ಭಾರತೀಯರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರುತ್ತಾ ಶಾಹಿದ್ ಅಫ್ರಿದಿ ಕೊಟ್ಟ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್:

ಭಾರತದೆಲ್ಲೆಡೆ ಇಂದು 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವೇಳೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

ಟ್ವಿಟರ್ ಮೂಲಕ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಅಫ್ರಿದಿ ಶುಭ ಕೋರಿರುವುದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಅಫ್ರಿದಿ ಅವರ ಈ ನಡೆಯನ್ನು ಬಹುತೇಕರು ಬೆಂಬಲಿಸಿದ್ದಾರೆ. ಅಂದಹಾಗೆ ಅಫ್ರಿದಿ ತಮ್ಮ ಟ್ವೀಟ್ ನಲ್ಲಿ ಶುಭಾಶಯ ಕೋರಿರುವುದು ಹೀಗೆ… ‘ಭಾರತದ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು! ಎರಡು ನೆರೆಯ ರಾಷ್ಟ್ರಗಳು ಒಟ್ಟಾಗಿ ಶಾಂತಿ, ಪ್ರೀತಿ ಹಾಗೂ ಸಹಿಷ್ಣುತೆ ಸಾಧಿಸುವ ನಿಟ್ಟಿನಲ್ಲಿ ಜತೆಯಾಗಿ ಹೆಜ್ಜೆ ಇಡಬೇಕಿದೆ. ಆ ಮೂಲಕ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿಯಬೇಕಿದೆ.’

ಅಫ್ರಿದಿಯ ಈ ಟ್ವೀಟ್ ಬೆನ್ನಲ್ಲೇ ಪಾಕಿಸ್ತಾನದ ಅನೇಕರು ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

Leave a Reply