ಇಸಿಸ್ ಉಗ್ರ ಸಂಘಟನೆ ಸೇರಿದ್ದ ಮತ್ತೊಬ್ಬ ಕೇರಳ ಯುವಕ ಸಾವು

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷ ಕೇರಳದ ಸುಮಾರು 20 ಯುವಕರು ನಾಪತ್ತೆಯಾಗಿದ್ದು, ನಂತರ ಇವರು ಅಫ್ಘಾನಿಸ್ತಾನಕ್ಕೆ ತೆರಳಿ ಇಸಿಸ್ ಉಗ್ರಸಂಘಟನೆಗೆ ಸೇರಿದ್ದಾರೆ ಎಂದು ಶಂಕಿಸಲಾಗಿತ್ತು. ಈಗ ನಾಪತ್ತೆಯಾಗಿದ್ದವರ ಪೈಕಿ ಮತ್ತೊಬ್ಬ ಯುವಕ ಅಫ್ಘಾನಿಸ್ತಾನದಲ್ಲಿ ಇಸಿಸ್ ಸಂಘಟನೆಯ ಪ್ರದೇಶಗಳ ಮೇಲೆ ನಡೆದ ಡ್ರೋನ್ ದಾಳಿಯ ವೇಳೆ ಮೃತಪಟ್ಟಿದ್ದಾನೆ.

ಅಮೆರಿಕದ ನ್ಯಾಷನಲ್ ಇನ್ವೆಸ್ಟಿಂಗ್ ಏಜೆನ್ಸಿ ಇಸಿಸ್ ಸಂಘಟನೆಯ ನೆಲೆಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿತು. ಈ ದಾಳಿ ವೇಳೆ ಕೇರಳದ ಮೊಹಮದ್ ಮರ್ವಾನ್ ಎಂಬಾತ ಮೃತಪಟ್ಟಿದ್ದಾನೆ ಎಂದು ಎನ್ಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸೋಮವಾರ ಮರ್ವಾನ್ ಅವರ ತಂದೆಗೆ ಅಫ್ಘಾನಿಸ್ತಾನದಲ್ಲಿರು ಅಶ್ಫಾಕ್ ಮಜೀದ್ ಎಂಬಾತ ಟೆಲಿಗ್ರಾಂ ಎಂಬ ಸಾಮಾಜಿಕ ಮಾಧ್ಯಮದ ಮೂಲಕ, ‘ಕೆಲ ದಿನಗಳ ಹಿಂದೆ ನಡೆದ ಡ್ರೋನ್ ದಾಳಿಯ ವೇಳೆ ಮರ್ವಾಮ್ ಸತ್ತಿದ್ದಾನೆ’ ಎಂಬ ಸಂದೇಶವನ್ನು ರವಾನಿಸಿದ್ದಾನೆ. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ನಡೆದ ದಾಳಿಯ ವೇಳೆ ಕೇರಳದಿಂದ ತೆರಳಿದ್ದ ಬೆಸ್ಟಿನ್ ವಿನ್ಸೆಂಟ್, ಮೊಹಮದ್ ಹಫೀಜುದ್ದೀನ್ ಮತ್ತು ಮುರ್ಶಿದ್ ಮೊಹಮದ್ ಸಹ ಡ್ರೋನ್ ದಾಳಿಯ ವೇಳೆ ಸತ್ತಿದ್ದರು.

Leave a Reply