ರಾಜ್ಯಪಾಲರಿಂದ ನಾಳೆ ವಿದ್ಯಾ ವೀರತ್ವ ಅಭಿಯಾನಕ್ಕೆ ಚಾಲನೆ, ರಾಜ್ಯದ ಎಲ್ಲ ವಿವಿಗಳಲ್ಲೂ ಪರಮ ವೀರ ಚಕ್ರ ಪಡೆದ ಯೋಧರ ಭಾವಚಿತ್ರ ಅಳವಡಿಕೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ನಾಳೆ ವಿದ್ಯಾ ವೀರತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಆ ಮೂಲಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪರಮ ವೀರ ಚಕ್ರ ಪಡೆದ ಯೋಧರ ಭಾವಚಿತ್ರವನ್ನು ಬಿತ್ತರಿಸಲಾಗುವುದು.

ಬುಧವಾರ ರಾಜಭವನದಲ್ಲಿ ದ ಕ್ವಿಟ್ ಇಂಡಿಯಾ ಡೇ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ವಜುಭಾಯ್ ವಾಲಾ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದ ಹೀರೋ ಸುಬೇದಾರ್ ಯೋಗೇಂದ್ರ ಯಾದವ್ ಅವರು ಭಾಗವಹಿಸಲಿರುವುದು ವಿಶೇಷ.

ಮೇ 2ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವತಿಯಿಂದ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದ್ದು, ಭಾರತೀಯ ಯೋಧರ ತ್ಯಾಗ ಹಾಗೂ ವೀರತನವನ್ನು ಈಗಿನ ತಲೆಮಾರಿಗೆ ತಲುಪಿಸಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಲ್ಲದೆ ಭಾರತೀಯ ಯೋಧರನ್ನು ದೇಶದ ಹೀರೋಗಳನ್ನಾಗಿ ಬಿಂಬಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ರಾಜಭವನದಲ್ಲಿ ನಡೆಯಲಿರುವ ನಾಳಿನ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಆಹ್ವಾನಿಸಲಾಗಿದ್ದು, ಈ ಸಂದರ್ಭದಲ್ಲಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದ ಯೋಧರ ಅತ್ಯುತ್ತಮ ಗುಣ ಮಟ್ಟದ ಭಾವಚಿತ್ರವನ್ನು ರಾಜ್ಯಪಾಲರು ಉಪಕುಲಪತಿಗಳಿಗೆ ನೀಡಲಿದ್ದಾರೆ. ಇನ್ನು ಸುಬೇದಾರ್ ಯೋಗೇಂದ್ರ ಯಾದವ್ ಅವರು ಯುದ್ಧಭೂಮಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ.

Leave a Reply