ಮುಂದಿನ ಏಪ್ರಿಲ್ ನಲ್ಲಿ ಮುದ್ರಣವಾಗುತಂತೆ ಹೊಸ ₹100 ನೋಟು

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ನೂತನ ₹50 ಹಾಗೂ ₹200 ರ ನೋಟುಗಳನ್ನು ಮುದ್ರಿಸಿ ಬಿಡುಗಡೆ ಮಾಡಿದ್ದ ಆರ್ ಬಿಐ, ಮುಂದಿನ ಏಪ್ರಿಲ್ ನಲ್ಲಿ ಹೊಸ ₹ 100 ನೋಟಿನ ಮುದ್ರಣ ಆರಂಭಿಸಲಿದೆ ಎಂಬ ವರದಿಗಳು ಬಂದಿವೆ.

ಸದ್ಯಕ್ಕೆ ಹೊಸ ₹ 200 ನೋಟುಗಳ ಮುದ್ರಣ ನಡೆಯುತ್ತಿದ್ದು, ಇದು ಪೂರ್ಣಗೊಂಡ ನಂತರ ಹೊಸ ₹ 100ರ ನೋಟು ಮುದ್ರಣವಾಗಲಿದೆಯಂತೆ. ಪ್ರಸ್ತುತದಲ್ಲಿರುವ ₹ 100 ನೋಟು ಚಲಾವಣೆಯಲ್ಲಿ ಮುಂದುವರಿಯಲಿದ್ದು, ಹೊಸ ನೋಟು ಮುದ್ರಣವಾದ ನಂತರ ಕ್ರಮೇಣವಾಗಿ ಹಳೆ ನೋಟನ್ನು ಹಿಂಪಡೆಯಲಾಗುತ್ತದೆ ಎಂದು ಆರ್ ಬಿಐ ಮೂಲಗಳು ತಿಳಿಸಿರುವುದಾಗಿ ಮಿಂಟ್ ವರದಿ ಮಾಡಿದೆ.

ಇನ್ನು ದೇಶದಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತಿರುವ ಈ ₹ 100ರ ನೋಟಿನ ಗಾತ್ರವನ್ನು ಹಾಗೆ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಎಟಿಎಂಗಳಲ್ಲಿ ಸುಲಭವಾಗಿ ಹೊಂದಿಕೊಳ್ಳುವಂತಾಗಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸದ್ಯ ಚಲಾವಣೆಯಲ್ಲಿರುವ ಎಲ್ಲಾ ಮೌಲ್ಯದ ನೋಟುಗಳನ್ನು ಕ್ರಮೇಣವಾಗಿ ಬದಲಾವಣೆ ಮಾಡಲಾಗುವುದು ಎಂದು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ಆರ್ ಬಿಐ ತಿಳಿಸಿತ್ತು. ಅದರಂತೆ ₹ 50ರ ನೋಟು ಮುದ್ರಣ ಮಾಡಿದ್ದು, ಹೊಸ ₹200ರ ನೋಟನ್ನು ಬಿಡುಗಡೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಮುಂದಿನ ಏಪ್ರಿಲ್ ನಲ್ಲಿ ಹೊಸ ವಿನ್ಯಾಸದ ₹ 100ರ ನೋಟು ಮುದ್ರಣವಾಗಲಿದೆ.

Leave a Reply