ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ಕ್ರಿಮಿನಲ್ ದಾವುದ್! ಆತನ ಲಂಡನ್ ಆಸ್ತಿ ಜಪ್ತಿ ಮಾಡಿದ ಬ್ರಿಟನ್ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ಭೂಗತ ಪಾತಕಿ ಹಾಗೂ 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ‘ಮೋಸ್ಟ್ ವಾಂಟೆಡ್ ಕ್ರಿಮಿನಲ್’ ದಾವುದ್ ಇಬ್ರಾಹಿಂ ವಿರುದ್ಧ ಕೇವಲ ಭಾರತ ಮಾತ್ರವಲ್ಲ ಬ್ರಿಟನ್ ಸರ್ಕಾರ ಕೂಡ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಬ್ರಿಟನ್ ನಲ್ಲಿ ಈತ ಹೊಂದಿರುವ ಅನೇಕ ಐಶಾರಾಮಿ ಆಸ್ತಿಪಾಸ್ತಿಗಳನ್ನು ಬ್ರಿಟನ್ ಅಧಿಕಾರಿಗಳು ಜಪ್ತಿ ಮಾಡಿದ್ದು, ಇದರ ಮೊತ್ತ 6.7 ಬಿಲಿಯನ್ ಅಮೆರಿಕನ್ ಡಾಲರ್!

ಕೊಲಂಬಿಯಾದ ಮಾದಕ ದ್ರವ್ಯ ಸಾಮ್ರಾಜ್ಯದ ಅಧಿಪತಿ ಎಂದೇ ಕರೆಯಲ್ಪಡುವ ಪಬ್ಲೊ ಎಸ್ಕೊಬರ್ ನಂತರ ದಾವುದ್ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ಕ್ರಿಮಿನಲ್ ಎಂಬ ಅಂಶವೂ ಬೆಳಕಿಗೆ ಬಂದಿದೆ. ಸದ್ಯ ಪಾಕಿಸ್ತಾನದಲ್ಲಿ ಭದ್ರ ಸೂರು ಪಡೆದಿರುವ ದಾವುದ್ ನನ್ನು ಸೆರೆ ಹಿಡಿಯಲು ಭಾರತದ ಅಧಿಕಾರಿಗಳಿಂದ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಈತನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವನ್ನು ಘೋಷಿಸಲಾಗಿದೆ.

ಈ ತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 2015ರಲ್ಲಿ ಭಾರತ ಸರ್ಕಾರ ಬ್ರಿಟನ್ ಸರ್ಕಾರಕ್ಕೆ ದಾವುದ್ ಗೆ ಸೇರಿದ ಆಸ್ತಿಪಾಸ್ತಿಗಳ ವಿವರವನ್ನು ಸಲ್ಲಿಸಿತ್ತು.

ಇತ್ತೀಚೆಗೆ ಬ್ರಿಟನ್ ಸರ್ಕಾರ ಸಿದ್ಧಪಡಿಸಿದ ಹಣಕಾಸು ನಿಷೇಧಗಳ ಪಟ್ಟಿಯಲ್ಲಿ ದಾವೂದ್ ಹೆಸರೂ ಇತ್ತು. ಹೀಗಾಗಿ ಬ್ರಿಟನ್ ಸರ್ಕಾರ ಈತನ ವಿರುದ್ಧ ಈ ಕ್ರಮಕ್ಕೆ ಮುಂದಾಗಿದೆ. ಬ್ರಿಟನ್ ಅಧಿಕಾರಿಗಳ ಪ್ರಕಾರ ದಾವುದ್ 21 ಬೇರೆ ಬೆರೆ (ಅಲಿಯಾಸ್) ಹೆಸರುಗಳಿವೆ ಅವುಗಳ ಮೂಲಕ ಬ್ರಿಟನ್ ನಲ್ಲಿ ಆಸ್ತಿ ಹೊಂದಿದ್ದಾನೆ. ಅಲ್ ಖೈದಾ ಜತೆ ನಂಟು ಹೊಂದಿರುವ ದಾವುದ್ ವಾರ್ವಿಕ್ ಶೈರ್ ನಲ್ಲಿ ಐಶಾರಾಮಿ ಹೊಟೇಲ್, ಮಿಡ್ ಲ್ಯಾಡ್ಸ್ ನಲ್ಲಿ ಅನೇಕ ಮನೆಗಳನ್ನು ಹೊಂದಿದ್ದು, ಈಗ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Leave a Reply