ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತರ ರೇಖಾ ಚಿತ್ರ ಪ್ರಕಟಿಸಿದ ಪೊಲೀಸ್

ಡಿಜಿಟಲ್ ಕನ್ನಡ ಟೀಮ್:

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ 40 ದಿನ ಕಳೆದ ನಂತರ ಪೊಲೀಸರು ಶಂಕಿತ ಕೊಲೆಗಾರರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ರೇಖಾಚಿತ್ರ ಬಿಡುಗಡೆ ಮಾಡುವುದರ ಜತೆಗೆ ಸಾರ್ವಜನಿಕರು ಈ ಶಂಕಿತರನ್ನು ಹಿಡಿಯಲು ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತನಿಖೆಯಲ್ಲಿ ಲಭ್ಯವಾದ ಮಾಹಿತಿ ಆಧಾರದ ಮೇಲೆ ಹಾಗೂ ಗೌರಿ ಲಂಕೇಶ್ ಅವರ ಕೊಲೆಗೂ ಮುನ್ನ ಅವರ ಮನೆ ಮುಂದೆ ಅನುಮಾನಾಸ್ಪದವಾಗಿ ಓಡಾಡಿರುವವರ ಸಿಸಿಟಿವಿ ದೃಶ್ಯಗಳನ್ನು ಆಧಾರಿಸಿ ಈ ರೇಖಾಚಿತ್ರವನ್ನು ಬರೆಯಲಾಗಿದೆ.

ಈ ಶಂಕಿತರ ಬಗ್ಗೆ ಯಾರಿಗಾದರು ಸುಳಿವು ಸಿಕ್ಕರೆ ತಕ್ಷಣವೇ ಈ ಕೆಳಗಿನ ವಿಳಾಸಕ್ಕೆ ತಿಳಿಸಬೇಕು ಎಂದು ಮನವಿ ಮಾಡಲಾಗಿದೆ. ವಿಳಾಸ ಹೀಗಿದೆ…

ಕೊಠಡಿ ಸಂಖ್ಯೆ-104,

ವಿಶೇಷ ತನಿಖಾ ತಂಡ, ಸಿಐಡಿ ಕಚೇರಿ,

ಮೊಬೈಲ್ ಸಂಖ್ಯೆ- 9480800202,

ಇ ಮೇಲ್ ವಿಳಾಸ: sit.glankesh@ksp.gov.in

ವಾಟ್ಸಪ್ ಸಂಖ್ಯೆ: 9480800304, 9480801701

Leave a Reply