ಸುರಕ್ಷಿತ ರಸ್ತೆ ಸಂಚಾರದ ಬಗ್ಗೆ ಬೆಂಗಳೂರು ಪೊಲೀಸರಿಂದ ಟ್ರಾಲ್ ಸಂದೇಶ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಗಳದ್ದೇ ಹವಾ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಸುರಕ್ಷಿತ ರಸ್ತೆ ಸಂಚಾರದ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಟ್ರಾಲ್ ಮಾರ್ಗವನ್ನೇ ಅನುಸರಿಸಿವೆ.

ಡಬ್ಲ್ಯೂಡಬ್ಲ್ಯೂಇ, ಗೇಮ್ ಆಫ್ ಥ್ರೋನ್, ಸೂಪರ್ ಹೀರೋಗಳು, ಹಾಲಿವುಡ್ ಸಿನಿಮಾ, ಕ್ರಿಕೆಟ್ ಸೇರಿದಂತೆ ಯುವಕರನ್ನು ಆಕರ್ಷಿಸಿರುವ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಟ್ರಾಲ್ ಮೂಲಕ ಸಂದೇಶ ರವಾನಿಸಲು ಬೆಗಳೂರು ಪೊಲೀಸರು ಮುಂದಾಗಿದ್ದಾರೆ. ಟ್ವಿಟರ್ ಹಾಗೂ ಫೇಸ್ ಬುಕ್ ಗಳಲ್ಲಿ ಈ ಟ್ರಾಲ್ ಸಂದೇಶಗಳು ಸಾಕಷ್ಟು ಗಮನ ಸೆಳೆಯುತ್ತಿದ್ದು, ಬೆಂಗಳೂರು ಪೊಲೀಸರ ಈ ಪ್ರಯತ್ನ ಹೇಗಿದೆ ಎಂಬುದನ್ನು ನೋಡೋಣ ಬನ್ನಿ…

ಟ್ವಿಟರ್ ನಿಂದ ಆಯ್ಕೆ ಮಾಡಿಕೊಳ್ಳಲಾದ ಟ್ರಾಲ್ ಸಂದೇಶಗಳು…

ಫೇಸ್ ಬುಕ್ ನಿಂದ ಆರಿಸಿಕೊಳ್ಳಾಗಿರುವ ಸಂದೇಶಗಳು…

 

ಬೆಂಗಳೂರು ಪೊಲೀಸರ ಈ ಟ್ರಾಲ್ ಸಂದೇಶಗಳನ್ನು ನೋಡಿ ಆನಂದಿಸಿದ ನೀವು, ಅದೇ ರೀತಿ ಸಂಚಾರಿ ನಿಯಮಗಳನ್ನು ಪಾಲಿಸಿ.

Leave a Reply