ನಾಳೆ ಸಾರ್ವಜನಿಕ ವಲಯ ಬ್ಯಾಂಕ್ ನೌಕರರ ಮುಷ್ಕರ, ಇದರ ಪರಿಣಾಮಗಳೇನು?

ಡಿಜಿಟಲ್ ಕನ್ನಡ ಟೀಮ್:

ನಾಳೆ ದೇಶದಾದ್ಯಂತ ಸುಮಾರು 10 ಲಕ್ಷ ಸಾರ್ವಜನಿಕ ಬ್ಯಾಂಕು ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬ್ಯಾಂಕ್ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿವೆ.

ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆತರಲು ಮುಂದಾಗಿರುವ ಕ್ರಮಗಳನ್ನು ಮತ್ತಷ್ಟು ಹಲಪಡಿಸಲು ಮುಂದಾಗಿರುವುದನ್ನು ವಿರೋಧಿಸಿ, ಬ್ಯಾಂಕ್ ಸಂಘಗಳ ಒಕ್ಕೂಟದ ವ್ಯಾಪ್ತಿಯಲ್ಲಿರುವ ನೌಕಕರು ಮುಷ್ಕರದಲ್ಲಿ ಪಾಲ್ಗೋಳ್ಳಲಿದ್ದಾರೆ. ಈ ಮುಷ್ಕರ ಕುರಿತಂತೆ ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿವೆ.

ನಾಳೆ ಸಾರ್ವಜನಿಕ ಬ್ಯಾಂಕುಗಳ ನೌಕರರ ಮುಷ್ಕರ ಮಾತ್ರ ನಡೆಯುತ್ತಿದ್ದು, ಆಸಿಐಸಿಐ, ಎಚ್ ಡಿಎಫ್ ಸಿ, ಎಕ್ಸಿಸ್, ಕೋಟಕ್ ಮಹೀಂದ್ರನಂತಹ ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ದೇಶದಲ್ಲಿ 21 ಸಾರ್ವಜನಿಕ ವಲಯ ಬ್ಯಾಂಕುಗಳು ಒಟ್ಟಾರೆ ಶೇ.75 ರಷ್ಟು ವ್ಯವಹಾರಗಳ ಮೇಲೆ ನಿಯಂತ್ರಣ ಹೊಂದಿವೆ. ಹೀಗಾಗಿ ನಾಳೆ ದೇಶದ ಹಲವೆಡೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆಯಾಗಲಿದೆ.

Leave a Reply