ತೆರಿಗೆ ಕಟ್ಟದ ವೋಡಫೋನ್ ಕಂಪನಿಗೆ ಐಟಿ ಇಲಾಖೆ ವಿಧಿಸಿದ ದಂಡ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ದಶಕದಿಂದ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ವ್ಯಾವಹಾರ ನಡೆಸುತ್ತಿರುವ ವೋಡಫೋನ್ ಕಂಪನಿ ವಿರುದ್ಧ ಐಟಿ ಇಲಾಖೆ ಶಿಸ್ತು ಕ್ರಮ ಕೈಗೊಂಡಿದ್ದು, ₹ 7,900 ಕೋಟಿ ದಂಡ ವಿಧಿಸಿದೆ.

ಕಳೆದ ವರ್ಷ ನವೆಂಬರ್ 24 ರಂದು ವೋಡಫೋನ್ ಮಾಲೀಕತ್ವ ಹೊಂದಿರುವ ಸಿಕೆ ಹಟ್ಶನ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿಗೆ ₹ 7900 ಕೋಟಿಯಷ್ಟು ತೆರಿಗೆ ಪಾವತಿ ಮಾಡಬೇಕು ಎಂದು ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಇದಕ್ಕೆ ಯಾವುದೇ ರೀತಿ ಸ್ಪಂಧಿಸದ ವೋಡಫೋನ್ ಕಂಪನಿಗೆ ತೆರಿಗೆ ಇಲಾಖೆ ಅದೇ ಮೊತ್ತದ ದಂಡವನ್ನು ವಿಧಿಸಿದೆ.

ಆಗಸ್ಟ್ 9ರಂದು ಈ ದಂಡದ ಕುರಿತಂತೆ ನೋಟೀಸ್ ನೀಡಲಾಗಿದೆ. ಆದರೆ ಈ ನೋಟೀಸ್ ಕುರಿತು ಪ್ರತಿಕ್ರಿಯೆ ನೀಡಿರುವ ವೋಡಫೋನ್ ಕಂಪನಿ, ‘ನಮ್ಮ ಕಂಪನಿಯ ಮೇಲೆ ಸರಿಯಾದ ರೀತಿಯಲ್ಲಿ ತೆರಿಗೆಯನ್ನು ಹಾಕಿಲ್ಲ. ಈ ತೆರಿಗೆ ನೋಟೀಸ್ ನಿಂದ ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದಿದೆ.

Leave a Reply