ಸಮಾಜದಲ್ಲಿ ಪ್ರತ್ಯೇಕ ಧರ್ಮದ ಕೂಗು ರೋಗವಿದ್ದಂತೆ: ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ

ಡಿಜಿಟಲ್ ಕನ್ನಡ ಟೀಮ್:

ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯಿತ ಧರ್ಮಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಇದರ ಪರ ಹಾಗೂ ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಈ ಸಂದರ್ಭದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ಇದೊಂದು ರೋಗವಿದ್ದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿವಾದದ ಕುರಿತಾಗಿ ಶನಿವಾರ ಮಾತನಾಡಿದ ಅವರು ಹೇಳಿದಿಷ್ಟು… ‘ರಾಜ್ಯದಲ್ಲಿ ಇತ್ತೀಚಿಗೆ ಲಿಂಗಾಯಿತ ಸಮುದಾಯದಲ್ಲಿ ಎರಡು ರೋಗಗಳು ಶುರುವಾಗಿವೆ. ಒಂದು ವೀರಶೈವ, ಇನ್ನೊಂದು ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು. ಸಮುದಾಯದ ಈ ಎರಡೂ ಗುಂಪುಗಳು ಆರೋಪಪ್ರತ್ಯಾರೋಪ ಮಾಡುತ್ತಾ ಪ್ರತ್ಯೇಕವಾಗುವ ಮಾತು ಕೇಳಿಬರುತ್ತಿದೆ. ಇದು ಸರಿಯಲ್ಲ. ಇದೇರೀತಿ ಕಚ್ಚಾಟ ಮುಂದುವರಿದರೆ ಸಮುದಾಯದ ಶಕ್ತಿ ಕುಗ್ಗಲಿದೆ. ಈಗಾಗಲೇ ಸಮುದಾಯದ ಶಕ್ತಿ ಕುಗ್ಗಿದೆ. ಈ ಕಚ್ಚಾಟ ಮುಂದುವರಿದರೆ ವಿವಿಧ ಕ್ಷೇತ್ರಗಳಲ್ಲಿ ಸಮುದಾಯ ಹಿಂದುಳಿಯಲಿದೆ. ಸಮುದಾಯದೊಳಗೆ ಗುಂಪು ಗಾರಿಕೆ ಬೇಡ, ದ್ವೇಷ, ಅಸೂಯೆ ಬೆಳೆಸಿಕೊಳ್ಳುವುದು ಸರಿಯಲ್ಲ. ಸಮುದಾಯದ ಜನರು ಉದ್ದಾರವಾಗಬೇಕಾದರೆ ವೀರಶೈವ ಲಿಂಗಾಯಿತರು ಒಂದೇ ಎಂಬ ಭಾವನೆ ಮೂಡಬೇಕು.’

Leave a Reply