ಹಿಜ್ಬುಲ್ ಉಗ್ರನ ಹತ್ಯೆ, ಕಣಿವೆ ರಾಜ್ಯದಲ್ಲಿ ಬೇಟೆ ಮುಂದುವರಿಸಿದ ಭಾರತೀಯ ಸೇನೆ

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯಸೇನೆ ತನ್ನ ಉಗ್ರರ ಬೇಟೆಯನ್ನು ಮುಂದುವರಿಸಿದೆ. ಮೊನ್ನೆ ಲಷ್ಕರ್ ಕಮಾಂಡರ್ ಅಬು ದುಜನಾನನ್ನು ಹತ್ಯೆ ಮಾಡಿದ್ದ ಸೇನೆ, ಇಂದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು ಹೊಡೆದುಹಾಕಿದೆ.

ನಿನ್ನೆ ರಾತ್ರಿ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕನಿಬಾಲ್ ಬಿಜ್ ಬೆಹಾರ್ ಪ್ರದೇಶದಲ್ಲಿ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದ್ದು, ಓರ್ವನನ್ನು ಉಗ್ರ ಸಂಘಟನೆಗೆ ಸೇರಿದ ಯಾರ್ವಾರ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಸ್ಥಳೀಯ ನಾಗರೀಕ ಎಂದು ಶಂಕಿಸಲಾಗಿದೆ. ಮತ್ತೊಬ್ಬ ಉಗ್ರ ಇದೇ ಪ್ರದೇಶದಲ್ಲಿ ಅಡಗಿರುವ ಅನುಮಾನವಿದೆ.

ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಆಕ್ರಮಣ ಮಾಡಿದ ಭಾರತೀಯ ಸೇನೆ, ಇಬ್ಬರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಯಿತು. ಈ ವೇಳೆ ಉಗ್ರರ ಬಳಿ ಇದ್ದ ಚೀನಾ ನಿರ್ಮಿತ ಹ್ಯಾಂಡ್ ಗ್ರೆನೇಡ್, ಎಸ್ಎಲ್ಆರ್ ಬಂದೂಕು ಸೇರಿದಂತೆ ಇತರೆ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply