ಬಿಬಿಎಂಪಿಯಲ್ಲಿ ಮುಂದುವರಿದ ಕಾಂಗ್ರೆಸ್-ಜೆಡಿಎಸ್ ದೋಸ್ತಿ, ಮೇಯರ್ ಆಗಿ ಸಂಪತ್ ರಾಜ್- ಉಪಮೇಯರ್ ಆಗಿ ಪದ್ಮಾವತಿ ಆಯ್ಕೆ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮೇಯರ್ ಆಗಿ ಕಾಂಗ್ರೆಸ್ ಸದಸ್ಯ ಸಂಪತ್ ರಾಜ್ ಅವರು ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷದ ಪದ್ಮಾವತಿ  ನರಸಿಂಹಮೂರ್ತಿ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರಿದಿದೆ.

ಗುರುವಾರ ನಡೆದ ಮೇಯರ್ ಆಯ್ಕೆ ಚುನಾವಣೆಯಲ್ಲಿ 139 ಮತಗಳನ್ನು ಪಡೆದ ಸಂಪತ್ ರಾಜ್ ಮಹಾಪೌರರಾಗಿ ಆಯ್ಕೆಯಾದರು. ದೇವರ ಜೀವನಹಳ್ಳಿ ವಾರ್ಡಿನ ಸಂಪತ್ ರಾಜ್ ಅವರು ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ಇನ್ನು ಪದ್ಮಾವತಿ ಅವರು 138 ಮತಗಳನ್ನು ಪಡೆದು ಗೆದ್ದಿದ್ದಾರೆ

ಇನ್ನು ಚುನಾವಣೆ ಆರಂಭವಾಗುವ ಮುನ್ನ ನಡೆದ ಹೈಡ್ರಾಮದಲ್ಲಿ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಮತದಾನ ಬಹಿಷ್ಕರಿಸಿ ಸಭಾತ್ಯಾಗ ಮಾಡಿ, ಚುನಾವಣೆ ಬಹಿಷ್ಕರಿಸಿದರು.

ಇನ್ನು ತಮ್ಮ ಅಭ್ಯರ್ಥಿ ಗೆದ್ದ ಸಂಭ್ರಮಾಚರಣೆಯಲ್ಲಿ ನಿರತರಾದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು, ಪಟಾಕಿ ಸಿಡಿಸಿ ತಮ್ಮ ಹರ್ಷ ವ್ಯಕ್ತಪಡಿಸಿದರು. ಈ ಎರಡು ಪಕ್ಷದವರು ಸಂಭ್ರಮ ಮುಗಿಯುತ್ತಿದ್ದಂತೆ ಬಿಬಿಎಂಪಿ ಕಚೇರಿ ಆವರದಲ್ಲಿ ಪೊರಕೆ ಹಿಡಿದು ನಿಂತ ಬಿಜೆಪಿ ನಾಯಕರು ನಾವು ಸ್ವಚ್ಛ ಭಾರತಕ್ಕೆ ಪ್ರಾಮುಖ್ಯತೆ ನೀಡುತ್ತೇವೆ ಎಂದು ಹೇಳು, ಪಟಾಕಿ ಸಿಡಿಸಿದ್ದರಿಂದ ಬಿದ್ದಿದ್ದ ಕಸವನ್ನು ತೆಗೆಯುವಲ್ಲಿ ನಿರತರಾದರು.

Leave a Reply