ಪ್ರಜಾಕಾರಣ, ಪ್ರಜಾನೀತಿ, ಪ್ರಜಾಕೀಯ… ‘ರಿಯಲ್ ಪರಿಕಲ್ಪನೆ’ ಬಗ್ಗೆ ಉಪೇಂದ್ರರ ವಿವರಣೆ ಏನು?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ಕುತೂಹಲ ಕೆರಳಿಸಿದ್ದ ಉಪೇಂದ್ರ ಅವರ ರಾಜಕೀಯ ಎಂಟ್ರಿ ಕುರಿತು ಸ್ಪಷ್ಟ ಚಿತ್ರಣ ಸಿಕ್ಕಿದೆ. ಬಿಜೆಪಿ ಅಥವಾ ಹೊಸ ಪಕ್ಷದ ಪೈಕಿ ಉಪೇಂದ್ರ ಅವರ ಆಯ್ಕೆ ಯಾವುದು ಎಂಬ ಪ್ರಶ್ನೆ ಮೂಡಿತು. ಈ ಎರಡರ ಪೈಕಿ ಉಪೇಂದ್ರ ಅವರು ಆಯ್ಕೆ ಮಾಡಿಕೊಂಡಿರುವುದು ಹೊಸ ಪಕ್ಷವನ್ನು.

ಪ್ರಜಾಕಾರಣ, ಪ್ರಜಾನೀತಿ, ಪ್ರಜಾಕೀಯ ಎಂಬ ಪರಿಕಲ್ಪನೆಯನ್ನು ಉಪೇಂದ್ರ ಜನರ ಮುಂದಿಟ್ಟಿದ್ದಾರೆ. ತಮ್ಮ ಈ ಪರಿಕಲ್ಪನೆಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಉಪೇಂದ್ರ ಅವರು ಹೇಳಿದಿಷ್ಟು…

‘ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ ನಮ್ಮಲ್ಲಿ ರಾಜಕೀಯ, ರಾಜನೀತಿ, ರಾಜಕಾರಣ, ರಾಜತಂತ್ರ ಎಂಬ ಮಾತುಗಳೇ ಹೆಚ್ಚಾಗಿದೆ. ಇಲ್ಲಿ ‘ರಾಜ’ ಎಂಬು ಏಕೆ ಎಂಬುದೇ ಗೊತ್ತಿಲ್ಲ. ಪ್ರಜೆಗಳನ್ನು ಜನ ಸಾಮಾನ್ಯ, ಸ್ತ್ರೀ ಸಾಮಾನ್ಯ ಎಂದು ಕರೆಯಲಾಗುತ್ತದೆ. ಆದರೆ ಪ್ರಜೆಗಳು ಸಾಮಾನ್ಯ ಅಲ್ಲ. ಆತ ಅಸಮಾನ್ಯ.

ನಮ್ಮ ರಾಜ್ಯದ ವಾರ್ಷಿಕ ಬಜೆಟ್ 2 ಲಕ್ಷ ಕೋಟಿ. ಇದು ಕೇವಲ ರಾಜ್ಯದ ಬಜೆಟ್ ಇದರ ಜತೆಗೆ ಕೇಂದ್ರಕ್ಕೂ ತೆರಿಗೆಯ ಮೂಲಕ ಹಣ ನೀಡುತ್ತಿರುವ ನಾವು ಹೇಗೆ ಸಾಮಾನ್ಯರಾಗುತ್ತೇವೆ. ನಾವು ಕೊಟ್ಟ ತೆರಿಗೆ ಹಣದಿಂದ ಪೌರ ಕಾರ್ಮಿಕರಿಂದ ಹಿಡಿದು ಮುಖ್ಯಮಂತ್ರಿಯವರೆಗೂ ಸಂಬಳ ನೀಡುತ್ತಿದೆ. ಇವರಿಗೆ ಸಂಬಳ ನೀಡಿ ಮಿಕ್ಕ ಹಣವನ್ನು ಪಾರದರ್ಶಕವಾಗಿ ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಹಿಂದಿರುಗಿಸಬೇಕು.

ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷ ಕಟ್ಟಬೇಕು ಅಂದ್ರೆ ಕೋಟಿಗಟ್ಟಲೆ ಹಣ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ನಿಲ್ಲಿಸುವಾಗ ಅವರಿದಂದ ಹಣ ಪಡೆದರೆ, ಆತ ಗೆದ್ದ ಮೇಲೆ ಸುಮ್ಮನಿರುತ್ತಾನಾ? ತಾನು ಹಾಕಿದ ಹಣವನ್ನು ಲಾಭದ ಸಮೇತ ವಾಪಸ್ ಪಡೆಯಲು ಇಚ್ಛಿಸುತ್ತಾನೆ. ಆ ರೀತಿ ನಡೆಯ ಬಾರದು ಎಂಬುದೇ ನನ್ನ ಈ ಒಂದು ಪರಿಕಲ್ಪನೆ. ದುಡ್ಡು ಯಾಕೆ ಬೇಕು? ಜಾತಿ ಯಾರಿಗೆ ಬೇಕು? ಧರ್ಮ ಯಾರಿಗೆ ಬೇಕು? ಜನರಿಗೆ ಮುಖ್ಯವಾಗಿ ಬೇಕಿರುವುದು ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳು. ಆದರೆ ಸದ್ಯದ ವ್ಯವಸ್ಥೆಯಲ್ಲಿ ಜಾತಿ ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ.

ನಮಗೆ ಜನ ನಾಯಕರೂ ಬೇಡ, ಜನ ಸೇವಕರೂ ಬೇಡ. ನಮ್ಮ ಕೆಲಸಗಳನ್ನು ಮಾಡಿಕೊಡುವ ಕಾರ್ಮಿಕ ಬೇಕು. ನಾವು ಮನೆ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅನೇಕ ಪರೀಕ್ಷೆಗಳನ್ನು ಮಾಡುತ್ತೇವೆ. ಅದೇ ರೀತಿ ನಾವು ಆಯ್ಕೆ ಮಾಡುವವರನ್ನು ಪರೀಕ್ಷಿಸಬೇಕು. ದುಡ್ಡು, ಜಾತಿ, ಜನಬಲ ಇಲ್ಲದಿದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವ ನಮ್ಮಲ್ಲಿ ಬಂದಿದೆ. ಹೀಗಾಗಿಯೇ ಅನೇಕ ಪ್ರಾಮಾಣಿಕರು ರಾಜಕೀಯದಿಂದ ದೂರ ಸರಿದಿದ್ದಾರೆ. ಈ ಎಲ್ಲ ಮನೋಭಾವವನ್ನು ತೊಡೆದು ಹಾಕಬೇಕು ಎಂಬುದೇ ನನ್ನ ಉದ್ದೇಶ ಹೀಗಾಗಿ ಒಂದು ವೇದಿಕೆಯನ್ನು ನಿರ್ಮಿಸುತ್ತಿದ್ದು, ಯಾರಿಗೆ ಆಸಕ್ತಿ ಇದೆಯೋ ಅವರಿಗೆ ಮುಕ್ತ ಆಹ್ವಾನ ನೀಡುತ್ತೇನೆ.

ಈ ಆಹ್ವಾನದಿಂದ ನನ್ನ ಮನೆಯ ಮುಂದೆ ನೂರಾರು ಜನರೊಂದಿಗೆ ಆಗಮಿಸಿ ಬೆಂಬಲ ಸೂಚಿಸುವ ಅಗತ್ಯವಿಲ್ಲ. ನಿಮ್ಮ ಊರು, ಏರಿಯಾಗಳಲ್ಲಿನ ಸಮಸ್ಯೆ, ಹಾಗೂ ಅವುಗಳನ್ನು ಪರಿಹಾರ ಮಾಡುವುದು ಹೇಗೆ ಎಂಬುದನ್ನು ನಮ್ಮ ಇ ಮೇಲ್ ಐಡಿ prajakarana1@gmail.com, prajakarana2@gmail.com, prajakarana3@gmail.com ಗೆ ಕಳುಹಿಸಿ. ಅಷ್ಟೇ ಅಲ್ಲದೆ ನಿಮ್ಮ ಅಭಿಪ್ರಾಯ ಹಾಗೂ ಐಡಿಯಾಗಳನ್ನು ರುಪ್ಪೀಸ್ ರೆಸಾರ್ಟ್ ವಿಳಾಸಕ್ಕೆ ಅಥವಾ ಈ ಇ ಮೇಲ್ ಗಳಿಗೆ ಕಳುಹಿಸಿ. ಈ ಒಂದು ಹೊಸ ಪ್ರಯತ್ನವನ್ನು ಜನರು ಸ್ವೀಕರಿಸುವ ಭರವಸೆ ಇದೆ. ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಮುಂದಿನ ನಡೆಗಳನ್ನು ನಿರ್ಧರಿಸುತ್ತೇನೆ.’

16 COMMENTS

  1. Niu obba star agirudarinda nimmanna tumba jana fallow madatare so hagagi seve madoke adikar mukya alla modalu ondu ariya tagondu development madi torisi aga adikar tanage barute HAT’S OFF your step go ahead 9620116823

  2. Sir Super cinema nodid nanage namma Karnataka hige agabeku anta anisittu bahusha innu munde aa Kansu nijvagutte anta nambike ide all the best sir.

  3. Sir handhicamp beggars ondh ondh hangadi kodsbeku avara kal melle avaru nillabeku karanataka dhali beggars belibeku
    My number 9591715451

  4. Sir caste melle school collage Ali colorship beda adharu badhlu yaru kadu madavaru nodi huduki avarige free education kodabeku matte beggars ge ondh angadi mad kodbeku sir bekadre Nana karko bedi adre e kelasa madi plz plz plz

  5. Dear sir you have non thinking ideas..keep going sir Me and my friends have a an idea to join u…change the corrupting system…we all are with u

Leave a Reply