ಇನ್ಫೋಸಿಸ್ ತೊರೆಯದಿದ್ದರೂ ಸಿಇಒ ಸ್ಥಾನಕ್ಕೆ ವಿಶಾಲ್ ರಾಜೀನಾಮೆ, ಹೇಗಿತ್ತು ಸಿಕ್ಕಾ ಹಾದಿ?

ಡಿಜಿಟಲ್ ಕನ್ನಡ ಟೀಮ್:

ಹಲವು ತಿಂಗಳುಗಳಿಂದ ಇನ್ಫೋಸಿಸ್ ಸಂಸ್ಥೆಯೊಳಗೆ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸಿಇಒ ವಿಶಾಲ್ ಸಿಕ್ಕಾ ಅವರ ನಡುವಣ ತಿಕ್ಕಾಟ ಮುಂದುವರಿದಿದ್ದು, ಅದರ ಪರಿಣಾಮ ವಿಶಾಲ್ ಸಿಕ್ಕಾ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇನ್ಫೋಸಿಸ್ ಕಂಪನಿಯಿಂದ ಹೊರಹೋಗದಿರಲು ಅವರು ನಿರ್ಧರಿಸಿದ್ದಾರೆ.

ಇನ್ಫೋಸಿಸ್ ನ ಮೊದಲ ಸಂಸ್ಥಾಪಕ ನಲ್ಲದ ಕಾರ್ಯಕಾರಿ ನಿರ್ವಾಹಕ (ನಾನ್ ಫೌಂಡರ್ ಸಿಇಓ) ರಾಗಿ ಜವಾಬ್ದಾರಿಯನ್ನು ಹೊತ್ತ ನಂತರ ಸಿಕ್ಕಾ ಕಂಪನಿಯನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದರು. ಸಂಸ್ಥೆಯೊಳಗಿನ ಅನೇಕ ಗೊಂದಲಗಳನ್ನು ಸರಿಪಡಿಸಿ ಕಂಪನಿಯನ್ನು ಲಾಭದ ಹಾದಿಗೆ ಕರೆತಂದಿದ್ದರು. ಆದರೆ ಕಳೆದ ಹಲವು ತಿಂಗಳಿನಿಂದ ನಾರಾಯಣ ಮೂರ್ತಿ ಹಾಗೂ ಸಿಕ್ಕಾ ಅವರ ನಡುವಣ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಾರಕಕ್ಕೇರುತ್ತಲೇ ಸಾಕಷ್ಟು ಸುದ್ದಿಯಾಗುತ್ತಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಸಿಕ್ಕಾ ಎರಡು ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಅಂದಹಾಗೆ, ಸದ್ಯಕ್ಕೆ ಕಂಪನಿಗೆ ಹಂಗಾಮಿ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಯು.ಬಿ ಪ್ರವೀಣ್ ಅವರು ನೇಮಕವಾಗಿದ್ದಾರೆ. ಇನ್ಫೋಸಿಸ್ ಕಂಪನಿಗೆ ಪೂರ್ಣಪ್ರಮಾಣದ ಸಿಇಒ ಸಿಗುವವರೆಗೂ ಸಿಕ್ಕಾ ಅವರನ್ನು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ (ಎಕ್ಸಿಕ್ಯುಟಿವ್ ವೈಸ್ ಚೇರ್ಮನ್).

ರಾಜೀನಾಮೆಯ ನಿರ್ಧಾರದ ಬಗ್ಗೆ ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ಬರೆದಿರುವ ಸಿಕ್ಕಾ ‘ತಮ್ಮ ವಿರುದ್ಧ ವೈಯಕ್ತಿಯ ದಾಳಿ ಹಾಗೂ ನಿಂದನೆಗಳು ಹೆಚ್ಚುತ್ತಿರುವುದು’ ರಾಜೀನಾಮೆ ನೀಡಲು ಕಾರಣ ಎಂದಿದ್ದಾರೆ.

ಇನ್ನು ಇನ್ಫೋಸಿಸ್ ನಲ್ಲಿ ಸಿಕ್ಕಾ ಅವರ ಹಾದಿ, ಯಶಸ್ಸು, ಕಾರ್ಯವೈಖರಿ ಹಾಗೂ ನಾರಾಯಣ ಮೂರ್ತಿ ಅವರ ಜತೆಗಿನ ತಿಕ್ಕಾಟದ ಕುರಿತಂತೆ ಈ ಹಿಂದೆ ಡಿಜಿಟಲ್ ಕನ್ನಡದಲ್ಲಿ ಪ್ರಕಟವಾಗಿದ್ದ ಲೇಖನಗಳು ಹೀಗಿವೆ…

Leave a Reply