ಮೇಕ್ ಇನ್ ಇಂಡಿಯಾದಲ್ಲಿ ನಿರ್ಮಾಣಗೊಂಡ ಐಎನ್ಎಸ್ ಕಿಲ್ತಾನ್ ನೌಕಾಪಡೆಗೆ ಅರ್ಪಣೆ, ಏನಿದರ ವಿಶೇಷತೆಗಳು?

ಡಿಜಿಟಲ್ ಕನ್ನಡ ಟೀಮ್:

ಮೇಕ್ ಇಂಡಿಯಾ ಕಾರ್ಯಕ್ರಮದ ಮೂಲಕ ನಿರ್ಮಾಣಗೊಂಡಿರುವ ಐಎನ್ಎಸ್ ಕಿಲ್ತಾನ್ ಎಂಬ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಇಂದು ಸೇನೆಗೆ ಅರ್ಪಿಸಿದ್ದಾರೆ.

ಪೂರ್ವ ವಾಯು ಪಡೆ ಕೇಂದ್ರದ ವಿಶಾಖಪಟ್ಟಣದಲ್ಲಿ ಐಎನ್ಎಸ್ ಈ ಜಲಾಂತರ್ಗಾಮಿ ನಿಗ್ರಹ ನೌಕೆಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿದ್ದು, ಭಾರತದಲ್ಲಿ ನಿರ್ಮಾಣಗೊಂಡ ಅತ್ಯುನ್ನತ ಗುಣಮಟ್ಟದ ಜಲಾಂತರ್ಗಾಮಿ ನಿಗ್ರಹ ನೌಕೆಯಾಗಿದೆ. ಈ ಹಿಂದೆ ಶಿವಾಲಿಕ್ ಕ್ಲಾಸ್, ಕೋಲ್ಕತಾ ಕ್ಲಾಸ್ ಮತ್ತು ಐಎನ್ಎಸ್ ಕಮೊರ್ಟಾ ಮತ್ತು ಐಎನ್ಎಸ್ ಕಡ್ಮಟ್ ನಂತರ ಸೇನೆಗೆ ಸೇರ್ಪಡೆಗೊಂಡ ನೌಕೆ ಇದಾಗಿದೆ.

ಈ ನೌಕೆಯನ್ನು ಸೇನೆಗೆ ಅರ್ಪಿಸಿ ಮಾತನಾಡಿದ ರಕ್ಷಣಾ ಮಂತ್ರಿ ನಿರ್ಮಲಾ ಸೀತರಾಮನ್, ‘ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿರುವ ಈ ಜಲಾಂತರ್ಗಾಮಿ ನಿಗ್ರಹ ನೌಕೆ ಭಾರತೀಯ ಪಡೆಯ ಬಲವನ್ನು ಹೆಚ್ಚಿಸಿದೆ’ ಎಂದಿದ್ದಾರೆ.

ಇನ್ನು ಈ ಐಎನ್ಎಸ್ ಕಿಲ್ತಾನ್ ವಿಶೇಷತೆಗಳೇನು ಅಂತಾ ನೋಡೋದಾದ್ರೆ…

  • ಐಎನ್ಎಸ್ ಕಿಲ್ತಾನ್ ಭಾರತದ ಮೊದಲ ಅತ್ಯಾಧುನಿಕ ಯುದ್ಧ ಜಲಾಂತರ್ಗಾಮಿ ನಿಗ್ರಹ ನೌಕೆ. ಕಾರ್ಬನ್ ಫೈಬರ್ ನ ಆಧುನಿಕ ತಂತ್ರಜ್ಞಾನದ ರಚನೆಯನ್ನು ಹೊಂದಿರುವ ಈ ನೌಕೆ ರಹಸ್ಯವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ.
  • ಈ ನೌಕೆಯ ಮೇಲ್ಭಾಗ ಹಗುರವಾಗಿದ್ದು, ಇದರ ನಿರ್ವಹಣೆಯ ಖರ್ಚು ಕಡಿಮೆ ಪ್ರಮಾಣದ್ದಾಗಿದೆ.
  • ಇದರಲ್ಲಿ ದೊಡ್ಡ ಗಾತ್ರದ ಹಡಗು ಸಿಡಿತ, ಎಎಸ್ ಡಬ್ಲ್ಯೂ ರಾಕೆಟ್, 76 ಎಂಎಂ ಮಧ್ಯಮ ಹಂತದ ಗನ್ ಮತ್ತು ಎರಡು ಮಲ್ಟಿ ಬ್ಯಾರೆಲ್ 30 ಎಂಎಂ ಗನ್ ಗಳು ಈ ನೌಕೆಯ ಅಸ್ತ್ರಗಳಾಗಿವೆ.
  • ಬೆಂಕಿ ನಿಯಂತ್ರಣ ವ್ಯವಸ್ಥೆ, ಕ್ಷಿಪಣಿ ಪತ್ತೆಹಚ್ಚಿ ಉಡಾಯಿಸುವ ರಾಕೆಟ್, ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಪೊರ್ಟ್ ಮೆಷರ್ ಸಿಸ್ಟಮ್ ವ್ಯವಸ್ಥೆಗಳನ್ನು ಈ ನೌಕೆ ಹೊಂದಿದೆ.
  • ಭವಿಷ್ಯದಲ್ಲಿ ಈ ನೌಕೆಯಲ್ಲಿ ಎಸ್ಎಎಂ ವ್ಯವಸ್ಥೆ, ಎಎಸ್ ಡಬ್ಲ್ಯೂ ಹೆಲಿಕಾಪ್ಟರ್ ಗಳನ್ನು ಹೊಂದುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Leave a Reply