ದೀಪಾವಳಿ ಪ್ರಯುಕ್ತ ಜಿಯೋನಿಂದ ಗ್ರಾಯಕರಿಗೆ ಮತ್ತೆ ಧನ್ ಧನಾ ಧನ್! ಏನಿದು ಹೊಸ ಆಫರ್?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವರ್ಷದಿಂದ ಭಾರತೀಯ ಟೆಲಿಕಾಂ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಡಾಟಾ ಸೌಲಭ್ಯ ನೀಡುತ್ತಿರುವ ರಿಲಾಯನ್ಸ್ ಜಿಯೋ ಈಗ ದೀಪಾವಳಿ ಹಬ್ಬದ ಕೊಡುಗೆಯಾಗಿ ಮತ್ತೊಮ್ಮೆ ಗ್ರಾಹಕರಿಗೆ ಧನ್ ಧನಾ ಧನ್ ಯೋಜನೆಯನ್ನು ನೀಡುತ್ತಿದೆ. ಈ ಹೊಸ ಯೋಜನೆಯಲ್ಲಿ ₹ 399 ಗೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಜಿಯೋ ಶೇ.100 ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ.

ಇಂದಿನಿಂದ ಅಂದರೆ, ಅಕ್ಟೋಬರ್ 12ರಿಂದ ಆರಂಭವಾಗಲಿರುವ ಈ ಯೋಜನೆ ಅಕ್ಟೋಬರ್ 18ಕ್ಕೆ ಮುಕ್ತಾಯಗೊಳ್ಳಲಿದೆ. ಇಂದಿನಿಂದ ಒಂದುವಾರದ ಒಳಗೆ ₹ 399 ಕ್ಕೆ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಸಂಪೂರ್ಣ ಹಣವನ್ನು ವಾಪಸ್ ನೀಡಲಾಗುವುದು. ಇದು ಸೀಮಿತ ಆಫರ್ ಆಗಿರುವುದರಿಂದ ಅಕ್ಟೋಬರ್ 18ರ ನಂತರ ರೀಚಾರ್ಜ್ ಮಾಡಿಸಿದರೆ ಈ ಕ್ಯಾಶ್ ಬ್ಯಾಕ್ ಸಿಗುವುದಿಲ್ಲ.

ಈ ರೀಚಾರ್ಜ್ ಅನ್ನು ಆಫ್ ಲೈನ್ ಹಾಗೂ  ಆನ್ ಲೈನ್ ಮೂಲಕವೂ ಮಾಡಿಕೊಳ್ಳಬಹುದಾಗಿದೆ. ಗ್ರಾಹಕರು, ಮೈಜಿಯೋ ಆ್ಯಪ್ ಜತೆಗೆ ಜಿಯೋ.ಕಾಂ ವೆಬ್ ಸೈಟ್, ಜಿಯೋ ಸ್ಟೋರ್, ರಿಲಾಯನ್ಸ್ ಡಿಜಿಟಲ್, ಜಿಯೋ ಮನಿ, ಅಮೇಜಾನ್ ಪೇ, ಪೇಟಿಎಂ, ಮೊಬಿಕ್ವಿಕ್ ಮೂಲಕವೂ ಬಳಸಿಕೊಳ್ಳಬಹುದಾಗಿದೆ.

Leave a Reply