ಅತ್ಯಾಚಾರಿ ರಾಮ್ ರಹೀಮ್ ಗೆ 20 ವರ್ಷ ಜೈಲು

ಡಿಜಿಟಲ್ ಕನ್ನಡ ಟೀಮ್:

(ಅಪ್ ಡೇಟ್ ಮಾಹಿತಿ: 2002ರಲ್ಲಿ ಇಬ್ಬರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆರಂಭದಲ್ಲಿ ರಾಮ್ ರಹೀಮ್ ಅವರಿಗೆ 10 ವರ್ಷ ಜೈಲು ಶಿಕ್ಷೆಯಾಗಿದೆ ಎಂದು ವರದಿಯಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಎರಡೂ ಪ್ರಕರಣಗಳಲ್ಲಿ ತಲಾ 10 ವರ್ಷ ಜೈಲು ಶಿಕ್ಷೆಯಂತೆ ಒಟ್ಟು 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ಎರಡೂ ಪ್ರಕರಣಗಳಿಗೂ ತಲಾ ₹ 15 ಲಕ್ಷ ದಂಡ ವಿಧಿಸಿದೆ.)

2002 ರಲ್ಲಿ ಇಬ್ಬರು ಅಪ್ರಾಪ್ತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ವಿಚಾರಣೆಯಲ್ಲಿ ಆರೋಪಿಯಾಗಿದ್ದ ರಾಮ್ ರಹೀಮ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿತ್ತು. ಇಂದು ಈ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಇಂದು ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದಂತೆ ರಾಮ್ ರಹೀಮ್ ನಾಟಕೀಯ ಪ್ರಯತ್ನಗಳಿಗೆ ಮುಂದಾದರು. ತೀರ್ಪು ಪ್ರಕಟವಾದ ನಂತರ ಕಣ್ಣೀರಿಡುತ್ತಾ ಕರುಣೆಯ ಆಧಾರದ ಮೇಲೆ ತಮ್ಮ ಶಿಕ್ಷೆಯನ್ನು ಕಡಿಮೆಗೊಳಿಸಬೇಕು ಎಂದು ಮನವಿ ಮಾಡಿದರು. ಅಷ್ಟೆ ಅಲ್ಲದೆ ತಮ್ಮ ಕುರ್ಚಿಯಿಂದ ಮೇಲೇಳದೇ ನ್ಯಾಯಾಲಯದ ಆವರಣ ತೊರೆಯಲು ನಿರಾಕರಿಸಿದರು. ಈ ವೇಳೆ ರಾಮ್ ರಹೀಮ್ ಅವರನ್ನು ಬಲವಂತವಾಗಿ ಹಿಡಿದು ಹೊರಗೆ ಎಳಎದು ತರಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ತೀರ್ಪ ಬಂದ ಆರಂಭದಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮಾಡಿರುವುದು ಸಾಬೀತಾಗಿದ್ದರೂ ರಾಮ್ ರಹೀಮ್ ಗೆ ಕೇವಲ 10 ವರ್ಷ ಜೈಲು ಶಿಕ್ಷೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದ್ದು, ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂಬ ಕೂಗು ಕೇಳಿಬಂದಿತ್ತು.

Leave a Reply