ಮುಖ್ಯಮಂತ್ರಿಗಳ ಕಾರ್ಯಕ್ರಮದ ನಂತರ ಬಿಸಾಡಿದ್ದ ಅನ್ನ ತಿಂದು ಸತ್ತವು 100ಕ್ಕೂ ಹೆಚ್ಚು ಕುರಿಗಳು!

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಕೊಪ್ಪಳದ ಹೊರ ವಲಯದ ಹೊಸಪೇಟೆ ರಸ್ತೆಯಲ್ಲಿ ₹ 1500 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದ ಸೈಡ್ ಎಫೆಕ್ಟ್ ಆಗಿ ಈಗ 100ಕ್ಕೂ ಹೆಚ್ಚು ಕುರಿಗಳು ಸತ್ತಿವೆ.

ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಆಗಮಿಸಿದ್ದು, ಇವರಿಗಾಗಿ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಉಳಿದು ಹೋಗಿದ್ದು, ಇದನ್ನು ಹಾಗೇ ವೇದಿಕೆಯ ಪಕ್ಕದಲ್ಲೇ ಸುರಿಯಲಾಗಿತ್ತು. ಅಲ್ಲಿಯೇ ಬಿಸಾಡಿದ್ದ ಪಲಾವ್ ಹಾಗೂ ಕೇಸರಿ ಬಾತ್ ಗಳು ಕೊಳೆತಿದ್ದು, ಅದನ್ನು ತಿಂದ ನೂರಕ್ಕೂ ಹೆಚ್ಚು ಕುರಿಗಳು ಈಗ ಸತ್ತಿವೆ.

ಸೋಮಣ್ಣ ಪೂಜಾರ ಎಂಬುವರಿಗೆ ಸೇರಿದ ಈ ಕುರಿಗಳು ಸೇರಿದ್ದು, ಇವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂ ಮೂಲದ ಕುರಿಗಾಯಿಯಾಗಿದ್ದಾರೆ. ಇತ್ತೀಚೆಗಷ್ಟೇ ಇವರು ತಮ್ಮ ಕುರಿಗಳನ್ನು ಕಟ್ಟಿಕೊಂಡು ಕೊಪ್ಪಳಕ್ಕೆ ಆಗಮಿಸಿದ್ರು. ಕಳೆದ ಎರಡು ದಿನಗಳಲ್ಲಿ 15 ಮರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಕುರಿಗಳು ಸತ್ತಿದ್ದು, ಸುಮಾರು ₹ 10 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Leave a Reply