ಪ್ರವಾಸಿ ತಾಣದ ಪಟ್ಟಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟಿತೇ ಯೋಗಿ ಸರ್ಕಾರ? ಏನಿದು ಹೊಸ ವಿವಾದ?

ಡಿಜಿಟಲ್ ಕನ್ನಡ ಟೀಮ್:

ತಾಜ್ ಮಹಲ್… ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಎಂದು ಹೆಸರು ಪಡೆದಿರೋ ಹಾಗೂ ಪ್ರತಿ ವರ್ಷ ಕೊಟಿಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣ. ಆದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರದ ಪ್ರಕಾರ ಈ ತಾಜ್ ಮಹಲ್ ಪ್ರವಾಸಿ ತಾಣ ಅಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಉ.ಪ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಬಿಡುಗಡೆ ಮಾಡಿರುವ ಪ್ರವಾಸಿ ಕರಪುಸ್ತಕದಲ್ಲಿ ಈ ತಾಜ್ ಮಹಲ್ ಪ್ರವಾಸಿ ತಾಣಗಳ ಪಟ್ಟಿಯಿಂದ ಕಣ್ಮರೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಪ್ರವಾಸೋದ್ಯಮವನ್ನು ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ವಿವರ ನೀಡಲು ಪುಸ್ತಕವನ್ನು ಮುದ್ರಿಸಿದ್ದು, ಈ ಪುಸ್ತಕದಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್ ಹೆಸರೇ ಇಲ್ಲದಿರುವುದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಅಲ್ಲದೆ, ಯೋಗಿ ಸರ್ಕಾರದ ವಿರುದ್ಧ ಜನರು ಕಿಡಿ ಕಾರುತ್ತಿದ್ದಾರೆ.

ಈ ಪುಸ್ತಕದ ಮುಖಪುಟದಲ್ಲಿ ಗಂಗಾ ಆರತಿಯ ಚಿತ್ರವನ್ನು ಮುದ್ರಿಸಲಾಗಿದ್ದು, ‘ಅಪಾರ ಸಂಭಾವ್ನಾಯೇ’ ಎಂಬ ಶೀರ್ಷಿಕೆ ನೀಡಲಾಗಿದೆ. ಸರ್ಕಾರ ಈ ಹಿಂದೆ ತಾಜ್ ಮಹಲ್ ಅನ್ನು ಉತ್ತರ ಪ್ರದೇಶದ ಸಾಂಸ್ಕೃತಿಕ ಪಾರಂಪರೆಯ ಪಟ್ಟಿಯಿಂದ ಕೈ ಬಿಟ್ಟಿತ್ತು. ಹೀಗಾಗಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವುದರ ಜತೆಗೆ ಯೋಗಿ ಅವರ ಸರ್ಕಾರ ಕೇವಲ ಹಿಂದೂ ಪುರಾತನ ಕ್ಷೇತ್ರಗಳತ್ತ ಮಾತ್ರ ಗಮನ ಹರಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನು ಈ ಹಿಂದೆ ತಾಜ್ ಮಹಲ್ ಭಾರತದ ಸಾಂಸ್ಕೃತಿಕ ಪರಂಪರೆಯ ಭಾಗವೇ ಅಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯೆ ನೀಡಿದ್ದರು. ‘ಮಧ್ಯಕಾಲಿಕ ಹಾಗೂ ಮೋಘಲ್ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾದ ಸ್ಮಾರಕಗಳು, ಗೋಪುರಗಳು ಭಾರತದ ಪಾರಂಪರಿಕ ಇತಿಹಾಸದ ಭಾಗವಾಗುವುದಿಲ್ಲ’ ಎಂದು ಯೋಗಿ ಅವರು ಹೇಳಿಕೆ ನೀಡಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಅವರು ಮೋಘಲರು ಲೂಟಿಕೊರರು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ‘ತಾಜ್ ಮಹಲ್ ಒಂದು ಅತ್ಯದ್ಭುತ ಸ್ಮಾರಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಕಟ್ಟಿದ ಕಾರ್ಮಿಕರ ಕೈಗಳನ್ನು ಶಹಜಹಾನ್ ಕತ್ತರಿಸಿದ್ದ. ಇದು ಭಾರತೀಯ ಸಂಸ್ಕೃತಿಯಲ್ಲ’ ಎಂದಿದ್ದರು.

ಆದರೆ ತಾಜ್ ಮಹಲ್ ಅನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವರದಿಯನ್ನು ತಳ್ಳಿಹಾಕಿರುವ ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವೆ ರಿತಾ ಬಹುಗುಣ ಜೋಷಿ, ‘ಅದು ಸುಳ್ಳು ಆರೋಪ. ಉತ್ತರ ಪ್ರದೇಶ ಸರ್ಕಾರ ತಾಜ್ ಮಹಲ್ ಅನ್ನು ಕಡೆಗಣಿಸುತ್ತಿಲ್ಲ. ತಾಜ್ ಮಹಲ್ ಉತ್ತರ ಪ್ರದೇಶದ ಪ್ರಖ್ಯಾತ ಸ್ಥಳ. ಇದನ್ನು ಸರ್ಕಾರ ಕಡೆಗಣಿಸುತ್ತಿದೆ ಎಂಬ ಸುಳ್ಳು ಸಂದೇಶ ರವಾನೆಯಾಗುವುದು ಬೇಡ. ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮದ ಅಭಿವೃದ್ಧಿಗೆ ಸುಮಾರು ₹ 370 ಕೋಟಿಯಷ್ಟು ಮೀಸಲಿಟ್ಟಿದ್ದು, ಅದರಲ್ಲಿ ಅರ್ಧದಷ್ಟು ಅಂದರೆ ಸುಮಾರು ₹ 150 ಕೋಟಿ ಮೊತ್ತದ ಯೋಜನೆಯ ಮೂಲಕ ತಾಜ್ ಮಹಲ್ ಹಾಗೂ ಸುತ್ತಮುತ್ತಲ ಪ್ರದೇಶಕ್ಕಾಗಿ ನಿಗದಿಮಾಡಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಟ್ವಿಟರ್ ನಲ್ಲಿ ಈ ವಿಷಯವಾಗಿ ಯೋಗಿ ಅವರ ಸರ್ಕಾರವನ್ನು ಟೀಕಿಸಲಾಗಿದ್ದು, ಆ ಪೈಕಿ ಪ್ರಮುಖ ಟ್ವೀಟ್ ಗಳು ಹೀಗಿವೆ…

https://twitter.com/snbhatnagar296/status/915086541034160128?ref_src=twsrc%5Etfw&ref_url=http%3A%2F%2Fwww.business-standard.com%2Farticle%2Fcurrent-affairs%2Ftaj-mahal-dropped-from-up-tourism-booklet-here-s-why-the-controversy-erupted-117100300250_1.html

https://twitter.com/pbtcult/status/914861851082551296?ref_src=twsrc%5Etfw&ref_url=http%3A%2F%2Fwww.business-standard.com%2Farticle%2Fcurrent-affairs%2Ftaj-mahal-dropped-from-up-tourism-booklet-here-s-why-the-controversy-erupted-117100300250_1.html

https://twitter.com/AnjaliShastri/status/914892947744727040?ref_src=twsrc%5Etfw&ref_url=http%3A%2F%2Fwww.business-standard.com%2Farticle%2Fcurrent-affairs%2Ftaj-mahal-dropped-from-up-tourism-booklet-here-s-why-the-controversy-erupted-117100300250_1.html

Leave a Reply