ವಿಜಯ್ ಮಲ್ಯ ಅರೆಸ್ಟ್, ಅರ್ಧ ಗಂಟೆಯಲ್ಲೇ ರಿಲೀಸ್!

ಡಿಜಿಟಲ್ ಕನ್ನಡ ಟೀಮ್:

ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಉದ್ದೇಶಿತ ಸುಸ್ಥಿದಾರನಾಗಿ ದೇಶ ಬಿಟ್ಟು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ನನ್ನು ಇಂದು ಲಂಡನ್ ಅಧಿಕಾರಿಗಳು ಹಣ ಅವ್ಯವಹಾರದ ಆರೋಪದಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

ಈ ಹಿಂದೆ ಏಪ್ರಿಲ್ ತಿಂಗಳಲ್ಲೂ ವಿಜಯ್ ಮಲ್ಯ ಅವರನ್ನು ಲಂಡನ್ ಪೊಲೀಸರು ಇದೇ ಮಾದರಿಯಲ್ಲಿ ಬಂಧಿಸಿದ್ದರು. ಆಗ ಜಾಮೀನು ಪಡೆದು ಬಿಡುಗಡೆಯಾಗಿದ್ದ ವಿಜಯ್ ಮಲ್ಯ, ಈಗಲೂ ಬಂಧನವಾದ ಅರ್ಧ ಗಂಟೆಯಲ್ಲೇ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ್ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮಲ್ಯ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲಂಡನ್ನಿನ ಕ್ರೌನ್ ಪ್ರಾಸಿಕ್ಯೂಶನ್ ಗೆ ಸಲ್ಲಿಸಿತ್ತು. ಆ ಮೂಲಕ ಮಲ್ಯನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿತ್ತು. ಆದರೆ, ತನ್ನ ಆರೋಪಗಳನ್ನು ನಿರಾಕರಿಸಿರುವ ವಿಜಯ್ ಮಲ್ಯ ಯಶಸ್ವಿಯಾಗಿಯೇ ಕಾನೂನಿನ ಸಮರದಲ್ಲಿ ಮೇಲುಗೈ ಸಾಧಿಸುತ್ತಿದ್ದಾನೆ.

Leave a Reply