ನವದೆಹಲಿಯ ಸಮೀಪದವರೆಗೂ ಸುರಂಗ ಕೊರೆದ ಪಾಕಿಸ್ತಾನ, ಅಣ್ವಸ್ತ್ರ ಸಂಗ್ರಹದಲ್ಲೂ ಕುತಂತ್ರ

ಡಿಜಿಟಲ್ ಕನ್ನಡ ಟೀಮ್:

ಭಾರತ ವಿರುದ್ಧ ವಿಷಕಾರಿಕೊಂಡೇ ಬರುತ್ತಿರುವ ಪಾಕಿಸ್ತಾನದ ಕುತಂತ್ರಗಳನ್ನು ನೋಡುತ್ತಲೇ ಬಂದಿದ್ದೇವೆ. ಆದರೆ ಈಗ ಪಾಕಿಸ್ತಾನ ಮಾಡಿರುವ ಕುತಂತ್ರ ನಿಜಕ್ಕೂ ಬೆಚ್ಚಿಬೀಳಿಸುವಂತಹದು.

ಪಾಕಿಸ್ತಾನ ತನ್ನ ಅಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವ ಸಲುವಾಗಿ ಭಾರತದ ಸಮೀಪದಲ್ಲಿ ಸುರಂಗವನ್ನು ಕೊರೆದಿದ್ದು, ಇದು ಅಮೃತಸರದಿಂದ ಕೇವಲ 350 ಕಿ.ಮೀ ದೂರದಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಕೇವಲ 750 ಕಿ.ಮೀ ದೂರದಲ್ಲಿದೆ. ಅಣು ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಅನೇಕ ಸುರಂಗಗಳನ್ನು ಕೊರೆಯಲಾಗಿದ್ದು, ಒಂದಕ್ಕೊಂದು ಸಂಪರ್ಕಹೊಂದಿವೆ. ಈ ಕುರಿತಾಗಿ ವಿಯಾನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ಕೇವಲ ತನ್ನ ಪ್ರದೇಶದಲ್ಲಿ ಈ ಸುರಂಗವನ್ನು ಕೊರೆದುಕೊಂಡಿಲ್ಲ. ಬದಲಾಗಿ ಭಾರತದ ಗಡಿಯನ್ನು ದಾಟಿರುವ ಬಗ್ಗೆಯೂ ವರದಿಗಳು ಬಂದಿವೆ. ಸೆಪ್ಟೆಂಬರ್ ತಿಂಗಳಲ್ಲಿ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ರೇಂಜರ್ಸ್ ನಡುವೆ ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ಸ್ಥಾಪಿಸಬೇಕು ಎಂಬ ಉದ್ದೇಶಕ್ಕಾಗಿ ನಡೆದ ಸಭೆಯ ಮರು ದಿನವೇ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನದಿಂದ ಜಮ್ಮು ಕಾಶ್ಮೀರದ ಅರ್ನಿಯಾ ಪ್ರದೇಶದವರೆಗೂ ಸುರಂಗ ಕೊರೆದಿರುವುದನ್ನು ಪತ್ತೆ ಹಚ್ಚಿದ್ದಾರೆ.

ಇನ್ನು ಕಳೆದ ವರ್ಷ ಸ್ಟಾಕ್ಲೊಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ತ್ ಇಂನ್ಸ್ ಟಿಟ್ಯೂಷನ್ ಪ್ರಕಟಿಸಿದ್ದ ವರದಿಯ ಪ್ರಕರಾರ ಪಾಕಿಸ್ತಾನ ಹೆಚ್ಚಿನ ಪ್ರಮಾಣದಲ್ಲಿ ಅಣ್ವಸ್ತ್ರ ತಯಾರಿಸುತ್ತಿದ್ದು, ಈವರೆಗೂ 140 ಅಣ್ವಸ್ತ್ರವನ್ನು ತಯಾರಿಸಿರುವುದಾಗಿ ವರದಿ ಮಾಡಿತ್ತು.

ಇನ್ನು ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹಕ್ಕಾಗಿ ಕೇವಲ ಒಂದು ಸುರಂಗ ಮಾತ್ರ ಕೊರೆದಿಲ್ಲ. ಅನೇಕ ಸುರಂಗಗಳನ್ನು ಕೊರೆದಿದ್ದು, ಈ ಸುರಂಗಗಳಿಗೆ ಅಗಲವಾದ ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ಸಂಗ್ರಹ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಎರೆಕ್ಟರ್ ಲಾಂಚರ್ ಗಳನ್ನು ಸುಲಭವಾಗಿ ಸ್ಥಳಾಂತರಿಸುವ ಸಲುವಾಗಿ ಈ ರಸ್ತೆ ಸಂಪರ್ಕ ನಿರ್ಮಿಸಲಾಗಿದೆ. ಈ ಸುರಂಗಗಳು 10 ಮೀಟರ್ ಎತ್ತರ 10 ಮೀಟರ್ ಅಗಲವಿದ್ದು, ಇವುಗಳಿಗೆ ಯಾವುದೇ ರೀತಿಯ ಹಾನಿಗಳಾಗಬಾರದು ಎಂಬ ಕಾರಣಕ್ಕಾಗಿ ದೊಡ್ಡ ಪ್ರಮಾಣದ ಗೋಡೆಗಳನ್ನು ನಿರ್ಮಿಸಿದ್ದು,ಪ್ರತಿ ಸುರಂಗದಲ್ಲೂ 12ರಿಂದ 24 ಅಣ್ವಸ್ತ್ರಗಳನ್ನು ಶೇಖರಿಸಿಡುವ ಅವಕಾಶ ಮಾಡಲಾಗಿದೆ.

ಪಾಕಿಸ್ತಾನ ಈ ಸುರಂಗಗಳನ್ನು ಭಾರತಕ್ಕೆ ಸಮೀಪವಾಗುವಂತೆ ನಿರ್ಮಿಸಿರುವುದರ ಜತೆಗೆ ಕೆಲವು ಸುರಂಗಗಳನ್ನು ಭಾರತದ ಗಡಿಯೊಳಗೂ ಕೊರೆದಿರುವ ಆತಂಕ ಎದುರಾಗಿದೆ. ಒಂದು ವೇಳೆ ಈ ಸುರಂಗಗಳು ಹಾನಿಯಾಗಿ ಅಣ್ವಸ್ತ್ರಗಳ ಸ್ಫೋಟಿಸದರೆ, ಅದರ ಪರಿಣಾಮ ಭಾರತದ ಮೇಲೂ ಹೆಚ್ಚಾಗಿ ಬೀರಲಿದೆ.

Leave a Reply