ಕಿರಿಕ್ ಪಾರ್ಟಿ ಚಿತ್ರದ ಹಾಡಿಗೆ ಕೊಹ್ಲಿ-ಅನುಷ್ಕಾ ಕುಣಿದರೆ ಹೇಗಿರುತ್ತೇ? ಇಲ್ಲಿದೆ ನೋಡಿ

ಡಿಜಿಟಲ್ ಕನ್ನಡ ಟೀಮ್:

ಬೆಸ್ಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿರುವ ಕ್ರಿಕೆಟ್-ಬಾಲಿವುಡ್ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಕನ್ನಡದ ಯಶಸ್ವಿ ಚಿತ್ರ ಕಿರಿಕ್ ಪಾರ್ಟಿಯ ಹಾಡಿಗೆ ಕುಣಿದರೆ ಹೇಗಿರುತ್ತದೆ? ಅದರಲ್ಲೂ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ” ಹಾಡಿಗೆ ಈ ಜೋಡಿ ಕುಣಿದರೆ ಹೇಗಿರುತ್ತದೆ? ಈ ಒಂದು ಆಲೋಚನೆ ಮಾಡಿದ ರಾಘವೇಂದ್ರ ಎಂಬುವವರು, ಈ ಹಾಡಿಗೆ ಈ ಜೋಡಿಯ ಜಾಹೀರಾತು ಹಾಗೂ ಚಿತ್ರದ ತುಣುಕನ್ನು ಸೇರಿಸಿ ಹೊಸದಾಗಿ ಎಡಿಟ್ ಮಾಡಿದ್ದಾರೆ.

ಈ ಹಾಡಿನ ಹೊಸ ವರ್ಷನ್ ನೋಡುತ್ತಿದ್ದರೆ, ಈ ಜೋಡಿಗಾಗಿಯೇ ಈ ಹಾಡನ್ನು ಮಾಡಲಾಗಿದೆ ಎಂದು ಅನಿಸುವುದು ಖಚಿತ. ಈ ಚಿತ್ರದ ಹಾಡನ್ನು ಮೇಲೆ ನೀಡಲಾಗಿದ್ದು, ನೋಡಿ ಆನಂದಿಸಿ.

Leave a Reply