ಅಕ್ರಮ ರೊಹಿಂಗ್ಯ ವಲಸಿಗರಿಗೆ ಬ್ರೇಕ್ ಹಾಕಲು 140 ಗಡಿ ಪ್ರದೇಶಗಳಲ್ಲಿ ಸೇನೆ ನಿಯೋಜನೆ, ಭಾರತಕ್ಕೆ ಸಾಥ್ ನೀಡುತ್ತಿದೆ ಬಾಂಗ್ಲಾದೇಶ

ಡಿಜಿಟಲ್ ಕನ್ನಡ ಟೀಮ್:

ದೇಶದೊಳಗೆ ರೋಹಿಂಗ್ಯರ ಅಕ್ರಮ ನುಸುಳುವಿಕೆ ತಪ್ಪಿಸಲು ಭಾರತ ಬಾಂಗ್ಲಾದೇಶದ 140 ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದೆ.

ಗಡಿ ಪ್ರದೇಶದಲ್ಲಿ ಕೆಲವು ಗುಂಪುಗಳಿಂಗ ಅಕ್ರಮವಾಗಿ ರೊಹಿಂಗ್ಯ ನಿರಾಶ್ರಿತರನ್ನು ದೇಶದೊಳಗೆ ನುಸುಳಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಈಗ ಈ ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಬಾಂಗ್ಲಾ ಗಡಿಪ್ರದೇಶದುದ್ದಕ್ಕೂ, 140ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದೆ. ಅಲ್ಲದೆ ಗಡಿ ಕಾಯುವ ಯಂತ್ರೋಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲಾಗಿದೆ.

ಭಾರತದೊಳಗೆ ಈಗಾಗಲೇ ಅಕ್ರಮವಾಗಿ ಅನೇಕ ರೊಹಿಂಗ್ಯರು ನುಸುಳಿದ್ದಾರೆ. ಅವರನ್ನು ಮತ್ತೆ ದೇಶದಿಂದ ಹೊರ ಹಾಕುವ ಕುರಿತಾಗಿ ಚರ್ಚೆ ನಡೆಯುತ್ತಿರುವಾಗ ಕೇಂದ್ರ ಸರ್ಕಾರ ಅಕ್ರಮ ವಲಸಿಗರು ನುಸುಳುವುದಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಕೇವಲ ಸೇನೆ ಹಾಗೂ ಕಾವಲು ಯಂತ್ರಘಳ ನಿಯೋಜನೆ ಮಾತ್ರವಲ್ಲದೆ, ಅಕ್ರಮ ವಲಸಿಗರು ದೇಶದೊಳಗೆ ಪ್ರವೇಶಿಸಲು ನೆರವು ನೀಡುತ್ತಿರುವ ಸಂಘಟಿತ ಕೃತ್ಯವನ್ನು ತಡೆಯುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆ ಈ ಕುರಿತಾದ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿರುವುದು. ಗಮನಾರ್ಹ.

ಇತ್ತೀಚೆಗಷ್ಟೇ ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ಬಾಂಗ್ಲಾದೇಶ ಗಡಿ ರಕ್ಷಣಾ ಪಡೆ ನಾಲ್ಕು ದಿನಗಳ ಸಭೆ ನಡೆಸಿದ್ದು, ಎರಡೂ ದೇಶಗಳ ಸೇನಾ ಪಡೆಗಳು ಅಕ್ರಮ ವಲಸೆಯನ್ನು ತಡೆಗಟ್ಟಲು ಸಹಕಾರ ನೀಡಲು ನಿರ್ಧರಿಸಿವೆ. ಈಗ ಈ ಸಭೆಯ ಬೆನ್ನಲ್ಲೇ ಗಡಿ ಭದ್ರತಾ ಪಡೆ ಈ ನಿರ್ಧಾರ ತೆಗೆದುಕೊಂಡಿದೆ.

ಸದ್ಯ ರೋಹಿಂಗ್ಯರ ವಿಚಾರವಾದಿ ಎರಡು ವಿಚಾರಗಳು ಮಂಡನೆಯಾಗುತ್ತಿವೆ. ಒಂದುವಾದ ಮಾನವತೆಯನ್ನು ಎತ್ತಿ ಹಿಡಿದು, ರೊಹಿಂಗ್ಯರಿಗೆ ಆಶ್ರಯ ನೀಡುವುದಾದರೆ, ಮತ್ತೊಂದೆಡೆ ಕೆಲವು ರೊಹಿಂಗ್ಯರು ಭಯೋತ್ಪಾದನಾ ಸಂಘಟನೆಗಳ ಸಂಪರ್ಕ ಹೊಂದಿದ್ದು, ಇದು ದೇಶಕ್ಕೆ ಮಾರಕವಾಗುವ ಆಂತಕವಾಗಿದೆ. ಹೀಗಾಗಿ ರೊಹಿಂಗ್ಯರ ವಿಚಾರ ಸಾಕಷ್ಟು ಸೂಕ್ಷ್ಮವಾಗಿ ಪರಿಣಮಿಸಿದೆ.

ಇನ್ನು ಅಕ್ರಮ ವಲಸಿಗರನ್ನು ತಡೆಯುವ ಕುರಿತಾಗಿ ಮಾಹಿತಿ ನೀಡಿರುವ ಬಿಎಸ್ಎಫ್ ನ ಪ್ರಧಾನ ನಿರ್ದೇಶಕ ಹೇಳಿದಿಷ್ಟು…

‘ಈ ವಿಚಾರ ಬಹಳ ಗಂಭೀರವಾದುದು ಎಂಬುದನ್ನು ಎರಡೂ ದೇಶಗಳು ಅರಿತಿವೆ. ರೊಹಿಂಗ್ಯರು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿದ್ದಾರೆ. ಅಕ್ರಮ ವಲಸಿಗರಿಂದ ಋಣಾತ್ಮಕ ಪರಿಣಾಮಗಳು ಎದುರಾಗುತ್ತಿರುವುರಿಂದ, ಇದನ್ನು ತಡೆಗಟ್ಟಲು ಎರಡೂ ದೇಶಗಳು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿವೆ. ರೊಹಿಂಗ್ಯರು ಭಾರತದ ಗಡಿಯತ್ತ ಬಾರದಂತೆ ನಾಕಾಬಂಧಿ ಹಾಗೂ ಚೆಕ್ ಪೊಸ್ಟ್ ಗಳನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಾಂಗ್ಲಾದೇಶ ಭರವಸೆ ನೀಡಿದೆ.

ಭಾರತ ಹಾಗೂ ಬಾಂಗ್ಲಾದೇಶದ 4,096 ಕಿ.ಮೀ ಉದ್ದದ ಗಡಿ ಪ್ರದೇಶಗಳಲ್ಲಿ 140ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೆ ನಮ್ಮ ಇತರೆ ಭದ್ರತಾ ಸಂಸ್ಥೆಗಳಾದ ಗುಪ್ತಚರ ಇಲಾಖೆ ಸಹ ನೆರವು ನೀಡುತ್ತಿದೆ. ಈ ರೊಹಿಂಗ್ಯ ಅಕ್ರಮ ವಲಸಿಗರು ಏಕಾಂಗಿಯಾಗಿ ಗಡಿ ದಾಟಲು ಮುಂದಾಗುವುದಿಲ್ಲ. ಇದರ ಹಿಂದೆ ಸಂಘಟಿತ ಷಡ್ಯಂತ್ರವೇ ಅಡಗಿರುತ್ತದೆ. ಹೀಗಾಗಿ ಗುಪ್ತಚರ ಇಲಾಖೆ ನಮ್ಮ ನೆರವಿಗೆ ಬರಲಿದೆ.’

Leave a Reply