ಅಪ್ರಾಪ್ತೆಯ ಕಿಡ್ನಾಪ್ ವಿಡಿಯೋ ವೈರಲ್, ಮಹಿಳೆಯರ ಸಾಧನೆಯಿಂದ ಹೆಮ್ಮೆಪಡುವಾಗಲೇ ನಡೆಯುತ್ತಿದೆ ತಲೆತಗ್ಗಿಸುವ ಕೃತ್ಯ

ಡಿಜಿಟಲ್ ಕನ್ನಡ ಟೀಮ್:

ಒಂದೆಡೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತಿದ್ದರೆ, ಮತ್ತೊಂದೆಡೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇತ್ತೀಚೆಗೆ ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಭಾರತದ ಪರವಾಗಿ ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ವಾದ ಮಂಡಿಸಿದ ಭಾರತದ ಮೂವರು ಮಹಿಳೆಯರನ್ನು ನೋಡಿ ನಾವೆಲ್ಲರೂ ಹೆಮ್ಮೆಪಟ್ಟೆವು. ಆದರೆ ಜೋಧ್ಪುರದಲ್ಲಿ ಅಪ್ರಾಪ್ತೆಯನ್ನು ಅಪರಣ ಮಾಡಿಕೊಂಡು ಹೋಗುತ್ತಿರುವುದು ಹಾಗೂ ಅದನ್ನು ಪ್ರತಿಭಟಿಸಿದ ಆಕೆಯ ತಾಯಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಈಗ ನಾವೆಲ್ಲರೂ ನಾಚಿಕೆಪಡುವಂತೆ ಮಾಡಿದೆ.

ಈ ವಿಡಿಯೋ ವೈರಲ್ ಆಗಿದ್ದು, ಇದರ ಹಿಂದಿನ ಕಥೆ ಹೀಗಿದೆ…

ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಆಕೆಯ ತಂದೆ ಅಮಾದ್ ಖಾನ್, ಶೌಕತ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದ. ಆದರೆ ಆ ಹುಡುಗಿ ಹಾಗೂ ಆಕೆಯ ತಾಯಿಗೆ ಚಿಕ್ಕ ವಯಸ್ಸಿನಲ್ಲೇ ಗಂಡನ ಮನೆಗೆ ಕಳುಹಿಸಲು ಇಷ್ಟವಿರಲಿಲ್ಲ. ಹೀಗಾಗಿ ಆ ಹುಡುಗಿಯನ್ನು ಆಕೆಯ ತಾಯಿ ಮನೆಯಲ್ಲಿಯೇ ಇರಿಸಿಕೊಂಡಿದ್ದಳು.

ಇದನ್ನು ಸಹಿಸದ ಶೌಕತ್ ತನ್ನ ಸ್ನೇಹಿತ ಇಲಿಯಾಸ್ ಎಂಬಾತನ ಸಹಾಯದೊಂದಿಗೆ ಆ ಹುಡುಗಿಯನ್ನು ಸೆಪ್ಟೆಂಬರ್ 11ರಂದು ಬಲವಂತವಾಗಿ ಎಳೆದುಕೊಂಡು ಟ್ರಾಕ್ಟರ್ ಮೂಲಕ ಕರೆದುಕೊಂದು ಹೋದರು. ಹೀಗೆ ತನ್ನ ಮಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದಕ್ಕೆ ತಾಯಿ ಅಡ್ಡಿಪಡಿಸಲು ಮುಂದಾದಳು. ಈ ವೇಳೆ ಶೌಕತ್ ಹಾಗೂ ಆತನ ಸ್ನೇಹಿತ ಇಲಿಯಾಸ್ ಯಾವುದೇ ಕರುಣೆ ಇಲ್ಲದೆ ಅಮಾನವೀಯವಾಗಿ ತಾಯಿಯ ಮೇಲೆ ಹಲ್ಲೆ ನಡೆಸಿ ಆ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Leave a Reply