ಸರಣಿ ರೈಲು ಅಪಘಾತ ನೈತಿಕ ಹೊಣೆ ಹೊತ್ತು ಸುರೇಶ್ ಪ್ರಭು ರಾಜಿನಾಮೆ? ಮೋದಿ ಅವರನ್ನು ಭೇಟಿ ಮಾಡಿ ಟ್ವಿಟರ್ ನಲ್ಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ಒಂದಾದರ ಮೇಲೆ ಒಂದರಂತೆ ರೈಲ್ವೇ ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಅವರು ಟ್ವಿಟರ್ ನಲ್ಲಿ ತಿಳಿಸಿದ್ದು, ಅವರು ಹೇಳಿರುವುದಿಷ್ಟು…

‘ಕಳೆದ ಮೂರು ವರ್ಷಗಳ ಅವಧಿಯಲ್ಲಿ ರೈಲ್ವೇ ಸಚಿವನಾಗಿ ಇಲಾಖೆಯ ಅಭಿವೃದ್ಧಿಗಾಗಿ ಬೆವರು ಸುರಿಸಿ ಕೆಲಸ ಮಾಡಿದ್ದೇನೆ. ಪ್ರಧಾನಿ ಅವರ ನೇತೃತ್ವದಲ್ಲಿ ದಶಕಗಳಿಂದ ಹದಗೆಟ್ಟಿದ್ದ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇನೆ. ಪ್ರಧಾನಿ ಅವರ ನವ ಭಾರತದ ಕನಸಿಗೆ ಆಧುನಿಕ ಹಾಗೂ ಪರಿಣಾಮಕಾರಿ ರೈಲ್ವೇ ಅಗತ್ಯವಿದೆ. ಅದೇ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಕೆಲಸ ಮಾಡುತ್ತಿದೆ. ಆದರೆ ದುರಾದೃಷ್ಟವಶಾತ್ ಇತ್ತೀಚೆಗೆ ನಡೆದ ರೈಲ್ವೇ ಅಪಘಾತಗಳಿಂದ ತೀವ್ರ ನೋವುಂಟಾಗಿದೆ. ಈ ಅಪಘಾತಗಳಿಂದ ನಾವು ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಎಲ್ಲ ಪ್ರಕರಣಗಳಿಗೆ ನೈತಿಕ ಹೊಣೆ ಹೊರಲು ನಾನು ಸಿದ್ಧನಾಗಿದ್ದು, ಪ್ರಧಾನಿ ಅವರನ್ನು ಭೇಟಿ ಮಾಡಿದೆ. ಆದರೆ ಅವರು ಇನ್ನು ಕಾಯಲು ಸೂಚನೆ ನೀಡಿದ್ದಾರೆ.’

ಹೀಗೆ ಟ್ವಿಟರ್ ನಲ್ಲಿ ತಿಳಿಸಿರುವ ಸುರೇಶ್ ಪ್ರಭು ರಾಜಿನಾಮೆ ನೀಡಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.

Leave a Reply