ಮತ್ತೆ ಸ್ನೇಹಿತರಾಗ್ತಾರ ದರ್ಶನ್- ಸುದೀಪ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಕುಚಿಕು ಕುಚಿಕು ಅಂತಾ ಹಾಡುತ್ತಾರ ಎಂಬ ಪ್ರಶ್ನೆ ಉದ್ಭವಿಸುತ್ತಿರುವ ಸಂದರ್ಭದಲ್ಲೇ, ಈ ಇಬ್ಬರು ಮತ್ತೆ ಒಂದಾಗುವ ಸೂಚನೆ ಸಿಗುತ್ತಿವೆ.

ನಟ ಸುದೀಪ್ ದರ್ಶನ್ ಬಗ್ಗೆ ಕೇವಲವಾಗಿ ಮಾತನಾಡಿದ್ದರು ಅನ್ನೋ ಕಾರಣಕ್ಕೆ ದರ್ಶನ್ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿ ತಮ್ಮಿಬ್ಬರ ನಡುವೆ ಇನ್ನುಮುಂದೆ ಯಾವುದೇ ಸ್ನೇಹವಿಲ್ಲ ಎಂದಿದ್ದರು. ಆ ಬಳಿಕ ಸುದೀಪ್ ಹಾಗೂ ದರ್ಶನ್ ಮುಖಾಮುಖಿ ಆಗಿರಲಿಲ್ಲ. ಈ ವಿಚಾರವನ್ನು ಮಾಧ್ಯಮಗಳು ಕೆಣಕಿದರು ಸುದೀಪ್ ಹಾಗೂ ದರ್ಶನ್ ಯಾವುದೇ ವಿವರಣೆ ಕೊಟ್ಟಿರಲಿಲ್ಲ. ಸುದೀಪ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಅಂತ ದರ್ಶನ್ ಟ್ವಿಟ್ಟರ್ ನಲ್ಲಿ ಆಗ್ರಹ ಮಾಡಿದ್ದರು. ಆದರೆ ಸುದೀಪ್ ಯಾವುದೇ ವಿವರಣೆ ಕೊಟ್ಟಿರಲಿಲ್ಲ..

ಆದರೆ ಈಗ ಸುದೀಪ್ ತಮ್ಮ ಟ್ವಿಟರ್ ಮೂಲಕ ದರ್ಶನ್ ಅವರ ಕುರುಕ್ಷೇತ್ರ ಚಿತ್ರಕ್ಕೆ ಶುಭಕೋರುವ ಮೂಲಕ ಸ್ನೇಹ ಹಸ್ತ ಚಾಚಿದ್ದಾರೆ. ಇದಕ್ಕೆ ಇದಕ್ಕೆ ದರ್ಶನ್ ಯಾವ ಉತ್ತರ ಕೊಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಸುದೀಪ್ ಜೊತೆಗಿನ ಸ್ನೇಹವನ್ನು ಖಡಾಖಂಡಿತವಾಗಿ ನಿರಾಕರಿಸಿದ ದರ್ಶನ್ ಯಾವುದೇ ಕಾರ್ಯಕ್ರಮಗಳಲ್ಲೂ ಹಾಜರಾಗಿಲ್ಲ. ಸುದೀಪ್ ಕೂಡ ದರ್ಶನ್ ಅವರ ಸ್ನೇಹಕ್ಕಾಗಿ ಮುಂದೆ ಹೋಗಿರಲಿಲ್ಲ . ಕನ್ನಡ ಚಿತ್ರರಂಗದಲ್ಲಿ ದೊಡ್ಡಣ್ಣ ನಾಗಿರುವ ಅಂಬರೀಶ್ ಕೂಡ ಇವರಿಬ್ಬರ ವಿಚಾರದಲ್ಲಿ ಮೂಗು ತೂರಿಸಿಲ್ಲ. ಇವರಿಬ್ಬರ ಸ್ನೇಹ ಮುರಿದು ಬಿದ್ದ ಬಗ್ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಶ್ ಮಾತನಾಡಿದ್ದರು, ಅವರಿಬ್ಬರ ಸ್ನೇಹವನ್ನು ಅವರಿಬ್ಬರೇ ಸರಿ ಮಾಡಿಕೊಳ್ತಾರೆ ಅಂತ ಹೇಳಿಕೆ ಕೊಟ್ಟಿದ್ದರು. ಇದೀಗ ಆ ಮಾತು ಸತ್ಯವಾಗುತ್ತಿದ್ದು ನಟ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕವೇ ಸ್ನೇಹ ಹಸ್ತ ಚಾಚಿದ್ದಾರೆ.

ಭಾನುವಾರ ಸಂಜೆ ಪ್ರಭಾಕರ ಕೋರೆ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕುರುಕ್ಷೇತ್ರ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು. ಈ ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್, ಪುನೀತ್, ಶಿವಣ್ಣ ಅವರು ಅಭಿನಯ ಮಾಡ್ತಿಲ್ಲ ಅವರ ಕಾಲ್ಶೀಟ್ ಸಿಕ್ಕಿಲ್ಲ ಅಂತ ನಿರ್ಮಾಪಕ ಮುನಿರತ್ನ ಹೇಳಿದ್ರು. ಇನ್ನುಳಿದಂತೆ ಕನ್ನಡ ಚಿತ್ರರಂಗದ ಶೇ 70 ರಿಂದ 80 ರಷ್ಟು ಜನ ಈ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿನಯ ಮಾಡ್ತಿದ್ದಾರೆ ಅಂತ ಮುನಿರತ್ನ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಶಾಸಕ ಮುನಿರತ್ನ ಅವರಿಗೆ ಶುಭಾಶಯ ಕೋರಿರುವ ಸುದೀಪ್, ಈ ಸಿನಿಮಾ ದಾಖಲೆ ಸೃಷ್ಟಿಸಲಿದೆ ಎಂದಿದ್ದಾರೆ. ಜತೆಗೆ ನಟ ದರ್ಶನ್ ಅವರ ಬಗ್ಗೆಯೂ ಟ್ವೀಟ್ ಮಾಡಿರುವ ಕಿಚ್ಚ ಆ ಪಾತ್ರಕ್ಕೆ ದರ್ಶನ್ ಅವರ ಸೂಕ್ತ ಆಯ್ಕೆ . ದರ್ಶನ್ ಮಾತ್ರ ದುರ್ಯೋಧನನ ಪಾತ್ರಕ್ಕೆ ಜೀವ ತುಂಬಲು ಸಾಧ್ಯ ಅನ್ನುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡುತ್ತಿದ್ದ ಹಾಗೆ ದಚ್ಚು – ಕಿಚ್ಚನ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Leave a Reply