ಮಾಲ್ ಗಳಲ್ಲಿ ತಂಪು ಪಾನೀಯಗಳಿಗೆ ಬೀಳುತ್ತಾ ಬ್ರೇಕ್? ಮೈಸೂರು ಜಿಲ್ಲಾಧಿಕಾರಿ ಕೊಟ್ಟ ಆದೇಶವೇನು?

ಡಿಜಿಟಲ್ ಕನ್ನಡ ಟೀಮ್:

ಇನ್ನು ಮುಂದೆ ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಗಳಲ್ಲಿ ತಂಪು ಪಾನೀಯಗಳಿಗೆ ಬ್ರೇಕ್ ಬೀಳುವ ಸೂಚನೆಗಳು ಹೆಚ್ಚಾಗುತ್ತಿವೆ. ಕಾರಣ, ಮಲ್ಟಿಪ್ಲೆಕ್ಸ್ ಗಳಲ್ಲಿ ಕಡ್ಡಾಯವಾಗಿ ಎಳನೀರು ಮಾರಾಟಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಖಡಕ್ ಆದೇಶ ನೀಡಿದ್ದು, ಈ ಕುರಿತು ಮೈಸೂರು ಚಲನಚಿತ್ರ ಒಕ್ಕೂಟಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ.

ಚಿಕ್ಕಮಗಳೂರು ಪರಿಷತ್ ಸದಸ್ಯ ಎಂ.ಕೆ.ಪ್ರಾಣೀಶ್ ಅವರು ರೈತರ ಹಿತ ದೃಷ್ಟಿಯಿಂದ ರಾಜ್ಯದ ಎಲ್ಲಾ ಮಾಲ್ ಗಳು ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಲ್ ಡ್ರಿಂಕ್ಸ್ ಮಾರಾಟಕ್ಕೆ ಬ್ರೇಕ್ ಹಾಕಿ. ರೈತರ ಉತ್ತೇಜನಕ್ಕೆ ಮಾಲ್ ಗಳಲ್ಲಿ ಎಳನೀರು ಮಾರುವಂತೆ ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದಾರೆ. ಇನ್ನು ಬರದಲ್ಲಿ ತತ್ತರಿಸಿರುವ ರೈತರ ನೆರವಿಗೆ ಧಾವಿಸಲು ತೋಟಗಾರಿಕೆ ಆಯುಕ್ತರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹೀಗಾಗಿ ಮೈಸೂರಿನ ಎಲ್ಲಾ ಮಲ್ಟಿಪ್ಲೆಕ್ಸ್, ಮಾಲ್ ಗಳಲ್ಲಿ ಎಳನೀರು ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದೇ ರೀತಿ ಇತರೆ ಜಿಲ್ಲಾಧಿಕಾರಿಗಳು ಆದೇಶ ನೀಡಿದರೆ, ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಗಳಲ್ಲಿ ಎಳನೀರು ಮಾರಾಟ ಆರಂಭವಾಗಲಿದ್ದು, ರೈತರಿಗೆ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಂತಾಗಲಿದೆ.

 

Leave a Reply