ಪಾಕಿಸ್ತಾನಕ್ಕೆ ಸುಷ್ಮಾರಿಂದ ಮಾತಿನ ಏಟು!

ಡಿಜಿಟಲ್ ಕನ್ನಡ ಟೀಮ್:

‘ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ. ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಂಟು ಜಗತ್ತಿಗೆ ಅತ್ಯುತ್ತಮ ಇಂಜಿನಿಯರ್, ಡಾಕ್ಟರ್ ಗಳನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಪೀಕಿಸ್ತಾನ ಮಾತ್ರ ಭಯೋತ್ಪಾದಕರು ಹಾಗೂ ಜಿಹಾದಿಗಳನ್ನೇಕೆ ಹುಟ್ಟುಹಾಕುತ್ತಿದೆ..?’ ಇದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜರು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ನೀಡಿದ ಮಾತಿನ ಏಟು.

ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿರುವ ಸುಷ್ಮಾ ಸ್ವರಾಜ್, ಶನಿವಾರ ರಾತ್ರಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಈ ವೇಳೆ ಕಾಶ್ಮೀರ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿದಂಕೆ ಪಾಕಿಸ್ತಾನ ಪ್ರಧಾನಿ ಭಾರತದ ಮೇಲೆ ಮಾಡಿದ್ದ ಆರೋಪಗಳಿಗೆ ಪ್ರತ್ಯುತ್ತರ ನೀಡಿದೆ. ಈ ವೇಳೆ ಅವರು ಹೇಳಿದಿಷ್ಟು…

‘ಪಾಕಿಸ್ತಾನ ತನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂದು ತನ್ನದೇ ನೆಲದಲ್ಲಿ ಬೇರುಬಿಟ್ಟಿರುವ ಭಯೋತ್ಪಾದನೆ ವಿರುದ್ಧ ಹೋರಾಡಿದ್ದರೆ, ಇಷ್ಟು ಹೊತ್ತಿಗೆ ಭಯೋತ್ಪಾದನೆಯನ್ನು ಕಿತ್ತೊಗೆಯಬಹುದಿತ್ತು. ಆ ಮೂಲಕ ವಿಶ್ವದಲ್ಲಿ ಭಯೋತ್ಪಾದನೆಯ ಹೆಸರಿಲ್ಲದಂತೆ ಮಾಡುವಲ್ಲಿ ಮಹತ್ವದ ಕೊಡುಗೆಯಾಗುತ್ತಿತ್ತು. ಭಾರತವು ಐಐಟಿ ಐಎಎಂ ಪದವಿದರರನ್ನು ತಯಾರು ಮಾಡುತ್ತಿದ್ದರೆ, ನೀವು ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಮೂಲಕ ಭಯೋತ್ಪಾದಕರನ್ನು ಹಾಗೂ ಜಿಹಾದಿಗಳನ್ನು ಹುಟ್ಟುಹಾಕುತ್ತಿದ್ದೀರಿ. ನಾವು ಸೃಷ್ಟಿಸುವ ವೈದ್ಯರು ಜೀವವನ್ನು ಉಳಿಸಿದರೆ, ನೀವು ಸೃಷ್ಟಿಸುತ್ತಿರುವ ಜಿಹಾದಿಗಳು ಜೀವವನ್ನು ತೆಗೆಯುತ್ತಿದ್ದಾರೆ.

ಹಿಂಸಾಚಾರ, ಹತ್ಯೆ, ಭಯೋತ್ಪಾದನೆ, ಅಮಾನವೀಯ ಕೃತ್ಯಗಳನ್ನು ನಡೆಸುವ ದೇಶ ಇಂದು ಈ ಜಾಗತಿಕ ವೇದಿಕೆಯಲ್ಲಿ ಮಾನವೀಯತೆಯ ಬೋಧನೆ ಮಾಡುತ್ತಿರುವುದು ದುರಾದೃಷ್ಟಕರ.’

ಹೀಗೆ ತಮ್ಮ ತೀಕ್ಷ್ಮ ಮಾತುಗಳಲ್ಲೇ ಪಾಕಿಸ್ತಾನದ ಮಾನವನ್ನು ಮೂರು ಕಾಸಿಗೆ ಹರಾಜಾಕಿದ ಸುಷ್ಮಾ ಸ್ವರಾಜ್, ತಮ್ಮ ಭಾಷಣದಲ್ಲಿ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಯ ವಿಷಯದ ಬಗ್ಗೆಯೂ ಪ್ರಸ್ತಾಪಿಸಿದರು.

Leave a Reply