ಸುಷ್ಮಾ ಸ್ವರಾಜ್ ಗೆ ರಾಹುಲ್ ಗಾಂಧಿ ಧನ್ಯವಾದ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ವಿಶ್ವಸಂಸ್ಥೆಯ ಭಾಷಣದಲ್ಲಿ ಕಾಂಗ್ರೆಸ್ ದೂರದೃಷ್ಟಿಯನ್ನು ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು.. ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಂದನೆಗಳನ್ನು ರವಾನಿಸಿದ್ದಾರೆ.

ಅರೆ, ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರಲ್ಲ. ಈ ಮಧ್ಯದಲ್ಲಿ ಕಾಂಗ್ರೆಸ್ ವಿಚಾರವನ್ನು ಎಲ್ಲಿ ಪ್ರಶ್ನಿಸಿದರು ಎಂದು ಅಚ್ಚರಿಯಾಗುತ್ತಿದೆಯೇ? ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಸುಷ್ಮಾ ಸ್ವರಾಜರು ತಮ್ಮ ಭಾಷಣದ ವೇಳೆ ಪಾಕಿಸ್ತಾನವನ್ನು ಟೀಕಿಸುತ್ತಾ ಭಾರತ ಐಐಟಿ ಹಾಗೂ ಐಐಎಂ ಪದವಿದರರನ್ನು ವಿಶ್ವಕ್ಕೆ ನೀಡುತ್ತಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯನ್ನು ಬಳಸಿಕೊಂಡಿರುವ ರಾಹುಲ್ ಗಾಂಧಿ, ಭಾರತದಲ್ಲಿ ಐಐಟಿ ಹಾಗೂ ಐಐಎಂ ಕಾಲೇಜುಗಳನ್ನು ಸ್ಥಾಪಿಸಿದ್ದು ಕಾಂಗ್ರೆಸ್ ಪಕ್ಷದ ಸಾಧನೆ. ಇದನ್ನು ಗುರುತಿಸಿರುವುದಕ್ಕೆ ಸುಷ್ಮಾ ಸ್ವರಾಜರಿಗೆ ಧನ್ಯವಾದ ಎಂದಿದ್ದಾರೆ ರಾಹುಲ್ ಗಾಂಧಿ.

ಈ ಕುರಿತಾಗಿ ಅವರು ಟ್ವಿಟರ್ ಮೂಲಕ ಹೇಳಿರುವುದಿಷ್ಟು… ‘ಕೊನೆಗೂ ಸುಷ್ಮಾ ಸ್ವರಾಜ್ ಅವರು ಕಾಂಗ್ರೆಸ್ ಪಕ್ಷದ ದೂರದೃಷ್ಟಿಯನ್ನು ಗುರುತಿಸಿದ್ದಾರೆ. ಐಐಟಿ ಹಾಗೂ ಐಐಎಂ ಅನ್ನು ಭಾರತದಲ್ಲಿ ಸ್ಥಾಪಿಸಿರುವುದು ಕಾಂಗ್ರೆಸ್ ಪಕ್ಷದ ಸಾಧನೆ. ಇದನ್ನು ಗುರುತಿಸಿರುವುದಕ್ಕೆ ಸುಷ್ಮಾಸ್ವರಾಜ್ ಅವರಿಗೆ ಧನ್ಯವಾದಗಳು.’

Leave a Reply