ಬಿಗ್ ಬಾಸ್ ಮೊದಲ ವಾರವೇ ಹೊರಗೆ ಬರೋರ್ಯಾರು?

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ ಸೀಸನ್ 5 ಕಳೆದ ಭಾನುವಾರ ಕಿಚ್ಚನ ನೇತೃತ್ವದಲ್ಲಿ ಶುರುವಾಗಿದ್ದು, ಈಗಾಗಲೇ ಮೂರು ದಿನಗಳು ಕಳೆದು ಹೋಗಿದೆ. ಈಗಷ್ಟೇ ಜನರನ್ನು ಆಕರ್ಷಿಸುವ ಪ್ರಯತ್ನದಲ್ಲಿರುವ ಸ್ಪರ್ಧಿಗಳ ಪೈಕಿ ಈ ವಾರ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ. ಇದರಿಂದ ಹಲವು ಸ್ಪರ್ಧಿಗಳ ಮನಸ್ಸಲ್ಲಿ ಆತಂಕ ಮನೆ ಮಾಡಿದೆ.

ಆದ್ರೆ ಈ ವಾರ ಹೆಚ್ಚು ಕಡಿಮೆ ಎಲ್ಲರು ನಾಮಿನೇಟ್ ಆಗಿದ್ದು ಅದರಲ್ಲಿ‌ ಸ್ವಲ್ಪ ಕಡಿಮ ಮನರಂಜನೆ ಕೊಡ್ತಿರೋ ಹುಡುಗಿ ಮನೆಯಿಂದ ಹೊರ ಹೋಗುವುದು ನಿಶ್ಚಿತವಾಗ್ತಿದೆ. ಅದರಲ್ಲಿ ಬಾಬಿಡಾಲ್ ನಿವೇದಿತ ಗೌಡ ಕೂಡ ಇದ್ದಾರೆ. ಕೆಲವು ಸ್ಪರ್ಧಿಗಳ ಮುಂದೆ ಬಾಬಿಡಾಲ್ ತನ್ನ ಭಯವನ್ನು ವ್ಯಕ್ತಪಡಿಸಿದ್ದು, ಜನ ಉಳಿಸ್ತಾರಾ ಅನ್ನೋ ಮಾತುಗಳನ್ನು ಆಡಿದ್ದಾರೆ. ಅದೇ ರೀತಿ ಮುಂಬೈ ಕನ್ನಡತಿ ಶೃತಿ ಕೂಡ ಭೀತಿಯಲ್ಲಿದ್ದಾರೆ. ಇನ್ನುಳಿದಂತೆ ಸೇಲ್ಸ್ ಮೆನ್ ದಿವಾಕರ್, ಕೂರ್ಗಿ ಗರ್ಲ್ ಮೇಘ ಇದೇ ಮೂಡಲ್ಲಿ ಇರೋದು ಸ್ಪಷ್ಟವಾಗಿದೆ.

ಬಾಬಿಡಾಲ್ ನಿವೇದಿತಗೌಡ, ಕಳೆದ ಸೀಸನ್ನು ಸಂಜನಾಳನ್ನು ಮೀರಿಸುವ ಉದ್ದೇಶದಿಂದಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದು, ಈಗಾಗಲೇ ಸಾಕಷ್ಟು ಜನರ ಮನಸ್ಸನ್ನು ಕದ್ದಿದ್ದಾರೆ. ಆಕೆಯ ಮಾತು ಕೂಡ ಏನೋ ಒಂದು ರೀತಿ ಇಷ್ಟ ಆಗ್ತಿದೆ. ಇನ್ನು ಮುಂಬೈ ಕನ್ನಡತಿ ಶೃತಿ ಭಾಷೆ ಮುಸ್ಲಿಂ ಕನ್ನಡ ರೀತಿಯಲ್ಲಿ ಇರೋದು ಗಮನಸೆಳೆಯುತ್ತದೆ. ಹೀಗಾಗಿ ಶೃತಿ ಕೂಡ ಸದ್ಯಕ್ಕೆ ಮನೆ ಖಾಲಿ ಮಾಡುವ ಸಾಧ್ಯತೆ ಕಡಿಮೆ. ಇನ್ನು ದಿವಾಕರ್ ಕರೆತಂದಿರೋ ಉದ್ದೇಶವೇ ಲಾಸ್ಟ್ ಸೀಸನ್ ಪ್ರಥಮ್ ಸ್ಥಾನ ಭರ್ತಿ ಮಾಡುವ ಉದ್ದೇಶದಿಂದ, ಅದು ಈಗಾಲೇ ಸೂಕ್ಷ್ಮವಾಗಿ ನೋಡಿದಾಗ ಗೊತ್ತಾಗುತ್ತಿದೆ. ಹಾಗಾಗಿ ದಿವಾಕರ್ ಕೂಡ ಕಾಯಂ. ಇನ್ನೂ ಬರುವಾಗ ತುಂಬಾ ಘಾಟಿ ಹುಡುಗಿ ರೀತಿ ಎಂಟ್ರಿ ತೆಗೆದುಕೊಂಡ ಮೇಘ ಈ ಮೂರು ದಿನ ತುಂಬಾ ಸೈಲೆಂಟ್ ಆಗಿ ಕಾಲ ಕಳೆದಿದ್ದಾರೆ. ಯಾರೊಂದಿಗೂ ಅಷ್ಟೊಂದು ಮಿಂಗಲ್ ಆಗ್ತಿಲ್ಲ. ತಮಾಷೆ, ಹರಟೆ ಯಾವುದೂ ಕಾಣ್ತಿಲ್ಲ. ಇನ್ನು ಉಳಿಯಬೇಕಾದ ಯಾವ ಅಂಶ ಇವರನ್ನು ಪಾರು ಮಾಡಲಿದೆ ಅನ್ನೋ ಕಿಚ್ಚನ್ನ ಕಾದು ನೋಡಬೇಕು.

Leave a Reply