ಪದ್ಮಾವತಿ ಅವರು, ‘ಮುಜರಾಯಿ ಇಲಾಖೆಯ ಅನುಮತಿ ಪಡೆದ ನಂತರವಷ್ಟೇ ನಾವು ಈ ಜಾಗದಲ್ಲಿ ಕ್ಯಾಂಟೀನ್ ಕಟ್ಟಲು ಮುಂದಾಗಿದ್ದು, ದೇವಸ್ಥಾನದ ವಿಶಾಲ ಭಾಗದಲ್ಲಿರುವ ಸ್ವಲ್ಪ ಜಾಗವನ್ನು ಬಳಸಿಕೊಳ್ಳಲಾಗಿದೆ. ಇಂದಿರಾ ಕ್ಯಾಂಟೀನ್ ಬಡವರಿಗೆ ಅತಿ ಕಡಿಮೆ ಬೆಲೆಗೆ ಊಟ ನೀಡುವ ಒಂದು ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಈ ಆರೋಪ ಮಾಡುತ್ತಿದ್ದಾರೆ. ಈ ಯೋಜನೆಗೆ ಸಾರ್ವಜನಿಕರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಬಿಜೆಪಿ ನಾಯಕರು ಸರ್ಕಾರವನ್ನು ದೂರುತ್ತಾ ಹೇಳಿದಿಷ್ಟು… ‘ಈ ಯೋಜನೆ ಉತ್ತಮವಾಗಿದ್ದು, ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಾರ್ವಜನಿಕರ ವಿರೋಧವಿದ್ದರೂ ಐತಿಹಾಸಿಕ ಹಿನ್ನಲೆ ಇರುವ ರಾಮೇಶ್ವರ ದೇವಸ್ಥಾನದ ಜಾಗವನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರ ಉದ್ದೇಶ ಪೂರ್ವಕವಾಗಿ ಈ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮುಂದಾಗಿದೆ. ಆರಂಭದಲ್ಲಿ ಮುಜರಾಯಿ ಇಲಾಖೆ ದೇವಸ್ಥಾನದ ಜಾಗ ಬಳಕೆಗೆ ಅವಕಾಶ ನೀಡಿರಲಿಲ್ಲ. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಮೂಲಕ ಒತ್ತಡ ಹಾಕಿಸಿ ಮುಜರಾಯಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲಾಗಿದೆ.’

3 COMMENTS

  1. TAPPU GRAHIKE DEVALAYAGALINDU PRASADA NEEDUVA SAMRTHYA HONDABEKIDE1 ALLI ANNA DASOHA IDEYE? BHAKTARIGE ILIDUKOLLALU ANUKULATEGALIVEYE? SARAKARADA SAHAYOGANNU JANA ANUBHOGISABEKALLA! ALLI HOTTE TUMBISIKOLLUVA JANARU HECHCHAVAGIRABEKALLA! SARVAJANIKA ASTI VAYYAKTIKAVEMBATE YERU VARTISALARARU MANDIRAGALENDARE.. alli five star hotel galadded darbar irabaradalla, yembi anisike nannadu. MELAGI SATVANADA MULAKA EE SAMASYEYANNU MUNDUVARIDAVARELLA PARI HARISABEKIDEYENDU ANISUTTE! VANDANEGALU. NEERU , NAIDILE, UTOACHARADA GURI >> MATTE KALYANI NEERU ALLIRABEKE>> DHANYAVADAGALU.

  2. NIMAGELLA GOTTIRUVANTE DEVASTHANAGALALLI POULIGALIRUTTIDDAU BHAKTARIGE ADE REETI DAHOHAKKA SARISAMAN STHANAKKE MEESALITTARE TONDAREYADARU YENU> DEVASTHANAGALU PUJARIGAL HOTTE HOREYUVADAKKAGIDDARE< BHAKTARIGE ONDU REETIYA SULABH PRASADA BEDAVE?
    swrthijana anavashyaka takararu voddi janakalyan karyagalige addi padisuvike SUKTAVALLA!! DHANYAVADA!

Leave a Reply