ಭಾರತೀಯ ಸೇನೆಗೆ ಮತ್ತೊಂದು ಬಲಿ! ಲಷ್ಕರ್ ಪ್ರಮುಖ ಉಗ್ರ ಅಬು ಇಸ್ಮಾಯಿಲ್ ಹೊಡೆದು ಹಾಕಿದ ಭದ್ರತಾ ಪಡೆ

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದಲ್ಲಿರುವ ಪ್ರಮುಖ ಉಗ್ರರ ವಿರುದ್ಧ ಭಾರತೀಯ ಸೇನೆ ಸಾರಿರುವ ಸಮರ ಮುಂದುವರಿದಿದೆ. ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ ಪ್ರದೇಶದಲ್ಲಿ ಲಷ್ಕರ್ ಸಂಘಟೆಯ ಪ್ರಮುಖ ಉಗ್ರ ಅಬು ಇಸ್ಮಾಯಿಲ್ ನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಇದರೊಂದಿಗೆ ಕಳೆದ ಒಂದು ವರ್ಷದಲ್ಲಿ ಭಾರತೀಯ ಸೇನೆಗೆ ಬಲಿಯಾದ ನಾಲ್ಕನೇ ಪ್ರಮುಖ ಉಗ್ರನಾಗಿದ್ದಾನೆ.

ಮೂಲತಃ ಪಾಕಿಸ್ತಾನದವನಾದ ಅಬು ಇಸ್ಮಾಯಿಲ್ ಅಮರನಾಥ ಯಾತ್ರಿಗಳ ಮೇಲೆ ನಡೆದ ದಾಳಿಯ ರೂವಾರಿಯಾಗಿದ್ದ. ಈ ದಾಳಿಯಲ್ಲಿ ಆರು ಮಹಿಳೆಯರು ಸೇರಿದಂತೆ ಏಳು ಯಾತ್ರಿಕರು ಹತ್ಯೆಯಾಗಿದ್ದು, 19 ಮಂದಿ ಗಾಯಗೊಂಡಿದ್ದರು. ಈಗ ಈತನನ್ನು ಎನ್ ಕೌಂಟರ್ ಮಾಡಿರುವುದು ಭದ್ರತಾಪಡೆಯ ದೊಡ್ಡ ಯಶಸ್ಸು ಎಂದು ಬಣಿಣಿಸಲಾಗುತ್ತಿದೆ.

ಜುಲೈ 12ರಿಂದಲೇ ಈತನ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ನೌಗಾಮ್ ಪ್ರದೇಶದಲ್ಲಿ ಈತ ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು, ಆ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆ ವೇಳೆ ಯಾವುದೇ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಇಂಟರ್ ನೆಟ್ ಸೇವೆಗಳನ್ನು ಬಂದ್ ಮಾಡಲಾಗಿತ್ತು.

ಕಳೆದ ವರ್ಷ ಬುರ್ಹಾನ್ ವಾನಿ ಸೇರಿದಂತೆ ನಂತರ ಸಬ್ಸಾರ್ ಬಟ್, ಅಬು ದುಜನಾ ನಂತರ ಭಾರತೀಯ ಸೇನೆಯಿಂದ ಹತ್ಯೆಯಾದ ಮತ್ತೊಬ್ಬ ಪ್ರಮುಖ ಉಗ್ರನಾಗಿದ್ದಾನೆ.

Leave a Reply