ರೈಲ್ವೇ ಸುರಕ್ಷತೆಗಾಗಿ ಇಸ್ರೋ ನೆರವು!

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತಗಳು ಹಾಗೂ ಹಳಿತಪ್ಪಿದ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಸುರಕ್ಷತೆಗಾಗಿ ಇಸ್ರೋ ಜತೆ ಕೈಜೋಡಿಸಲಿದೆ. ಈ ಕುರಿತಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಮಾಹಿತಿ ನೀಡಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಂಡು ಸುರಕ್ಷತೆಗೆ ಒತ್ತು ನೀಡುವ ಕುರಿತಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. ಗುರುವಾರ ಈ ಬಗ್ಗೆ ಮಾತನಾಡಿದ ಅವರ ಹೇಳಿದಿಷ್ಟು…

‘ಭಾರತೀಯ ರೈಲ್ವೆಯು ಸುರಕ್ಷಿತ ರೈಲ್ವೇ ಸಂಚಾರಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ನೆರವು ಪಡೆಯಲು ಚಿಂತನೆ ನಡೆಸಿದೆ. ಕೆಲದಿನಗಳ ಹಿಂದೆ ಇಸ್ರೋ ಮುಖ್ಯಸ್ಥ ಎ.ಎಸ್ ಕಿರನ್ ಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದೆ.

ಭಾರತೀಯ ರೈಲ್ವೆಯಲ್ಲಿ ಸದ್ಯಕ್ಕೆ ಸುರಕ್ಷತೆ ಅತ್ಯಂತ ಪ್ರಮುಖ ಅಂಶವಾಗಿದೆ. ನಮ್ಮಿಬ್ಬರ ಭೇಟಿಯ ವೇಳೆ ನಡೆದ ಮಾತುಕತೆಯಲ್ಲಿ ಸಾಕಷ್ಟು ಅಂಶಗಳು ಚರ್ಚೆಯಾಗಿದ್ದು, ಇಸ್ರೋದ ಮೂಲಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಭಾರತೀಯ ರೈಲ್ವೆಯಲ್ಲಿ ಅಳವಡಿಸಲು ಉತ್ಸುಕನಾಗಿದ್ದೇನೆ. ಭಾರತೀಯ ರೈಲ್ವೆಯ ಸುರಕ್ಷತೆಯ ಅಗತ್ಯಕ್ಕೆ ತಕ್ಕಂತೆ ಇಸ್ರೋ ತಂತ್ರಜ್ಞಾನದ ರೂಪಿಸುತ್ತಿದ್ದು ಇದರಿಂದ ಸಹಜವಾಗಿ ರೈಲ್ವೇ ಸುರಕ್ಷತೆಯ ಗುಣಮಟ್ಟ ಹೆಚ್ಚಲಿದೆ.

1960ರಲ್ಲಿ ಮೋದಲ ಬಾರಿಗೆ ಭಾರತೀಯ ರೈಲ್ವೇ ಸಣ್ಣ ಪ್ರಮಾಣದಲ್ಲಿ ಕಂಪ್ಯೂಟರ್ ಬಳಕೆ ಆರಂಭಿಸಿತು. ನಂತರ 1985ರ ವೇಳೆಗೆ ಪ್ರಯಾಣಿಕರ ಮುಂಗಡ ಟಿಕೆಟ್ ಖರೀದಿ ವ್ಯವಸ್ಥೆ ಜಾರಿಯಾಗಿತ್ತು. ಬ್ಯಾಂಕುಗಳಲ್ಲಿ ಕಂಪ್ಯೂಟರ್ ಗಳ ಬಳಕೆ 1990ರ ದಶಕದಲ್ಲಿ ಆರಂಭವಾಗಿದ್ದು, ಭಾರತೀಯ ರೈಲ್ವೇ ಅದಕ್ಕೂ ಅನೇಕ ದಶಕಗಳ ಹಿಂದೆಯೇ ಕಂಪ್ಯೂಟರ್ ಬಳಸಿದ್ದು ಸಾಕಷ್ಟು ಕುತೂಹಲ ಮೂಡಿಸಿತು. ಇದೇ ರೀತಿ ಈಗ ಭಾರತೀಯ ರೈಲ್ವೇ ಬಾಹ್ಯಾಕಾಶ ತಂತ್ರಜ್ಞಾನ ಅಳವಡಿಕೆಗೆ ಸಜ್ಜಾಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ರೈಲ್ವೇ ಸಂಚಾರ ಸೇವೆ ಸಿಗುವ ಭರವಸೆ ಇದೆ.’

Leave a Reply