ಉಗ್ರರಿಗೆ ಆರ್ಥಿಕ ನೆರವು: ದೆಹಲಿ ಮತ್ತು ಕಾಶ್ಮೀರದ 16 ಕಡೆಗಳಲ್ಲಿ ಎನ್ಐಎ ಶೋಧ

ಡಿಜಿಟಲ್ ಕನ್ನಡ ಟೀಮ್:

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ತನಿಖೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳ ಬುಧವಾರ ಹಳೆಯ ದೆಹಲಿ ಹಾಗೂ ಕಾಶ್ಮೀರದ 16 ಕಡೆಗಳಲ್ಲಿ ಶೇಧ ಕಾರ್ಯ ನಡೆಸಿದೆ.

ಹವಾಲಾ ಮೂಲಕ ಭಯೋತ್ಪಾದಕರಿಗೆ ಹಣ ಪೂರೈಸುತ್ತಿರುವ ಹಾಗೂ ಪ್ರತ್ಯೇಕತಾವಾದಿಗಳಿಗೆ ನೆರವು ನೀಡುತ್ತಿರುವ ಆರೋಪದ ಮೇಲೆ ಈ ಶೋಧ ಕಾರ್ಯ ನಡೆದಿದೆ. ಶ್ರೀನಗರ ಹಾಗೂ ಉತ್ತರ ಕಾಶ್ಮೀರದಲ್ಲಿರುವ ಅನೇಕ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು ದೆಹಲಿಯಲ್ಲಿ ಐದು ವ್ಯಾಪಾರಿಗಳ ಮೇಲೆ ತನಿಖೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರವಷ್ಟೇ ಛಾಯಾಗಾಹಕ ಪತ್ರಕರ್ತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳು ಇಂದು ಈ ದಾಳಿ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಈ ಛಾಯಾಗ್ರಾಹಕ ಕಲ್ಲು ತೂರಾಟಕ್ಕೆ ಬೆಂಬಲ ಹಾಗೂ ಸಾಮಾಜಿಕ ಜಾಲ ತಾಣದ ಮೂಲಕ ಭದ್ರತಾ ಪಡೆಗಳ ವಿರುದ್ಧ ಜನರನ್ನು ಎತ್ತಿಕಟ್ಟುವ ಆರೋಪದ ಮೇಲೆ ಬಂಧಿಸಲಾಗಿತ್ತು.

ಮೇ 30ರಂದು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣವನ್ನು ಎನ್ಐಎ ದಾಖಲಿಸಿಕೊಂಡಿದ್ದು, ಈವರೆಗೂ ಏಳು ಮಂದಿಯನ್ನು ಬಂಧಿಸಿದ. ಬಂಧಿತರು ಭಯೋತ್ಪಾದಕರಿಗೆ ಹಣ ಪೂರೈಸುವುದರ ಜತೆಗೆ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಇವರು ಹವಾಲಾ ಸೇರಿದಂತೆ ಕಾನೂನು ಬಾಹೀರವಾಗಿ ಹಣ ಸಂಗ್ರಹ, ದೇಣಿಗೆ ರೂಪದಲ್ಲಿ ಈ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

Leave a Reply