“ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ” ಎಂದ ಚಂಪಾ ಸಮ್ಮೇಳನಾಧ್ಯಕ್ಷ !

ಡಿಜಿಟಲ್ ಕನ್ನಡ ಟೀಮ್:

ಮೈಸೂರಿನಲ್ಲಿ ನವೆಂಬರ್ 24ರಿಂದ 26 ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ  ಪ್ರೊ. ಚಂದ್ರಶೇಖರ ಪಾಟೀಲ  ಆಯ್ಕೆಯಾಗಿದ್ದಾರೆ.

ಕವಿ,ನಾಟಕಕಾರ, ಪತ್ರಿಕಾಸಂಪಾದಕ ಹೀಗೆ  ಸಾಹಿತ್ಯದ ಜೊತೆ ಜೊತೆಗೆ  ಹೋರಾಟದ ವಿಭಿನ್ನ ನೆಲೆಗಳಲ್ಲಿ ಛಾಪು ಮೂಡಿಸಿರುವವರು  ಚಂಪಾ. ತಮ್ಮ ಸಾಧನೆಗೆ ಸಂದ ಪಂಪ ಪ್ರಶಸ್ತಿಯನ್ನು ಕಲ್ಬುರ್ಗಿಯವರ ಹತ್ಯೆ ಖಂಡಿಸಿ ಸರ್ಕಾರಕ್ಕೆ ಮರಳಿಸಿದ್ದರು.

ತಮ್ಮ ಮೊನಚಾದ ಮಾತು, ಬರವಣಿಗೆಯಿಂದ ಅನಂತಮೂರ್ತಿ ಆದಿಯಾಗಿ ಬಹುತೇಕ ಎಲ್ಲರಿಗೂ ಚಾಟಿ ಬೀಸಿದ್ದು ಮರೆಯುವಂತಿಲ್ಲ. ಆದಾಗಿಯೂ ವಯಕ್ತಿಕ ನೆಲೆಗಟ್ಟಿನಲ್ಲಿ ಸ್ನೇಹಪರತೆಯನ್ನು ಕಳೆದುಕೊಂಡವರಲ್ಲ. ವಿಷಯಾಧಾರಿತ ಚರ್ಚೆಗೆ ಸದಾ ತೆರೆದುಕೊಳ್ಳುತ್ತಲೇ ಕನ್ನಡಪರ, ಪ್ರಗತಿಪರ ಹೋರಾಟಗಳಲ್ಲಿ ಇವತ್ತಿಗೂ ಸಕ್ರಿಯರಾಗಿದ್ದಾರೆ .

Leave a Reply