ಕರ್ತವ್ಯ ಪ್ರಜ್ಞೆ ಇಲ್ಲದ ಕಾಜೋಲ್ ಗೆ ಕೇಸರಿ ಪಾಳಯವೇಕೆ ಇಂಥ ಪ್ರಾಧಾನ್ಯ ಕೊಡುತ್ತಿದೆ?

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನಟಿ ಕಾಜೋಲ್ ಪ್ರಸಾರ ಭಾರತಿಯ ಸದಸ್ಯತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಜೋಲ್ ಮಂಡಳಿಯ ಸಭೆಗೆ ನಿರಂತರವಾಗಿ ಗೈರಾಗುತ್ತಿದ್ದಾರೆ, ಹೀಗಾಗಿ ಅವರನ್ನು ಸದಸ್ಯ ಸ್ಥಾನದಿಂದ ತೆಗೆದು ಹಾಕುವಂತೆ ಮಂಡಳಿಯ ಕೆಲವು ಸದಸ್ಯರು ಪಟ್ಟು ಹಿಡಿದಿದ್ದರು. ಆದರೂ ಸಹ ಕಾಜೋಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಕರ್ತವ್ಯ ಪ್ರಜ್ಞೆ ಇಲ್ಲದ ಕಾಜೋಲ್ ಗೆ ಬಿಜೆಪಿ ಸರ್ಕಾರ ಈ ಪರಿಯ ಪ್ರಾಮುಖ್ಯತೆ ನೀಡುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆ ಉದ್ಭವಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಸಾರ ಭಾರತಿಯ ಅರೆಕಾಲಿಕ ಸದಸ್ಯಯಾಗಿ ಆಯ್ಕೆಯಾಗಿದ್ದ ಕಾಜೋಲ್, ಸತತವಾಗಿ ಮಂಡಳಿಯ ನಾಲ್ಕು ಸಭೆಗಳಿಗೆ ಕಾಜೋಲ್ ಗೈರಾಗಿದ್ದರು. ಹೀಗಾಗಿ ಕಳೆದ ಬಾರಿ ನಡೆದ ಮಂಡಳಿಯ ಸಭೆಯಲ್ಲಿ ಕಾಜೋಲ್ ಅವರನ್ನು ಕಿತ್ತುಹಾಕುವಂತೆ ಸದಸ್ಯರು ಆಗ್ರಹಿಸಿದ್ದರು. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಮಂಡಳಿಯ ಸಭೆಗಳಿಗೆ ಗೈರಾಗಿರುವ ಕುರಿತಾಗಿ ಕೇಂದ್ರ ವಾರ್ತಾ ಮತ್ತು ಪ್ರಸರಣ ಸಚಿವಾಲಯ ಕಾಜೋಲ್ ಅವರಿಗೆ ವಿವರಣೆ ನೀಡುವಂತೆ ಸೂಚಿಸಿತ್ತು. ನಂತರ ಕಾಜೋಲ್ ಸಚಿವಾಲಯಕ್ಕೆ ತಮ್ಮ ವಿವರಣೆ ನೀಡಿದ್ದು, ಈ ವಿವರಣೆ ಸಚಿವಾಲಯಕ್ಕೆ ತೃಪ್ತಿ ತಂದಿದೆ. ಹೀಗಾಗಿ ಕಾಜೋಲ್ ಅವರನ್ನು ಪ್ರಸಾರ ಭಾರತಿಯ ಸದಸ್ಯರಾಗಿ ಮುಂದುವರಿಸಲು ಮಂಡಳಿ ನಿರ್ಧರಿಸಿದೆ.

‘ಈ ವರ್ಷ ತಮ್ಮ ವೃತ್ತಿಪರ ಚಟುವಟಿಕೆ, ಕೌಟುಂಬಿಕ ಹಾಗೂ ಆರೋಗ್ಯದ ಹಿನ್ನೆಲೆಯಲ್ಲಿ ಅನೇಕ ಸಭೆಗಳಲ್ಲಿ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಕಾಜೋಲ್ ವಿವರಣೆ ನೀಡಿದ್ದಾರೆ. ಇವರ ಈ ವಿವರಣೆಗೆ ಸಚಿವಾಲಯ ಸಮ್ಮತಿ ಸೂಚಿಸಿದ್ದು, ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ನಡೆಯಲಿರುವ ಮಂಡಳಿಯ ಮುಂದಿನ ಸಭೆಯಲ್ಲಿ ಭಾಗವಹಿಸುವಂತೆ ಕಾಜೋಲ್ ಗೆ ಸೂಚನೆ ನೀಡಲಾಗಿದೆ.

Leave a Reply