ವಿನಯ್ ಅಪಹರಣ ಯತ್ನ ಪ್ರಕರಣ: ಪೊಲೀಸರ ನೊಟೀಸ್ ಗೆ ಬಿಎಸ್ ವೈ ಉತ್ತರ ಏನು?

ಡಿಜಿಟಲ್ ಕನ್ನಡ ಟೀಮ್:

‘ನಾನು ಪೊಲೀಸ್ ಠಾಣೆಗೆ ಬರಲ್ಲ… ನೀವೇ ಬಂದು ಮಾಹಿತಿ ಪಡೆದುಕೊಳ್ಳಿ…’ ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮಹಾಲಕ್ಷ್ಮಿ ಲೇಒಟ್ ಪೊಲೀಸರ ನೊಟೀಸ್ ಗೆ ನೀಡಿದ ಉತ್ತರ.

ಬಿಜೆಪಿ ನಾಯಕ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದನಿದ್ದೇನೆ. ಆದರೆ ನಾನು ಬರಲ್ಲ, ನೀವೇ ಬಂದು ಮಾಹಿತಿ ಪಡೆಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉತ್ತರಿಸಿದ್ದಾರೆ.

‘ಪೊಲೀಸ್ ಠಾಣೆಗೆ ಆಗಮಿಸಿ ತನಿಖಾಧಿಕಾರ ಎದುರು ಹಾಜರಾಗುವಂತೆ ಮಹಾಲಕ್ಷ್ಮಿ ಲೇಔಟ್ ಠಾಣೆಯಿಂದ ನನಗೆ ನೋಟೀಸ್ ನೀಡಲಾಗಿದೆ. ಆದರೆ ನನ್ನ ಬಳಿ ಇರುವ ಯಾವ ದಾಖಲೆ ಬೇಕು ಎಂದು ತಿಳಿಸಿಲ್ಲ. ಅಲ್ಲದೆ 65 ವರ್ಷ ವಯಸ್ಸು ದಾಟಿದ್ದು, ನನ್ನನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದರೆ ಸಿಆರ್ ಪಿಸಿ 160 ಕಲಂ ಅನ್ವಯ ತನಿಖಾಧಿಕಾರಿಯೇ ಬಂದು ಮಾಹಿತಿ ಪಡೆಯಬೇಕು. ಪೊಲೀಸರು ನನಗೆ ನೋಟಿಸ್ ನೀಡಿದ್ದ ವಿಳಾಸಕ್ಕೆ ಬಂದು ಮಾಹಿತಿ ಪಡೆಯಬೇಕಿತ್ತು. ಆದರೆ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ನಾನು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದನಿದ್ದೇನೆ, ಪ್ರಕರಣದ ಸತ್ಯ ಹೊರಬರಬೇಕಿದೆ. ಹಾಗಾಗಿ ನನ್ನ ಬಳಿ ಬಂದರೆ ಸಹಕಾರ ನೀಡುತ್ತೇನೆ’ ಎಂದಿದ್ದಾರೆ.

Leave a Reply