ರಾಜ್ಯಸಭೆಯಲ್ಲಿ ಅಮಿತ್ ಶಾ ಪ್ರಮಾಣ ವಚನ, ಮೇಲ್ಮನೆಯಲ್ಲಿ ಬಿಜೆಪಿಗಾಗುತ್ತಾ ಲಾಭ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.

ಅಮಿತ್ ಶಾ ಜತೆಗೆ ಆಯ್ಕೆಯಾಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ವಿಶೇಷ. ಈ ಇಬ್ಬರಿಗೆ ರಾಜ್ಯಸಭೆಯ ಮುಖ್ಯಸ್ಥ ವೆಂಕಯ್ಯ ನಾಯ್ಡು ಪ್ರಮಾಣವಚನ ನೀಡಿದರು. ಈ ಇಬ್ಬರಿಗೆ ಕೇಂದ್ರ ಸಚಿವರುಗಳಾದ ಅನಂತ್ ಕುಮಾರ್, ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಅಮಿತ್ ಶಾ ರಾಜ್ಯಸಭೆಯ ಆಯ್ಕೆ ಹಾಗೂ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ರಾಜ್ಯಸಭೆಯ ಮುಖ್ಯಸ್ಥರಾಗಿರುವುದು ಬಿಜೆಪಿ ಬಲ ಹೆಚ್ಚಿದಂತಾಗಿದೆ. ರಾಜ್ಯ ಸಭೆಯಲ್ಲಿನ ಸಂಖ್ಯಾಬಲದ ಕೊರತೆಯಿಂದ ಪ್ರತಿಪಕ್ಷಗಳ ಸವಾಲು ಎದುರಿಸುತ್ತಿರುವ ಸರ್ಕಾರಕ್ಕೆ ಈ ಇಬ್ಬರು ಮೇಲ್ಮನೆಗೆ ಆಯ್ಕೆಯಾಗಿರುವುದು ಯಾವ ರೀತಿಯ ಫಲ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಚುನಾವಣೆ ಚಾಣಾಕ್ಷ ಎಂದು ಬಿಂಬಿತವಾಗಿರುವ ಅಮಿತ್ ಶಾ ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಜತೆಗೂಡಿ ಪ್ರತಿಪಕ್ಷಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Leave a Reply